ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ 15 ಭಾರತದ್ದು!
ಗುರುಗ್ರಾಮ, ಮಾರ್ಚ್ 05: ವಿಶ್ವದ 20 ಅತ್ಯಂತ ಮಾಲಿನ್ಯಯುಕ್ತ ನಗರಗಳ ಪೈಕಿ 15 ಭಾರತದಲ್ಲಿವೇ ಎಂದು ಪರಿಸರ ಎನ್ ಜಿಒ ವೊಂದು ವರದಿ ನೀಡಿದೆ.
ದೆಹಲಿ ಬಳಿಯ ಗುರುಗ್ರಾಮ(ಗುರ್ಗಾಂವ್) ಮತ್ತು ಘಾಜಿಯಾಬಾದ್ ನಗರಗಳು ಅಗ್ರ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದಿವೆ. ಅಂತೆಯೇ ಫರೀದಾಬಾದ್, ನೋಯ್ಡಾ ಸೇರಿದಂತೆ ಭಾರತದ 15 ಕ್ಕೂ ಹೆಚ್ಚು ನಗರಗಳು ಈ ಪಟ್ಟಿಯಲ್ಲಿವೆ.
2018 ರಲ್ಲಿ ಸಮೀಕ್ಷೆಯೊಂದನ್ನು ನಡೆಸಿ ಈ ಪಟ್ಟಿ ತಯಾರಿಸಲಾಗಿದ್ದು, ಭಾರತದ ರಾಜಧಾನಿ ದೆಹಲಿ ಈ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ.

ಅತೀ ಹೆಚ್ಚು ಮಾಲಿನ್ಯಕ್ಕೀಡಾದ ನಗರಗಳ ಪಟ್ಟಿ ಈ ಕೆಳಗಿನಂತಿದೆ.
1. ಗುರುಗ್ರಾಮ(ಗುರ್ಗಾಂವ್), ಭಾರತ
2. ಘಾಜಿಯಾಬಾದ್, ಭಾರತ
3. ಫೈಸಲಾಬಾದ್, ಪಾಕಿಸ್ತಾನ
4. ಫರೀದಾಬಾದ್, ಭಾರತ
5. ಭಿವಾಡಿ, ಭಾರತ
6. ನೋಯ್ಡಾ, ಭಾರತ
7. ಪಾಟ್ನಾ, ಭಾರತ
8. ಹೊಟನ್, ಚೀನಾ
9. ಲಕ್ನೋ, ಭಾರತ
10. ಲಾಹೋರ್, ಪಾಕಿಸ್ತಾನ
11. ದೆಹಲಿ, ಭಾರತ
12. ಜೋಧ್ಪುರ, ಭಾರತ
13. ಮುಜಾಫರ್ಪುರ, ಭಾರತ
14. ವಾರಣಾಸಿ, ಭಾರತ
15. ಮೊರದಾಬಾದ್, ಭಾರತ
16. ಆಗ್ರಾ, ಭಾರತ
17. ಢಾಕಾ, ಬಾಂಗ್ಲಾದೇಶ
18. ಗಯಾ, ಭಾರತ
19. ಕಸ್ಘರ್, ಚೀನಾ
20. ಜಿಂದ್, ಭಾರತ












Click it and Unblock the Notifications