10ವರ್ಷ ಕಾದಿದ್ದಕ್ಕೂ ಸಿಕ್ತು ಫಲ:ದುಬೈನಲ್ಲಿ ಭಾರತೀಯನಿಗೆ ಜಾಕ್ ಪಾಟ್!

ನವದೆಹಲಿ ಮಾರ್ಚ್ 02: ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಭಾರತೀಯನಿಗೆ ಜಾಕ್ ಪಾಟ್ ಹೊಡೆದಿದೆ. ದುಬೈ ಲಾಟರಿಯಲ್ಲಿ ಬರೋಬ್ಬರಿ 200,000 ದಿರ್ಹಾಮ್ಸ್ ಮತ್ತು ಐಷಾರಾಮಿ ಕಾರನ್ನು ಭಾರತೀಯ ಮೂಲದ ಶ್ರೀಜಿತ್ ಗೆದ್ದಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಶ್ರೀಜಿತ್, ದುಬೈ ಲಾಟರಿ ಟಿಕೆಟ್ ಗಳನ್ನು ಕೊಂಡುಕೊಳ್ಳುತ್ತಿದ್ದರು. ಹತ್ತು ವರ್ಷಗಳಿಂದ ಕಾದಿದ್ದಕ್ಕೂ ಶ್ರೀಜಿತ್ ಗೆ ಇದೀಗ ದೊಡ್ಡ ಪ್ರತಿಫಲವೇ ಸಿಕ್ಕಿದೆ.

ದುಬೈ ಶಾಪಿಂಗ್ ಫೆಸ್ಟಿವೆಲ್ ನ 25ನೇ ಎಡಿಷನ್ ನಲ್ಲಿ ನಡೆದ ಇನ್ಫಿನಿಟಿ ಮೆಗಾ ರಫೇಲ್ ನಲ್ಲಿ 200,000 ದಿರ್ಹಾಮ್ಸ್ (USD 54,448) ನಗದು ಬಹುಮಾನ ಮತ್ತು ಇನ್ಫಿನಿಟಿ QX50 ಕಾರು ಶ್ರೀಜಿತ್ ಪಾಲಾಗಿದೆ.

Indian Hits The Jackpot In Dubai Raffle Wins Luxury Car

''ನನ್ನ ಕಿವಿಯನ್ನೇ ನಾನು ನಂಬಲಾಗಲಿಲ್ಲ. ಒಂದಲ್ಲಾ ಒಂದು ದಿನ ಅದೃಷ್ಟ ಖುಲಾಯಿಸುತ್ತೆ ಎಂಬ ನಂಬಿಕೆ ಮೇಲೆ ಕಳೆದ ಹತ್ತು ವರ್ಷಗಳಿಂದ ನಾನು ಲಾಟರಿ ಟಿಕೆಟ್ ಗಳನ್ನು ಪಡೆದುಕೊಳ್ಳುತ್ತಿದ್ದೆ. ಈಗ ಅದೃಷ್ಟ ಕೈಹಿಡಿದಿದೆ. ಈ ಗೆಲುವಿನಿಂದ ನನ್ನ ಕನಸುಗಳೆಲ್ಲವೂ ಈಡೇರಲಿದೆ. ನನಗೆ ಇಬ್ಬರು ಗಂಡು ಮಕ್ಕಳು. ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದೇನೆ. ಈಗ ಗೆದ್ದಿರುವ ಹಣದಿಂದ ನನ್ನ ಮಕ್ಕಳ ಭವಿಷ್ಯವನ್ನು ಚೆನ್ನಾಗಿ ರೂಪಿಸಬಹುದು'' ಎಂದು ಜಾಕ್ ಪಾಟ್ ಗೆದ್ದ ಖುಷಿಯಲ್ಲಿ ಶ್ರೀಜಿತ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+