ಬೆಲ್ಜಿಯಂನಲ್ಲಿ ಶೌಚಾಲಯವನ್ನು ಕಿತ್ತು ಬಂಧಿತನು ಜೈಲಿನಿಂದ ಪರಾರಿ
ಬ್ರಸೆಲ್ಸ್, ಆಗಸ್ಟ್ 3: ಬೆಲ್ಜಿಯಂನಲ್ಲಿ 25 ವರ್ಷದ ಬಂಧಿತ ಆರೋಪಿಯೊಬ್ಬ ಜೈಲಿನ ಶೌಚಾಲಯದಲ್ಲಿ ಕಿಂಡಿ ಕೊರೆದು ಪರಾರಿಯಾಗಿರುವ ಘಟನೆೆ ನಡೆದಿದೆ ಎಂದು ಬ್ರಸೆಲ್ಸ್ ಪೊಲೀಸರು ತಿಳಿಸಿದ್ದಾರೆ.
ಶೌಚಾಲಯದ ಗೋಡೆಯಲ್ಲಿ ಎ4 ಗಾತ್ರದ ಚಿಕ್ಕ ರಂಧ್ರವನ್ನು ಕೊರೆದು ಅಷ್ಟರಲ್ಲೇ ಬಂಧಿತ ಆರೋಪಿಯು ಏಸ್ಕೇಪ್ ಆಗಿದ್ದಾನೆ. ಚಿಕ್ಕ ರಂಧ್ರದ ಮೂಲಕ ಅಂಡರ್ ಗ್ರೌಂಡಿಗೆ ಇಳಿದ ಬಂಧಿತನು ರಸ್ತೆ ಮೇಲಿನ ಕಿಂಡಿಯಿಂದ ಹೊರ ಹೋಗಿದ್ದಾನೆ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.
ಬೆಲ್ಜಿಯನ್ ಬ್ರಾಡ್‌ಕಾಸ್ಟರ್ ವಿಆರ್‌ಟಿ ಪ್ರಕಾರ, ಈ ಘಟನೆಯ ಸಮಯದಲ್ಲಿ ಜೈಲಿನ ಸೆಲ್ ನಲ್ಲಿದ್ದದ ಭದ್ರತಾ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಬಂಧನ: ಮಾದಕವಸ್ತು ಸಂಬಂಧಿತ ಆರೋಪಗಳು ಮತ್ತು ಕಾನೂನು ಉಲ್ಲಂಘನೆ ಅಡಿಯಲ್ಲಿ ಆರೋಪಿಯನ್ನು ಈ ಹಿಂದೆ ಶಿಕ್ಷೆಗೆ ಗುರಿಪಡಿಸಲಾಗಿತ್ತು. ವೆಸ್ಟ್ ಫ್ಲಾಂಡರ್ಸ್ ಪ್ರಾಸಿಕ್ಯೂಟರ್ ಕಚೇರಿಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬಂಧಿತನ ವಿರುದ್ಧದ ಪ್ರಕರಣದಲ್ಲಿ ಪೊಲೀಸರು ಆದೇಶವನ್ನು ಅನುಸರಿಸಲು ವಿಫಲವಾಗಿದ್ದಾರೆ ಎಂದು ಫ್ಲೆಮಿಶ್ ನಗರದ ಕೋರ್ಟ್ರೈನಲ್ಲಿ ಪ್ರಾಸಿಕ್ಯೂಷನ್‌ನ ವಕ್ತಾರರನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.
ಪೆರೋಲ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧನ: ಕಳೆದ ಸೋಮವಾರ ತಡರಾತ್ರಿ ಪೆರೋಲ್ ಅನ್ನು ಉಲ್ಲಂಘಿಸಿದ್ದಕ್ಕಾಗಿ 25 ವರ್ಷದ ಯುವಕನನ್ನು ಪೊಲೀಸರು ಬಂಧಿಸಿ ಬ್ರಸೆಲ್ಸ್‌ನ ಮೊಲೆನ್‌ಬೀಕ್ ಪಕ್ಕದಲ್ಲೇ ಇರುವ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಆರೋಪಿಯು ಜೈಲಿನ ಶೌಚಾಲಯದಲ್ಲಿ ಕಿಂಡಿ ಕೊರೆದು ಪರಾರಿ ಆಗಿದ್ದಾನೆ.












Click it and Unblock the Notifications