ದೋಷಪೂರಿತ ಫೋರ್ಡ್ ಕಾರು: ಖರೀದಿದಾರರೇ ಹುಷಾರು

ದೆಹಲಿ, ಗುರಗಾಂವ್, ಸೆ.14: ಭಾರತದಲ್ಲಿ ಉತ್ಪಾದನೆಯಾಗಿ ಮಾರಾಟವಾಗಿರುವ 1,66,021 ಕಾರುಗಳನ್ನು ಕಂಪನಿಯು ವಾಪಸ್ ಪಡೆಯಲು ನಿರ್ಧರಿಸಿದೆ. ಇವುಗಳ ಪೈಕಿ ನಿಮ್ಮ ಕಾರು ಇದ್ದರೂ ಇರಬಹುದು. ಯಾವುದಕ್ಕೇ ಆಗಲಿ ಒಮ್ಮೆ ನಿಮ್ಮ ಕಾರನ್ನು ಪರೀಕ್ಷಿಸಿ ನೋಡಿ.

ಜನವರಿ 2010 ಮತ್ತು ಜೂನ್ 2012ರ ಮಧ್ಯೆ ಮಾರಟವಾಗಿರುವ ದೋಷಪೂರಿತ 1,66,021 ಕಾರುಗಳನ್ನು ಕಂಪನಿಯು ಸ್ವಯಂಪ್ರೇರಿತವಾಗಿ ವಾಪಸ್ ಪಡೆಯಲಿದೆ. ಅದರಲ್ಲೂ Figo ಮತ್ತು Classic Sedan ಮಾದರಿ ಫೋರ್ಡ್ ಕಾರುಗಳು ದೋಷಪೂರಿತವಾಗಿವೆ.

Manufacturing Defect- Ford India recalls 166021 units of Figo and Classic sedan cars

ಕುತೂಹಲ ಮತ್ತು ಸಮಾಧಾನಕರ ಸಂಗತಿಯೆಂದರೆ ಈ ದೋಷಪೂರಿತ ಕಾರುಗಳು ರಸ್ತೆಯಲ್ಲಿ ಸಂಚಾರದಲ್ಲಿದ್ದರೂ ಇದುವರೆಗೂ ಯಾವುಗೂ ಅಪಘಾತಕ್ಕೀಡಾದ ಸುದ್ದಿ ಬಂದಿಲ್ಲ! ಆದರೆ ಇಂತಹ ಅಚಾತುರ್ಯಕ್ಕೆ ಕಾರಣಕರ್ತರಾದ ಆಯಕಟ್ಟಿನ ಜಾಗಗಳಲ್ಲಿರುವ ಸಿಬ್ಬಂದಿಯ ಉದ್ಯೋಗಕ್ಕೆ ಖಂಡಿತಾ ಸಂಚಕಾರ ಬಂದಿರುತ್ತದೆ.

Steering ಮತ್ತು rear suspensionನಲ್ಲಿ ದೋಷಗಳು ಕಾಣಿಸಿಕೊಂಡಿವೆ. ಜತೆಗೆ, rear twist beam ಮತ್ತು steering hoseನಲ್ಲೂ ದೋಷ ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯೊಂದು ಬೃಹತ್ ಪ್ರಮಾಣದಲ್ಲಿ ತನ್ನ ಕಾರುಗಳನ್ನು ವಾಪಸ್ ಪಡೆದಿರುವುದು ದೇಶದಲ್ಲಿ ಇದೇ ಮೊದಲು.

ಒಂದು ವೇಳೆ ಇವುಗಳಲ್ಲಿ ದೋಷ ಕಂಡುಬಂದಿರುವುದು ದೃಢಪಟ್ಟರೆ ಅವುಗಳನ್ನು ಕಂಪನಿಯೇ ಬದಲಿಸಿಕೊಡುತ್ತದೆ. ಅಧಿಕೃತ ಡೀಲರುಗಳ ಮೂಲಕ ಈ ವಾಪಸಾತಿ ಪ್ರಕ್ರಿಯೆ ನಡೆಯಲಿದೆ ಎಂದು Ford India ಕಂಪನಿ ತಿಳಿಸಿದೆ.

ಅಂದಹಾಗೆ ಕಾರು ಉತ್ಪಾದನಾ ಕಂಪನಿಗಳು ಹೀಗೆ ದೋಷಪೂರಿತ ವಾಹನಗಳನ್ನು ವಾಪಸ್ ಪಡೆಯುವುದು ಹೊಸದೇನೂ ಅಲ್ಲ. General Motorsನಂತಹ ವಿಶ್ವಾಸಾರ್ಹ ಕಂಪನಿಯೂ 2005ರಿಂದ ತಯಾರಾದ 1.14 ಕಾರುಗಳನ್ನು ವಾಪಸ್ ಪಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+