ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂಬತ್ತು ವರ್ಷದ ಹುಡುಗಿಗೆ 6.93 ಕೋಟಿ ರೂಪಾಯಿ ಲಾಟರಿ!

|
Google Oneindia Kannada News

ದುಬೈ, ಏಪ್ರಿಲ್ 17: ಭಾರತೀಯ ಮೂಲದ ಒಂಬತ್ತು ವರ್ಷದ ಹುಡುಗಿಗೆ ದುಬೈನಲ್ಲಿ ಬರೋಬ್ಬರಿ 6.93 ಕೋಟಿ ಲಾಟರಿ ಹೊಡೆದಿದೆ. ವಿಶೇಷವೆಂದರೆ ಇದೇ ಹುಡುಗಿ ಈ ಹಿಂದೊಮ್ಮೆ ಐಶಾರಾಮಿ ಕಾರೊಂದು ಲಾಟರಿಯಲ್ಲಿ ಗೆದ್ದಿದ್ದಳು.

ಎಲಿಜಾ.ಎಂ ಎಂಬ ಭಾರತೀಯ ಮೂಲದ ಬಾಲಕಿಗೆ ದುಬೈನ ಡ್ಯೂಟಿ ಫ್ರೀ ಮಿಲೇನಿಯಂ ಮಿಲಿಯನೇರ್ ಜಾಕ್‌ಪಾಟ್ ಲಾಟರಿಯಲ್ಲಿ ಟಿಕೆಟ್ ಸಂಖ್ಯೆ 0333 ಗೆ ಲಾಟರಿ ಸಿಕ್ಕಿದೆ.

ನೀರು ನೀಡಿದ ಹೋಟೆಲ್ ಸಪ್ಲೈಯರ್ ಗೆ 10 ಸಾವಿರ ಡಾಲರ್ ಭಕ್ಷೀಸುನೀರು ನೀಡಿದ ಹೋಟೆಲ್ ಸಪ್ಲೈಯರ್ ಗೆ 10 ಸಾವಿರ ಡಾಲರ್ ಭಕ್ಷೀಸು

ಎಲಿಜಾ ಅವರ ತಂದೆ ಮುಂಬೈ ಮೂಲದವರಾಗಿದ್ದು 19 ವರ್ಷಗಳಿಂದ ದುಬೈನಲ್ಲಿ ವಾಸವಾಗಿದ್ದಾರೆ. ಅವರು ನಿಯಮಿತವಾಗಿ ಲಾಟರಿ ಖರೀದಿಸುತ್ತಿದ್ದರಂತೆ.

Indian girl wins 6.93 crore jackpot in Dubai

ಅವರ ಅದೃಷ್ಟದ ಸಂಖ್ಯೆ 9 ಆಗಿದ್ದ ಕಾರಣ ಅವರು 0333 ಸಂಖ್ಯೆಯ ಲಾಟರಿಯನ್ನು ಆನ್‌ಲೈನ್‌ನಲ್ಲಿ ಮಗಳ ಹೆಸರಿನಲ್ಲಿ ಖರೀದಿಸಿದ್ದರು, ಅದಕ್ಕೆ ಈಗ ಭಾರಿ ಮೊತ್ತದ ಹಣ ಬಹುಮಾನವಾಗಿ ದೊರೆತಿದೆ. ಇದೇ ಹುಡುಗಿ ಹೆಸರಲ್ಲಿ ಖರೀದಿಸಿದ್ದ ಲಾಟರಿಯಿಂದ ಐಶಾರಾಮಿ ಮೆಕ್‌ಲಾರೆನ್ ಕೋಪ್ ಕಾರು ಸಹ ಲಾಟರಿ ಹೊಡೆದಿತ್ತು.

1999 ರಿಂದ ಈಚೆಗೆ 140 ಮಂದಿ ಭಾರತೀಯ ಮೂಲದವರು ದುಬೈನ ಡ್ಯೂಟಿ ಫ್ರೀ ಮಿಲೇನಿಯಂ ಮಿಲಿಯನೇರ್ ಜಾಕ್‌ಪಾಟ್ ನಲ್ಲಿ ಲಾಟರಿ ಗೆದ್ದಿದ್ದಾರೆ.

English summary
Indian girl winds 6.93 crore rupees jackpot in Dubai. Eliza M won the jackpot amount. her dad buy ticket of Dubai duty free Millennium Millionaire lotory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X