ಗದಗ ಕ್ಷೇತ್ರದಲ್ಲಿ 8 ಸಾವಿರ ಡಬ್ಬಲ್ ಮತದಾನ: ಆರೋಪ
ಗದಗ, ಮೇ 18: ಗದಗದ ಚುನಾಯಿತ ಕಾಂಗ್ರೆಸ್ ಅಭ್ಯರ್ಥಿ ಎಚ್‌ಕೆ ಪಾಟೀಲ್ ಅವರು ಎಂಟು ಸಾವಿರ ಡಬಲ್ ಮತದಾನ ಮಾಡಿಸಿ ಹಾಗೂ ಸತ್ತವರ ಹೆಸರಿನಲ್ಲಿ ಮತದಾನ ಮಾಡಿಸಿ ಮೋಸದಿಂದ ಗೆಲುವು ಸಾಧಿಸಿದ್ದಾರೆ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಗದಗದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಕ್ರಮ ಕುರಿತು ವರದಿ ನೀಡುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಜತೆಗೆ ಕಾನೂನು ಹೋರಾಟ ನಡೆಸಲಾಗುತ್ತದೆ. ಮರಣ ಹೊಂದಿದವರ ಹೆಸರಿನಲ್ಲಿಯೂ ಮತದಾನ ನಡೆದಿದೆ.

ಕಾನೂನು ತಜ್ಞ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಸಲಹೆ ಮೇರೆಗೆ ಹೋರಾಟ ಕೈಗೊಂಡಿದ್ದೇನೆ, 15 ದಿನಗಳಲ್ಲಿ ಮರು ಮತದಾನ ನಡೆಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.












Click it and Unblock the Notifications