ಕಾಂಗ್ರೆಸ್ ಶೀಘ್ರವಾಗಿ ಪುನಶ್ಚೇತನಗೊಳ್ಳಲಿದೆ : ಎಚ್ ಕೆ ಪಾಟೀಲ್ ವಿಶ್ವಾಸ

Posted By: Nayana
Subscribe to Oneindia Kannada

ಗದಗ, ಡಿಸೆಂಬರ್ 02 : ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶ ಸೇರಿಂದತೆ ದೇಶಾದ್ಯಂತ ಶೀಘ್ರ ಪುನಶ್ಚೇತನಗೊಳ್ಳಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ಎಚ್ ಕೆ.ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಗಿರುವ ಸೋಲು ತಾತ್ಕಾಲಿಕವಾದದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಜನರ ವಿಶ್ವಾಸ ಗಳಿಸಲಿದೆ ಈಗ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಜನಸ್ಪಂದನೆ ಸಿಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Congress will rejuvenate soon:HK Patil

ಸಂಸದ ಶ್ರೀರಾಮುಲು ಸಿದ್ದರಾಮಯ್ಯ ಅವರಿಗೆ ಹಿಟ್ಲರ್ ಪದ ಬಳಕೆ ಮಾಡಿರುವ ವಿಚಾರ ಕುರಿತು ಮಾತನಾಡಿದ ಅವರು, ಹಿಟ್ಲರ್ ವ್ಯಕ್ತಿತ್ವ ಇರೋ ವ್ಯಕ್ತಿ ಚರ್ಚೆಗೆ ಕರಿತಾರಾ? ಆದರೆ ಸಿದ್ದರಾಮಯ್ಯ ಅವರು ಜನರ ಮಧ್ಯೆ ಅನಿಸಿಕೆ ಹೇಳಿಕೊಳ್ಳುತ್ತಿದ್ದಾರೆ ಇದು ಹಿಟ್ಲರ್ ವರ್ತನೆಯಾ ಎಂದು ಪ್ರಶ್ನಿಸಿದ ಅವರು ಶ್ರೀರಾಮುಲು ಅವರ ಹೋಲಿಕೆ ಅಸಂಬದ್ಧ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior Congress leader and RDPR minister HK Patil opined that the party will rejuvenate in leadership of Rahul gandhi in Uttar Pradesh and all over in the country as well.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