ಪದ್ಮಶ್ರೀ ವಿಜೇತ ಕಾರ್ಟೂನಿಸ್ಟ್ ಸುಧೀರ್ ವಿಧಿವಶ

Posted By:
Subscribe to Oneindia Kannada

ಗುರ್ ಗಾಂವ್, ಫೆ. 06: ಪದ್ಮಶ್ರೀ ವಿಜೇತ ಕಾರ್ಟೂನಿಸ್ಟ್ ಸುಧೀರ್ ತೈಲಾಂಗ್ ಅವರನ್ನು ಮೆದುಳಿನ ಗೆಡ್ಡೆ (brain tumour) ಬಲಿ ಪಡೆದುಕೊಂಡಿದೆ. ಇಲ್ಲಿನ ಮೇದಾಂತ ಆಸ್ಪತ್ರೆಯಲ್ಲಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದ ಸುಧೀರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಾಜಸ್ಥಾನದ ಬಿಕಾನೇರ್ ನಲ್ಲಿ ಜನಿಸಿದ ಸುಧೀರ್ ಅವರು ಮುಂಬೈನಲ್ಲಿ 1982ರಲ್ಲಿ ಇಲಸ್ಟೇಟೆಡ್ ವೀಕ್ಲಿ ಆಫ್ ಇಂಡಿಯಾದಲ್ಲಿ ಮೊದಲಿಗೆ ಉದ್ಯೋಗಕ್ಕೆ ಸೇರಿಕೊಂಡರು.

Padma Shri recipient cartoonist Sudhir Tailang passes away

ನಂತರ ನವಭಾರತ್ ಟೈಮ್ಸ್, ಹಿಂದೂಸ್ತಾನ್ ಟೈಮ್ಸ್, ಕೆಲಕಾಲ ಇಂಡಿಯನ್ ಎಕ್ಸ್ ಪ್ರೆಸ್ ಹಾಗೂ ಟೈಮ್ ಆಫ್ ಇಂಡಿಯಾನಲ್ಲಿ ಕಾರ್ಯ ನಿರ್ವಹಿಸಿದ್ದರು. ಕೊನೆಯದಾಗಿ ಏಷ್ಯನ್ ಏಜ್ ನಲ್ಲಿ ಕಾರ್ಟೂನಿಸ್ಟ್ ಆಗಿದ್ದರು.

ಕಾರ್ಟೂನ್ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಎತ್ತಿ ತೋರಿಸುತ್ತಿದ್ದ ಸುಧೀರ್ ಅವರ ನಿಧನಕ್ಕೆ ಅವರ ಅಭಿಮಾನಿಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಸುಧೀರ್ ಅವರ ಸಾಧನೆ ಮೆಚ್ಚಿ ಕೇಂದ್ರ ಸರ್ಕಾರ 2004ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Well known cartoonist Sudhir Tailang, who was suffering from a brain tumour passed away at Medanta Hospital in Gurgaon today(Feb 06).
Please Wait while comments are loading...