ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರಿ ಕಾರುಕೊಳ್ಳಲು ತನ್ನದೇ ಅಪಹರಣದ ವ್ಯೂಹ ರಚಿಸಿದ ಬಾಲಕ!

|
Google Oneindia Kannada News

ಗುರ್ಗಾಂವ್, ಏಪ್ರಿಲ್ 03: ದುಬಾರಿ ಕಾರು ಕೊಳ್ಳುವ ಸಲುವಾಗಿ ಬಾಲಕನೊಬ್ಬ ತನ್ನದೇ ಕಿಡ್ನ್ಯಾಪ್ ನ ಸನ್ನಿವೇಶ ಸೃಷ್ಟಿಸಿ, ತನ್ನದೇ ಕುಟುಂಬದ ಬಳಿ 3 ಕೋಟಿ ರೂ. ಬೇಡಿಕೆ ಇಟ್ಟ ವಿಚಿತ್ರ ಘಟನೆ ಗುರುಗ್ರಾಮ (ಗುರ್ಗಾಂವ್) ನಲ್ಲಿ ನಡೆದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

19 ವರ್ಷ ವಯಸ್ಸಿನ ಸಂದೀಪ್ ಕುಮಾರ್ ಎಂಬ ವಿದ್ಯಾರ್ಥಿ 12 ನೇ ತರಗತಿಯಲ್ಲಿ ಓದುತ್ತಿದ್ದ. ಮಾರ್ಚ್ 29 ರಂದು ಕೃಷ್ಣ ಕಾಲೋನಿಯ ತಮ್ಮ ಮನೆಯಿಂದ ಹೊರಟವನು ನಾಪತ್ತೆಯಾಗಿದ್ದ. ಎಷ್ಟೇ ಹುಡುಕಿದರೂ ಪತ್ತೆಯಾಗಿರಲಿಲ್ಲ.

ತನ್ನದೇ ಅಪಹರಣದ ಸಂಚು ರೂಪಿಸಿದ ಬಾಲಕ! ಹೀಗೊಂದು ಆಪರೇಶನ್ ಅಲಮೇಲಮ್ಮ ಪ್ರಸಂಗ! ತನ್ನದೇ ಅಪಹರಣದ ಸಂಚು ರೂಪಿಸಿದ ಬಾಲಕ! ಹೀಗೊಂದು ಆಪರೇಶನ್ ಅಲಮೇಲಮ್ಮ ಪ್ರಸಂಗ!

ನಂತರ ವ್ಯಕ್ತಿಯೊಬ್ಬರ ಬಳಿ ತನ್ನ ಮನೆಗೆ ಫೋನ್ ಮಾಡಿಸಿ, ಮೂರು ಕೋಟಿ ರೂ. ನೀಡದಿದ್ದರೆ ನಿಮ್ಮ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿಸಿದ್ದ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ತನಿಖೆಯ ಸಂದರ್ಭದಲ್ಲಿ ಸಂದೀಪ್ ಪತ್ತೆಯಾಗಿದ್ದು, ವಿಚಾರಣೆಯ ಸಮಯದಲ್ಲಿ ಪೊಲೀಸರ ಬಳಿಯೂ ನಾಟಕವಾಡಿದ್ದಾನೆ. ಆದರೆ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ಯುವಂತೆ ಕೇಳಿದಾಗ, ಆತನ ಹೇಳಿಕೆಗೂ ವಸ್ತುಸ್ಥಿತಿಗೂ ಹೊಂದಿಕೆಯಾಗದ ಕಾರಣ ಅನುಮಾನ ಬಂದಿದೆ.

Gurugram: class 12 studend creates his own kidnapping plot to buy high end car!

ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಅಪಹರಣದ ಸನ್ನಿವೇಶವನ್ನು ಸಂದೀಪ್ ಸ್ವತಃ ಸೃಷ್ಟಿಸಿದ್ದು ಬೆಳಕಿಗೆ ಬಂದಿದೆ. ವಿಧಿ ಇಲ್ಲದೆ ಆತನೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

English summary
The Gurgaon police has arrested a 19-year-old student for allegedly creating his own kidnapping plot to get Rs 3 crore from his family members in order to buy a high-end car,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X