ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯತ್ನಾಳ್ ಮತ್ತು ನಿರಾಣಿ ನಡುವಿನ ಒಳಜಗಳ ಸಮಾಜವೇ ತಲೆ ತೆಗ್ಗಿಸುವಂತೆ ಮಾಡಿದೆ: ಎಚ್.ಕೆ. ಪಾಟೀಲ್

By ಗದಗ ಪ್ರತಿನಿಧಿ
|
Google Oneindia Kannada News

ಗದಗ, ಜನವರಿ, 16: ಸಾರ್ವಜನಿಕ ಕ್ಷೇತ್ರದಲ್ಲಿ ಮಹತ್ವದ ಹುದ್ದೆ ಹೊಂದಿರುವ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಮತ್ತು ಸಚಿವ ಮುರಗೇಶ್ ನಿರಾಣಿ ನಡುವಿನ ಒಳಜಗಳ ನಾಗರಿಕ‌ ಸಮಾಜವೇ ತಲೆ ತೆಗ್ಗಿಸುವಂತಹದ್ದಾಗಿದೆ. ಮಂತ್ರಿಗಳಾದವರ ಬಾಯಿಗೆ ಹಿಡಿತ ಇಲ್ಲ ಅನ್ನುವುದು ದುರ್ದೈವದ ಸಂಗತಿ ಎಂದು ಶಾಸಾಕ ಎಚ್.ಕೆ. ಪಾಟೀಲ್ ಗದಗದಲ್ಲಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಪ್ರತಿನಿದಿನಗಳಾದ ಇವರು, ಜನರು ಸಹನೆ ಮಾಡಿಕೊಳ್ಳುವಂತಹ ಮಾತುಗಳನ್ನು ಹರಿಬಿಡುತ್ತಿದ್ದಾರೆ. ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನು ನೀವು ಹೊಸಲು ಮಾಡುತ್ತಿದ್ದೀರಿ. ಸಿಎಂ ಸೇರಿದಂತೆ ಸಚಿವರು ಸಹ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ರಾಜಕಾರಣದ ಬಡಿದಾಟದಲ್ಲಿ ಎಲ್ಲರನ್ನು ಅವಮಾನಿಸುವ ಕೆಲಸ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ರೈತರ ಸರ್ಕಾರ ಸ್ಥಾಪನೆ ಮಾಡಲು ಸಹಕರಿಸಿ: ಗದಗದಲ್ಲಿ ಸಿಎಂ ಇಬ್ರಾಹಿಂ ಮನವಿರಾಜ್ಯದಲ್ಲಿ ರೈತರ ಸರ್ಕಾರ ಸ್ಥಾಪನೆ ಮಾಡಲು ಸಹಕರಿಸಿ: ಗದಗದಲ್ಲಿ ಸಿಎಂ ಇಬ್ರಾಹಿಂ ಮನವಿ

ಸ್ವಾಮೀಜಿಗಳಿಗೂ ರಾಜಕಾರಣದ ನಂಟು
ಬಸವ ಜಯಮೃತ್ಯುಂಜಯ ಸ್ವಾಮಿಗಳು ಕಾಂಗ್ರೆಸ್ ಪಕ್ಷದ ಅಣತಿಯಂತೆ ವರ್ತನೆ ಮಾಡುತ್ತಿದ್ದಾರೆ ಅನ್ನುವ ಆರೋಪ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಮ್ಮಿಂದೊಮ್ಮಿಲೇ ಸ್ವಾಮಿಗಳಿಗೆ ಹೋಗಿ ಯಾಕೆ ರಾಜಕಾರಣ ಹಚ್ಚಿದ್ದಾರೆಯೋ ಗೊತ್ತಿಲ್ಲ. ಆ ಸ್ವಾಮಿಗಳು ನಮ್ಮ ಪಕ್ಷದ ಜೊತೆಗೆ ಸಂಪರ್ಕನೂ ಇಟ್ಟುಕೊಂಡಿಲ್ಲ. ಅವರ ಬೇಡಿಕೆಗೆ ನಮ್ಮ ವೈಯಕ್ತಿಕ ನೆಲೆಯಲ್ಲಿ ಬೆಂಬಲಿಸಿರಬಹುದು. ನಮ್ಮ ಪಕ್ಷದ ನಾಯಕರು ಅವರ ಜೊತೆಗೆ ಇರಬಹುದು. ಸಾಮಾಜಿಕವಾಗಿ ಅವರ ಸಮುದಾಯಕ್ಕೆ ಸಂಬಂಧ ಇದ್ದವರು ಅನ್ನುವ ಕಾರಣಕ್ಕೆ ಆ ಹೋರಾಟದಲ್ಲಿ ಇದ್ದಾರೆ. ಇದರಲ್ಲಿ ರಾಜಕಾರಣ ಬೆರೆಸುವುದು ಸಜ್ಜನಿಕೆ ಲಕ್ಷಣ ಅಲ್ಲ.

