ಗಾಲಿ ರೆಡ್ಡಿ ಮಗ ಕಿರೀಟಿ ರೆಡ್ಡಿ ಪಿಯುನಲ್ಲಿ ಡಿಸ್ಟಿಂಕ್ಷನ್
Recommended Video

ಬೆಂಗಳೂರು, ಏಪ್ರಿಲ್. 30: ಕಬ್ಬಿಣದ ಅದಿರು ಗಣಿಗಾರಿಕೆ ಮೂಲಕ ರಾಜ್ಯ - ರಾಷ್ಟ್ರ ಮತ್ತು ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಗಾಲಿ ಜನಾರ್ದನರೆಡ್ಡಿಯ ಏಕೈಕ ಪುತ್ರ ಜಿ. ಕಿರೀಟಿ ರೆಡ್ಡಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್!. ಅಪ್ಪನಂತೆ ಮಗನೂ ಸಾಧನೆಯ ಹಾದಿಯಲ್ಲಿದ್ದಾನೆ.
ಮನೆಯಲ್ಲಿ ಸದಾಕಾಲ ಗಿಜುಗಿಡುವ ಜನಗಳ ಗುಂಪು, ಅಪ್ಪನ ರಾಜಕೀಯ ಚಟುವಟಿಕೆಗಳು, ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದ ರಂಗುರಂಗಿನ ಸುದ್ದಿಗಳ ಮಧ್ಯೆ ಜಿ. ಜನಾರ್ದನರೆಡ್ಡಿಯ ಏಕೈಕ ಪುತ್ರ ಜಿ. ಕಿರೀಟಿರೆಡ್ಡಿ, ಏಕಾಗ್ರಚಿತ್ತದಿಂದ ದ್ವಿತೀಯ ಪಿಯುಸಿ ವಿಜ್ಞಾನವನ್ನು ಶ್ರದ್ಧೆಯಿಂದ ಓದಿ, 563 ಅಂಕಗಳನ್ನು ಪಡೆಯುವ ಮೂಲಕ ಮನೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿದ್ದಾನೆ.

ಕನ್ನಡ ಭಾಷೆಯಲ್ಲಿ 90, ಇಂಗ್ಲೀಷ್ ಭಾಷೆಯಲ್ಲಿ 90, ಫಿಸಿಕ್ಸ್ ವಿಷಯದಲ್ಲಿ 99, ಕೆಮಿಸ್ಟ್ರಿ ವಿಷಯದಲ್ಲಿ 87, ಗಣಿತದಲ್ಲಿ 98 ಮತ್ತು ಕಂಪ್ಯೂಟರ್ ಸೈನ್ಸ್ ನಲ್ಲಿ 99 ಅಂಕಗಳನ್ನು ಗಳಿಸಿರುವ ಕಿರೀಟಿ, ಒಟ್ಟು 563 ಅಂಕಗಳನ್ನು ಪಡೆದಿದ್ದಾನೆ. ಚಿತ್ರನಟನೆಯಲ್ಲಿ ದಾಪುಗಾಲಿಡುತ್ತಿರುವ ಜಿ. ಕಿರೀಟಿರೆಡ್ಡಿ ಭವಿಷ್ಯದಲ್ಲಿ ಸಿನಿಮಾ ತಾರೆಯಾಗುವ ಕನಸು ಹೊಂದಿದ್ದಾರೆ.












Click it and Unblock the Notifications