ವೈರಲ್ ವಿಡಿಯೋ: ಅಳುತ್ತಿದ್ದ ಮಹಿಳೆಯ ಸಂತೈಸೋಕೆ ಸಾಕ್ಷಾತ್ ಹನುಮನೇ ಬಂದ!
ನರಗುಂದ, ಏಪ್ರಿಲ್ 20: ಅಂತ್ಯಕ್ರಿಯೆ ನಂತರ ಅಳುತ್ತ ಕುಳಿತಿದ್ದ ಮಹಿಳೆಯೊಬ್ಬರನ್ನು ಕೋತಿಯೊಂದು ಬಂದು ಸಂತೈಸಿದ ಅಚ್ಚರಿಯ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇತ್ತೀಚೆಗಷ್ಟೆ ನರಗುಂದದಲ್ಲಿ 80 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತೀರಿಕೊಂಡಿದ್ದರು. ಅವರ ಅಂತ್ಯಕ್ರಿಯೆಯನ್ನು ಮುಗಿಸಿ ಬಂದ ಕುಟುಂಬ, ಹಾರ ಹಾಕಿದ ಅವರ ಫೋಟೋ ಮುಂದೆ ಕುಳಿತು ಅಳುತ್ತಿತ್ತು. ಈ ಸಂದರ್ಭದಲ್ಲಿ ಅದೆಲ್ಲಿಂದಲೋ ಬಂದ ಕೋತಿಯೊಂದು ಅಳುತ್ತಿದ್ದ ಮಹಿಳೆಯ ತಲೆಯನ್ನು ಸವರಿ ಸಂತೈಸುವುದಕ್ಕೆ ಆರಂಭಿಸಿತು.
ದುಃಖದಲ್ಲಿದ್ದ ಕುಟುಂಬಕ್ಕೆ ಸಾಕ್ಷಾತ್ ಮಾರುತಿಯ ದರ್ಶನವಾದಂತಾಗಿ, ಆ ದುಃಖದ ನಡುವಲ್ಲೂ ಕೊಂಚ ಸಮಾಧಾನ ಸಿಕ್ಕಂತಾಗಿದೆ.

"ನಾವೆಲ್ಲರೂ ದೊಡ್ಡ ದನಿಯಲ್ಲಿ ಅಳುತ್ತಿದ್ದುದನ್ನು ಕಂಡ ಕೋತಿ ಎಲ್ಲಿಂದಲೂ ನಮ್ಮ ಬಳಿ ಬಂದಿದೆ. ನಾವೆಲ್ಲ ಪರಸ್ಪರ ಸಂತೈಸಿಕೊಳ್ಳುತ್ತಿರುವುದನ್ನು ಕಂಡು ಅದೂ ನಮ್ಮನ್ನು ಅನುಕರಿಸಿದೆ. ಪವಾಡಗಳು ಸುಳ್ಳೋ, ನಿಜವೋ ಗೊತ್ತಿಲ್ಲ. ಆದರೆ ನಮಗೆ ಧೈರ್ಯ ನೀಡಲು ಸಾಕ್ಷಾತ್ ಹನುಮನೇ ಬಂದಿದ್ದ ಎಂಬುದು ನಮ್ಮ ನಂಬಿಕೆ" ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.











Click it and Unblock the Notifications