ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆನೀರು ತಂದ ಕಣ್ಣೀರು: ಗದಗದಲ್ಲಿ ಪ್ರವಾಹದಿಂದ ಪುಸ್ತಕಗಳು ಹಾನಿ- ಕಣ್ಣೀರಿಟ್ಟ ವಿದ್ಯಾರ್ಥಿನಿ!

By ಗದಗ ಪ್ರತಿನಿಧಿ
|
Google Oneindia Kannada News

ಗದಗ ಸೆಪ್ಟೆಂಬರ್ 10: ಮಳೆಯ ಅಬ್ಬರಕ್ಕೆ ಜನರ ಜೀವನವನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಮನೆಗಳಿಗೆ ನೀರು ನುಗ್ಗಿ ತಿನ್ನಲು ಆಹಾರ, ಉಡಲು ಬಟ್ಟೆ, ಮಲಗಲು ಜಾಗವಿಲ್ಲದೆ ಜನ ರೋಸಿಹೋಗಿದ್ದಾರೆ. ಇನ್ನೂ ಬಡತನದ ಕುಟುಂಬಗಳ ಸ್ಥಿತಿ ಹೇಳತೀರದ್ದಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನ ಕಚೇರಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳು ಶಾಲೆಗಳಿಗೂ ಹೋಗಲಾಗುತ್ತಿಲ್ಲ. ಗದಗ ಜಿಲ್ಲೆಯಲ್ಲಿ ಮನೆಗೆ ಮಳೆಯಾಸೂರ ಎಂಟ್ರಿ ಕೊಟ್ಟ ಪರಿಣಾಮ ವಿದ್ಯಾರ್ಥಿಯೋರ್ವಳ ಪುಸ್ತಕಗಳು ನೀರಿನಲ್ಲಿ ಹಾನಿಗೊಳಗಾಗಿವೆ.

ಗದಗ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ವಿದ್ಯಾರ್ಥಿಗಳ ಓದುವ ಪುಸ್ತಕಗಳೂ ಸಹ ಹಾನಿಯಾಗಿವೆ. ಹಾಳಾಗಿರುವ ಪುಸ್ತಕಗಳನ್ನು ನೋಡಿ ವಿದ್ಯಾರ್ಥಿನಿ ಕಣ್ಣೀರು ಹಾಕುತ್ತಿರುವ ಘಟನೆ ಗದಗದ ಬೆಟಗೇರಿಯ ಮಂಜುನಾಥ ನಗರದಲ್ಲಿ ನಡೆದಿದೆ‌. ಕಡು ಬಡತನದಲ್ಲಿ ಹುಟ್ಟಿದ ಸೊಮೀಯಾ ಅಂಡೆವಾಲ ಎಂಬ ವಿದ್ಯಾರ್ಥಿನಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

Gadag: Books damaged by rain: Student crying

ಮಂಜುನಾಥ ನಗರದ ನಂಬರ್ 4 ರ ಸರ್ಕಾರಿ ಶಾಲೆಯಲ್ಲಿ ಸೊಮೀಯಾ ಅಂಡೆವಾಲ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಸೊಮೀಯಾ ಅಂಡೆವಾಲ ಶಾಲೆಯಲ್ಲಿ ಜಾಣೆ. ಎಲ್ಲಾ ವಿದ್ಯಾರ್ಥಿಗಳಿಂತಲೂ ಚೆನ್ನಾಗಿ ಓದುತ್ತಾಳೆ. ಶಿಕ್ಷಕರು ಹೇಳಿದ ಪಾಠಗಳನ್ನು ಹೋಮ್ ವರ್ಕ್ ಗಳನ್ನು ಚೆನ್ನಾಗಿ ಮಾಡುತ್ತಿದ್ದಳು. ಸೊಮೀಯಾಗೆ ಶಾಲೆಯ ಶಿಕ್ಷಕರಿಗೆ ಓದಲು ಬರೆಯಲು ಪುಸ್ತಕಗಳನ್ನು ಕೊಡಿಸಿದ್ರು. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದ್ರೆ ರಕ್ಕಸ ಮಳೆಗೆ ಮನೆಗೆ ನೀರು ನುಗ್ಗಿದ ಪರಿಣಾಮ ಸೊಮೀಯಾ ಬ್ಯಾಗ್ ನಲ್ಲಿದ್ದ ಪುಸ್ತಕಗಳು ಸಂಪೂರ್ಣ ಹಾಳಾಗಿದೆ‌. ಹಾಳಾಗಿರುವ ಪುಸ್ತಕಗಳನ್ನು ಕಣ್ಣೀರು ಹಾಕ್ತಾ ಬಿಸಲಿಗೆ ಒಣಗಿಸುತ್ತಿದ್ದಾಳೆ. ಆದ್ರೆ ಕೆಲವು ಪುಸ್ತಕಗಳ ಸಂಪೂರ್ಣ ಹಾಳಾಗಿರುವ ಕಾರಣ ಕಣ್ಣೀರು ಹಾಕುತ್ತಿರುವ ವಿದ್ಯಾರ್ಥಿನಿ ಸೊಮೀಯಾ ನಂಗೆ ಯಾರಾದರೂ ಪುಸ್ತಕಗಳನ್ನು ಕೊಡಿಸಿ ಅಂತ ಗೋಳಾಡುತ್ತಿದ್ದಾಳೆ.

ಇವಳು ಅವಳ ಅಜ್ಜಿಯ ಪುಟ್ಟ ಮನೆಯಲ್ಲಿ ವಾಸ ಮಾಡುತ್ತಿದ್ದಾಳೆ. ತಾಯಿ ಸೊಮೀಯಾ ಚಿಕ್ಕವಳು ಇದ್ದಾಗಲೇ ಅವಳನ್ನು ಬಿಟ್ಟು ಅಗಲಿದ್ದಾಳೆ. ಸೊಮೀಯಾ ಅಜ್ಜಿಯೇ ಇವಳನ್ನು ಸಾಕಿ ಸಲುವುತ್ತಿದ್ದಾಳೆ. ಅಜ್ಜಿಯ ದುಡಿಮೆಯಲ್ಲಿ ಸೊಮೀಯಾಗೆ ಶಿಕ್ಷಣ ಕೊಡಿಸಿದ್ದಾಳೆ‌‌. ಆದ್ರೆ ಬಡತನದಲ್ಲಿ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯುವ ಕನಸು ಕಾಣುತ್ತಿರುವ ಪುಟಾಣಿಗೆ ಮಳೆರಾಯ ತಣ್ಣೀರು ಎರೆಚ್ಚಿದ್ದಾನೆ. ಇದ್ರಿಂದ ಸುಮೇಯಾ ರೋಸಿ ಹೋಗಿದ್ದಾಳೆ. ಯಾರಾದರೂ ನಂಗೆ ಸಹಾಯ ಮಾಡಿ ಅಂತಾ ಗೋಳಾಡುತ್ತಿದ್ದಾಳೆ‌.

ವಿದ್ಯಾರ್ಥಿನಿಗೆ ಸಹಾಯ ಮಾಡಲು ಇಚ್ಛಿಸುವವರು ಈ ಖಾತೆ(ಬಾಲಕಿ ಅಜ್ಜಿ ಖಾತೆ) ನಿಮ್ಮ ಕೈಲಾದಷ್ಟು ಸಹಾಯ ಮಾಡಬಹುದುHandiwale

Name: Fatima Ramzansab

Ac no: 10323848564
IFSC code: SBIN0005621
State bank of India
Pala badami road, Betageri,Gadag

English summary
In Gadag district, due to heavy rains, water entered the houses and the reading books of the students were also damaged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X