• search
  • Live TV
ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಿಸ್ಡ್ ಕಾಲ್ ಕೊಡಿ, ಎಚ್ಡಿಕೆ ಜತೆಗೆ ಕನೆಕ್ಟ್ ಆಗಿರಿ

|

ಬೆಂಗಳೂರು, ಡಿಸೆಂಬರ್ 09 : ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ಪ್ರಸಿದ್ಧರಾಗಿರುವ ಜೆಡಿಎಸ್ ರಾಜ್ಯ ಅಧ್ಯಕ್ಷ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರು ಈಗ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಪ್ರತೀ ನಿತ್ಯ ಹೆಚ್ ಡಿ ಕುಮಾರಸ್ವಾಮಿ ಅವರ ಸುದ್ದಿಯನ್ನು ಮೊಬೈಲ್ ಮೂಲಕ ಪಡೆಯುವ ಯೋಜನೆಗೆ ನಮ್ಮ ಎಚ್ಡಿಕೆ ಫೋರಮ್ , ತಾಂತ್ರಿಕ ಸಲಹೆಗಾರರು ಯೋಜನೆ ಸಿದ್ಧಪಡಿಸಿದ್ದಾರೆ. ನಮ್ಮ ಹೆಚ್ ಡಿ ಕೆ' ಜಾಲತಾಣ ಈಗಾಗಲೇ ಫೇಸ್ ಬುಕ್ , ಟ್ವಿಟರ್, ಯು ಟ್ಯೂಬ್, ಸೌಂಡ್ ಕ್ಲೌಡ್ ನಲ್ಲಿ ಜನಪ್ರಿಯವಾಗಿದ್ದು ಈಗ ಅದರ ಮುಂದುವರಿಕೆಯಾಗಿ ಮ್ಯಾಬೈಲ್ ಸೇವೆ ಆರಂಭಿಸಲಿದೆ.

ಕಷ್ಟ-ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ಕುಮಾರಣ್ಣನಿಗೆ ಪತ್ರ ಬರೆಯಿರಿ

ಈ ಯೋಜನೆ ಇದೇ ಭಾನುವಾರ ಡಿ.10 ರಿಂದ ಪ್ರಾರಂಭವಾಗಲಿದ್ದು ಮೊಬೈಲ್ ನ ಸಂಖ್ಯೆ 94839 86999 ಗೆ ಒಂದು ಮಿಸ್ ಕಾಲ್ ನೀಡುವುದರಿಂದ ಆ ಸಂಖ್ಯೆ ಹೆಚ್ ಡಿ ಕೆ ಸಾಮಾಜಿಕ ಜಾಲತಾಣದಲ್ಲಿ ನೊಂದಾಯಿಸಲ್ಪಡುತ್ತದೆ.

ಆ ನಂತರ ಪ್ರತೀ ದಿನ ಮೂರು ಬಾರಿ ಹೆಚ್ ಡಿ ಕುಮಾರಸ್ವಾಮಿ ಅವರ ಸಭೆ ಸಮಾರಂಭ, ಭಾಷಣ, ಪತ್ರಿಕಾ ಗೋಷ್ಟಿ ಎಲ್ಲವೂ ಆ ನಂಬರ್ ನ ಮಾಲೀಕರಿಗೆ ಸಿಗುತ್ತದೆ.

ಕೇವಲ ಸುದ್ದಿಗಳಷ್ಟೇ ಅಲ್ಲದೆ ಆಡಿಯೋ, ವಿಡಿಯೋಗಳನ್ನೂ ಕಳುಹಿಸಲಾಗುತ್ತದೆ. ಪ್ರತೀ ದಿನ ಬೆಳಗ್ಗೆ ಹೆಚ್ ಡಿ ಕೆ ಅವರ ಕಾರ್ಯಕ್ರಮದ ವಿವರ ನೀಡುವ ಮೂಲಕ ಆರಂಭವಾಗುವ ಈ ಸುದ್ದಿ ಸೇವೆ ದಿನದ ಅಂತ್ಯಕ್ಕೆ ರೌಂಡ್ ಅಪ್ ನೀಡುವ ಮೂಲಕ ಮುಕ್ತಾಯವಾಗುತ್ತದೆ.

ಮಂಡ್ಯದ ವರನ ಕೋರಿಕೆ ಓಕೆ ಮಾಡಿದ ಎಚ್ ಡಿಕೆ

ಅಂತರ್ಜಾಲ ಆಧಾರಿತ ಮಾಧ್ಯಮಗಳು ಈಗ ಪ್ರಬಲವಾಗಿರುವುದರಿಂದ ನಮ್ಮ ವಿಚಾರಗಳನ್ನು ಆ ಮಾಧ್ಯಮದ ಮೂಲಕವೂ ಜನರಿಗೆ ತಲುಪಿಸಲು ಈ ಯೋಜನೆ ಹೊಂದಿದ್ದೇವೆ' ಎಂದು ಶ್ರೀ ಎಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

'ಅಮೆರಿಕಾದ ಚುನಾವಣೆಗಳು ಹಾಗೂ ಕಳೆದ ಸಾಲಿನ ಭಾರತದ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳು ಎಂತಹ ಮಹತ್ವದ ಪಾತ್ರ ವಹಿಸಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಹಾಗಾಗಿ ರಾಜ್ಯದ ಹಿತ ಕಾಯಲು ಸಿದ್ಧವಾಗಿರುವ ನಾವು ಜನರನ್ನು ತಲುಪುವ ಎಲ್ಲಾ ಮಾರ್ಗವನ್ನೂ ಬಳಸುತ್ತೇವೆ' ಎಂದು ತಿಳಿಸಿದರು. ಮಿಸ್ ಕಾಲ್ ಗಳನ್ನೂ ನೋಂದಾಯಿಸುವ ಸೇವೆ ಈ ಭಾನುವಾರದಿಂದ ಆರಂಭವಾಗಲಿದೆ.

English summary
Former Chief Minister H.D.Kumaraswamy is trying to connect with people through many social media forums. Now, Namma HDK forum will connect the people with cell phones sending information about Kumaraswamy's videos and audios thrice in a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X