ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿಗರಿಗೆ ಉಚಿತ ಲಸಿಕೆ ನೀಡಲು ಮುಂದಾದ ಅಬುಧಾಬಿ ಸರ್ಕಾರ

|
Google Oneindia Kannada News

ದುಬೈ, ಜೂನ್ 22: ಅಬಿಧಾಬಿ ಸರ್ಕಾರವು ಪ್ರವಾಸಿಗರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದೆ. ಅವಧಿ ಮುಗಿದ ವೀಸಾ ಮತ್ತು ರೆಸಿಡೆನ್ಸಿ ವೀಸಾ ಹೊಂದಿರುವವರು ಕೂಡ ಉಚಿತ ಲಸಿಕೆ ಪಡೆಯಲು ಅರ್ಹರು ಎಂದು ಅಬುಧಾಬಿ ಮಾಧ್ಯಮ ಕಚೇರಿ ಮಾಹಿತಿ ನೀಡಿದೆ.

ಈ ಹಿಂದೆ ಕೇವಲ ಯುಎಇ ಮತ್ತು ರೆಸಿಡೆನ್ಸಿ ವೀಸಾ ಹೊಂದಿದವರಿಗೆ ಮಾತ್ರ ಉಚಿತವಾಗಿ ಲಸಿಕೆ ನೀಡಲಾಗುತ್ತಿತ್ತು, ಈ ಹೊಸ ಬದಲಾವಣೆ ಅಬುಧಾಬಿಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಇತರೆ ಐದು ಎಮಿರೆಟ್ಸ್‌ಗೆ ಅನ್ವಯಿಸುತ್ತದೆಯೇ ಎಂಬುದರ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಜೂನ್ 23ರಿಂದ ಭಾರತಕ್ಕೆ ದುಬೈ ಎಮಿರೇಟ್ಸ್ ವಿಮಾನ ಹಾರಾಟಜೂನ್ 23ರಿಂದ ಭಾರತಕ್ಕೆ ದುಬೈ ಎಮಿರೇಟ್ಸ್ ವಿಮಾನ ಹಾರಾಟ

ಅಬುಧಾಭಿ ಅನುಮೋದನೆ ನೀಡಿರುವ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರು ಉಚಿತ ಲಸಿಕೆಗೆ ಅರ್ಹರು ಎಂದು ಅಬುಧಾಬಿ ಆರೋಗ್ಯ ಸೇವೆಗಳ ಕಂಪನಿ ಹೇಳಿದೆ.

Abu Dhabi Opens Up Free COVID-19 Vaccines To Tourists

ಭಾರತ ಸೇರಿದಂತೆ ಮೂರು ದೇಶಗಳಿಗೆ ಜೂನ್ 23ರಿಂದ ವಿಮಾನ ಹಾರಾಟ ಆರಂಭಿಸುವುದಾಗಿ ದುಬೈ ಎಮಿರೇಟ್ಸ್ ಹೇಳಿದೆ. ಕೋವಿಡ್ ಹಿನ್ನಲೆಯಲ್ಲಿ ಹಾಕಿದ್ದ ವಿಮಾನ ಸಂಚಾರ ನಿರ್ಬಂಧವನ್ನು ದುಬೈ ರದ್ದುಗೊಳಿಸಿದೆ.

ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾಕ್ಕೆ ಜೂನ್ 23ರಿಂದ ವಿಮಾನ ಹಾರಾಟ ನಡೆಸುವುದಾಗಿ ಘೋಷಣೆ ಮಾಡಲಾಗಿದೆ. ವಿಮಾನದಲ್ಲಿ ಸಂಚಾರ ನಡೆಸಬೇಕಾದರೆ ಯುಎಇ ಮಾನ್ಯತೆ ಪಡೆದ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು.

ದುಬೈನ ನೈಸರ್ಗಿಕ ವಿಕೋಪ ಮತ್ತು ಬಿಕ್ಕಟ್ಟು ನಿರ್ವಹಣೆಯ ಉನ್ನತ ಮಟ್ಟದ ಸಮಿತಿ ವಿಮಾನ ಸಂಚಾರಕ್ಕೆ ಅವಕಾಶ ನೀಡಿದೆ. ವಿಮಾನ ಹಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾದ ಪ್ರಯಾಣಿಕರು ಕೋವಿಡ್ ಲಸಿಕೆ ಪಡೆದಿರಬೇಕು. ಸಂಚಾರ ಆರಂಭಿಸುವ 48 ಗಂಟೆಗಳ ಮೊದಲ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು.

ಭಾರತದಿಂದ ದುಬೈಗೆ ಬರುವ ಪ್ರಯಾಣಿಕರು ಆರ್‌ಟಿಪಿಸಿಆರ್ ವರದಿ ಬರುವ ತನಕ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಬೇಕು. 24 ಗಂಟೆಯಲ್ಲಿ ವರದಿ ಕೈ ಸೇರಲಿದೆ.

English summary
Abu Dhabi, the capital of the United Arab Emirates, is offering tourists free COVID-19 vaccinations that were previously restricted to UAE citizens and residency visa holders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X