'ರ‍್ಯಾಂಬೋ'ಗೆ ಕಂಬನಿಯ ವಿದಾಯ ಹೇಳಿದ ಗದಗ ಪೊಲೀಸ್

ಗದಗ, ಫೆಬ್ರವರಿ 04: 190 ವಿವಿಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಹಿಡಿಯಲು ಪೊಲೀಸರಿಗೆ ನೆರವಾಗಿದ್ದ ಪೊಲೀಸ್ ಇಲಾಖೆಯ 'ರ‍್ಯಾಂಬೋ'ಗೆ ಗದಗ ಪೊಲೀಸರು ಅಂತಿಮ ನಮನ ಸಲ್ಲಿಸಿದರು.

ಗದಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಮಾರು 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ 'ರ‍್ಯಾಂಬೋ' ಭಾನುವಾರ ಹೃದಯಾಘಾತದಿಂದ ಮೃತಪಟ್ಟಿತ್ತು. ಹಲವಾರು ಅಪರಾಧ ಪ್ರಕರಣ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ವಾನಕ್ಕೆ ಕಂಬನಿಯ ವಿದಾಯ ಹೇಳಲಾಯಿತು.

ನಗರದ ಹೆಲ್ತ್​ಕ್ಯಾಂಪ್​ನ ಪೊಲೀಸ್ ಮೈದಾನದಲ್ಲಿ ನೂತನ ಜಿಲ್ಲಾ ವರಿಷ್ಠಾಧಿಕಾರಿ ಯತೀಶ, ಡಿಎಸ್ಪಿ ಪ್ರಲ್ಹಾದ್ ಸೇರಿ ವಿವಿಧ ಅಧಿಕಾರಿಗಳು 'ರ‍್ಯಾಂಬೋ'ಗೆ ಪುಷ್ಪನಮನ ಸಲ್ಲಿಸಿದರು.

Police Plays Tribute For Dog Rambo

ಕೆಲವು ಸಮಯ ಮೌನಾಚರಣೆ ಮಾಡಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವದೊಂದಿಗೆ 'ರ‍್ಯಾಂಬೋ' ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

11 ವರ್ಷಗಳ ಅವಧಿಯಲ್ಲಿ ನರಸಾಪುರ ಕಳ್ಳತನ, ಶಿರಹಟ್ಟಿ ಕೊಲೆ ಪ್ರಕರಣ, ಶಿಗ್ಲಿ ಕಳ್ಳತನ, ಗಂಗಿಮಡಿ ಕಳ್ಳತನ, ಗದಗ ವಿವೇಕಾನಂದ ನಗರ ಕಳ್ಳತನ, ಮುಳುಗುಂದ, ಬೆಟಗೇರಿ ಕೊಲೆ ಪ್ರಕರಣ, ಗಜೇಂದ್ರಗಡ ಕಳ್ಳತನ ಸೇರಿದಂತೆ 190 ವಿವಿಧ ಪ್ರಕರಣಗಳಲ್ಲಿ 'ರ‍್ಯಾಂಬೋ' ಪೊಲೀಸರಿಗೆ ನೆರವಾಗಿತ್ತು.

ಕೊಲೆ, ದರೋಡೆ, ಕಳ್ಳತನದ 12 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ 'ರ‍್ಯಾಂಬೋ' ಪ್ರಮುಖ ಪಾತ್ರ ವಹಿಸಿತ್ತು ಎಂದು ಅಧಿಕಾರಿಗಳು ನೆನಪು ಮಾಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+