ತೋರಿಸಿದ ಚಿಹ್ನೆಗೆ ಮತ ಹಾಕದ ಅಧಿಕಾರಿಗಳು: ಮತಗಟ್ಟೆ ಮುಂದೆ ವೃದ್ಧೆ ಧರಣಿ

ಗದಗ, ಮೇ 10: ಮತದಾನ ಮಾಡಲು ಬಂದ 85 ವರ್ಷದ ವೃದ್ಧೆ ಮತಗಟ್ಟೆಯ ಮುಂದೆಯೇ ಧರಣಿ ಕುಳಿತಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ ಈ ಘಟನೆ ನಡೆದಿದೆ.

85 ವರ್ಷದ ಮಕ್ತುಂಬೀ ದೊಡ್ಡಮನಿ ಎನ್ನುವವರು ಮತದಾನ ಮಾಡಲು ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ಕ್ಕೆ ಮೊಮ್ಮಗನ ಜೊತೆ ಆಗಮಿಸಿದ್ದಾರೆ. ಆದರೆ ಮತಗಟ್ಟೆಯಲ್ಲಿರುವ ಅಧಿಕಾರಿಗಳು ಮೊಮ್ಮಗನನ್ನು ಮಕ್ತುಂಬೀ ದೊಡ್ಡಮನಿ ಅವರ ಜೊತೆ ಮತದಾನ ಮಾಡಲು ಒಳಗೆ ಬಿಡದೇ ತಾವೇ ವೃದ್ಧೆಯನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

Old Woman Protest In Front Of Polling Booth At Gadag

ಮತದಾನ ಮಾಡುವ ವೇಳೆ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳು ತಾನು ತೋರಿಸಿದ ಚಿಹ್ನೆ ಮತವನ್ನು ಹಾಕದೇ ಬೇರೆ ಗುರುತಿಗೆ ಮತವನ್ನು ಹಾಕಿದ್ದಾರೆ ಎಂದು ಮಕ್ತುಂಬೀ ದೊಡ್ಡಮನಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ 85 ವರ್ಷದ ಮಕ್ತುಂಬೀ ದೊಡ್ಡಮನಿ ಮತಗಟ್ಟೆಯ ಮುಂದೆಯೇ ಧರಣಿ ಕುಳಿತಿದ್ದು, ತಹಶೀಲ್ದಾರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.

ಮತದಾನ ಮಾಡಿದ 10 ದಿನದ ಬಾಣಂತಿ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಗದಗ ಜಿಲ್ಲೆಯಲ್ಲಿ ಭರದಿಂದ ಮತದಾನ ನಡೆಯುತ್ತಿದ್ದು, 10 ದಿನದ ಬಾಣಂತಿ ಕೂಡ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ವರ್ಷಾ ಪವಾರ್ ಎನ್ನುವ ಬಾಣಂತಿ ಗದಗ ನಗರದ ಮತಗಟ್ಟೆ ಸಂಖ್ಯೆ 85ಕ್ಕೆ ತೆರಳಿ ಮತದಾನ ಮಾಡಿದ್ದಾರೆ. ವರ್ಷಾ ಪವಾರ್ ಅವರಿಗೆ ಇತರ ಮತದಾರರು ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಮತದಾನದ ಹಕ್ಕು ಚಲಾವಣೆ ಮಾಡಿರುವುದಕ್ಕೆ ಚುನಾವಣಾ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಕ್ಷೇತ್ರವಾರು ಶೇಕಡಾ ಮತದಾನ ಪ್ರಮಾಣ

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಗದಗ ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೂ ಶೇ.21.14 ರಷ್ಟು ಮತದಾನವಾಗಿದೆ.

ಗದಗ ವಿಧಾನಸಭಾ ಕ್ಷೇತ್ರ- 22.63%

ರೋಣ ವಿಧಾನಸಭಾ ಕ್ಷೇತ್ರ 22.04%

ಶಿರಹಟ್ಟಿ ವಿಧಾನಸಭಾ ಕ್ಷೇತ್ರ- 16.17%

ನರಗುಂದ ವಿಧಾನಸಭಾ ಕ್ಷೇತ್ರ-24.28%

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+