ಕೋವಿಡ್ 19: ಭಾರತ ಸೇರಿ 24 ದೇಶಗಳ ವಿಮಾನಗಳಿಗೆ ಓಮನ್ ನಿರ್ಬಂಧ

ದುಬೈ, ಜುಲೈ 08: ಗಲ್ಫ್‌ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಭಾರತ ಸೇರಿ 24 ರಾಷ್ಟ್ರಗಳ ವಿಮಾನಗಳಿಗೆ ಓಮನ್ ನಿರ್ಬಂಧ ಹೇರಿದೆ.

ಗುರುವಾರ ಈ ಕುರಿತು ಪ್ರಕಟಣೆ ಹೊರಡಿಸಲಾಗಿದೆ, ಗಲ್ಫ್‌ ರಾಷ್ಟ್ರಗಳಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ವಿದೇಶದಿಂದ ಬರುವ ವಿಮಾನಗಳಿಗೆ ನಿರ್ಬಂಧ ಹೇರಲು ಆಲೋಚಿಸಿದೆ.

ಮುಂದಿನ ಆದೇಶದವರೆಗೆ ಇದೇ ಮಾರ್ಗಸೂಚಿ ಮುಂದುವರೆಯಲಿದೆ. ಯುಕೆ, ಟುನೀಶಿಯಾ, ಲೆಬನಾನ್, ಇರಾನ್, ಇರಾಖ್, ಲಿಬಿಯಾ, ಬ್ರುನೇ, ಸಿಂಗಾಪುರ, ಇಂಡೋನೇಷ್ಯಾ, ಫಿಲಿಪೈನ್ಸ್, ಸೂಡನ್, ತಾಂಜೇನಿಯಾ, ದಕ್ಷಿಣ ಆಫ್ರಿಕಾ, ಘಾನಾ, ಸಿಯೆರಾ ಲಿಯೋನ್, ನೈಜೀರಿಯಾ, ಗಿನಿ, ಕೊಲಂಬಿಯಾ, ಅರ್ಜೆಂಟೀನಾ, ಬ್ರೆಜಿಲ್ ದೇಶಗಳಿಂದ ಬರುವ ವಿಮಾನಗಳಿಗೆ ನಿರ್ಬಂಧ ವಿಧಿಸಲಾಗಿದೆ.

Oman Suspends Flights From 24 Countries, Including India

ಓಮನ್‌ನಲ್ಲಿ ಬುಧವಾರ 1675 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ, ಒಟ್ಟು 280,235 ಪ್ರಕರಣಗಳಿವೆ.

ಇದುವರೆಗೆ ದೇಶದಲ್ಲಿ 3356 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಏಪ್ರಿಲ್ 24ರಿಂದಲೇ ಈ ಪಟ್ಟಿಯಲ್ಲಿರುವ ಕೆಲವು ದೇಶಗಳಿಂದ ವಿಮಾನಗಳು ಬರದಂತೆ ನಿಷೇಧ ಹೇರಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+