HK Patil outrage against Basangouda Patil Yatnal, Murugesh Nirani

ಸ್ವಾಮಿಗಳು ಇವರಿಗೆ ಅನಾನುಕೂಲ ಆಗುವಂತ ನಿಲುವು ತೆಗೆದುಕೊಂಡಿರಬಹದು. ಆದರೆ ಸ್ವಾಮಿಗಳಿಗೆ ದಿಢೀರ್ ರಾಜಕಾರಣ ಹಚ್ಚುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.
HK Patil outrage against Basangouda Patil Yatnal, Murugesh Nirani

ಸ್ಯಾಂಟ್ರೋ ರವಿ ತಪ್ಪಿತಸ್ಥ ಅಲ್ಲ
ಸ್ಯಾಂಟ್ರೋ ರವಿ ಜೊತೆಗೆ ರಾಜಕಾರಣಿಗಳ‌ ಸಂಪರ್ಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಯಾಂಟ್ರೋ ರವಿ ಮಾತ್ರ ತಪ್ಪಿತಸ್ಥ ಅಲ್ಲ. ಅವನನ್ನು ಬಳಕೆ ಮಾಡಿಕೊಳ್ಳಲಾಗಿದೆ. ಅವನನ್ನು ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯದ ಆಡಳಿತವನ್ನು ಅಶಕ್ತಿಗೊಳಿಸಿ ಶಿಥಿಲಗೊಳಿಸಲಾಗಿದೆ. ಭ್ರಷ್ಟಾಚಾರ ವ್ಯವಸ್ಥೆಯಲ್ಲಿ ಅವನನ್ನ ಉಪಯೋಸಿಕೊಂಡು ಸರ್ಕಾರದ ಕ್ರೆಡಿಬಿಲಿಟಿ ಕಳಿದಿದ್ದೀರಿ. ಅವನನ್ನು ಉಪಯೋಗ ಮಾಡಿಕೊಂಡು ಯಾರೆಲ್ಲ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಯೋ ಅವರೆಲ್ಲರನ್ನೂ ಬಂಧಿಸಬೇಕು. ವರ್ಗಾವಣೆ ಮಾಡಿದವನು, ವರ್ಗಾವಣೆ ಮಾಡಿಸಿಕೊಂಡವನು, ದುಡ್ಡು ಕೊಟ್ಟವನು ಮತ್ತು ದುಡ್ಡು ಪಡೆದವರನ್ನೂ ಬಂಧಿಸಬೇಕು. ಸ್ಯಾಂಟ್ರೋ ರವಿಯನ್ನ ಬಂಧಿಸಿದ್ದೀರಿ ಅಷ್ಟೇ. ಅವನು ನೆಪ ಮಾತ್ರ. ಅವನನ್ನ ಉಪಯೋಗ ಮಾಡಿಕೊಂಡು ಕಾನೂನು ಬಾಹಿರ ಕೆಲಸ ಮಾಡಿದವರ ಬಂಧನವೂ ಆಗಬೇಕು. ಕಳವು ಮಾಡಿಸಿದ ಆ ಸೂತ್ರದಾರನೂ ಬಂಧಿಯಾಗಬೇಕು ಎಂದರು.

English summary
HK Patil said in gadag, HK Patil outrage against Basangouda Patil Yatnal and Murugesh Nirani, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X