ಅಸ್ಸಾಂನಲ್ಲಿ 60 ಸ್ಥಾನಗಳಲ್ಲಿ ಮುನ್ನಡೆ, ಗೆಲುವಿನ ಅಂಚಿನಲ್ಲಿ ಬಿಜೆಪಿ
ದಿಸ್ಪುರ, ಮೇ 2: ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಪೂರ್ಣ ಬಹುಮತದತ್ತ ಹೆಜ್ಜೆ ಹಾಕಿದೆ. ಒಟ್ಟು 126 ಸ್ಥಾನಗಳ ಪೈಕಿ 26 ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Recommended Video
ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಮತ್ತು ರಾಜ್ಯ ಹಣಕಾಸು ಮತ್ತು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಕ್ರಮವಾಗಿ ಮಜೌಲಿ ಮತ್ತು ಜಲುಕ್ಬರಿ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಸಿಎಎ ವಿರೋಧಿ ಹೋರಾಟಗಾರ ಅಖಿಲ್ ಗೊಗೊಯ್ , ಸಿಬ್ಸಾಗರ್ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಸ್ಸಾಂನಲ್ಲಿ ಬಹುಮತಕ್ಕೆ 64 ಕ್ಷೇತ್ರಗಳಲ್ಲಿ ಗೆಲುವು ಅಗತ್ಯ. ಅಸ್ಸಾಂನಲ್ಲಿ ಮಾರ್ಚ್ 27, ಏಪ್ರಿಲ್ 1 ಹಾಗೂ ಏಪ್ರಿಲ್ 6 ರಂದು ಮೂರು ಹಂತದಲ್ಲಿ ಚುನಾವಣೆ ನಡೆದಿತ್ತು. ಒಟ್ಟಾರೆ ಶೇ.82.04 ರಷ್ಟು ಮತದಾನದ ಮೂಲಕ ಗಮನ ಸೆಳೆದಿತ್ತು.

ಅಸ್ಸಾಂನಲ್ಲಿ ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ ಮತ್ತೆ ಸರ್ಕಾರ ರಚಿಸಲಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯದ ಟ್ರೆಂಡ್ ಪ್ರಕಾರ, ಬಿಜೆಪಿ ಯುನೈಟೆಡ್ ಫೀಪಲ್ಸ್ ಪಾರ್ಟಿ ಲಿಬರಲ್ ಜೊತೆಗೂಡಿ ಸರ್ಕಾರ ರಚಿಸಲಿದೆ ಎಂದು ಸೊನೊವಾಲ್ ತಿಳಿಸಿದ್ದಾರೆ. ಇದು ಜನರ ಬೆಂಬಲದಿಂದ ಸಿಕ್ಕ ಗೆಲುವು. ಮತ ಎಣಿಕೆ ಪೂರ್ಣಗೊಳ್ಳುವವರೆಗೂ ಕಾಯುತ್ತೇವೆ. ಆದರೆ, ಸದ್ಯದ ಅಂಕಿ ಅಂಕಿಗಳ ಪ್ರಕಾರ ಗೆಲುವು ನಮ್ಮ ಕಡೆ ಇದೆ ಎಂದು ಅವರು ಹೇಳಿದ್ದಾರೆ.
ಅಸ್ಸಾಂ 126 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಮಜೌಲಿ ಕ್ಷೇತ್ರದಲ್ಲಿ ಸೊನೊವಾಲ್ ಮುನ್ನಡೆ ಕಾಯ್ದುಕೊಂಡಿದ್ದಾರೆ.












Click it and Unblock the Notifications