ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವ ನಾಯಕರಿಗೆ ವೇದಿಕೆಯಾಗಲಿದೆ ಹುಬ್ಬಳ್ಳಿ ಸಮ್ಮೇಳನ

|
Google Oneindia Kannada News

ಹುಬ್ಬಳ್ಳಿ, ಫೆ. 5 : ಫೆಬ್ರವರಿ 6 ರಂದು ಹುಬ್ಬಳಿಯ ವಿದ್ಯಾನಗರದಲ್ಲಿ 5 ನೇ ವರ್ಷದ ಯುವ ಸಮ್ಮೇಳನ ನಡೆಯಲಿದೆ. ನಾಯಕತ್ವ, ಸಂಶೋಧನೆ, ಆರೋಗ್ಯ, ಕೃಷಿ, ಮಾಹಿತಿ ಮತ್ತು ತಂತ್ರಜ್ಞಾನ ಸೇರಿದಂತೆ ಹಲವಾರು ಸಂಗತಿಗಳ ಬಗ್ಗೆ ಚರ್ಚೆ ನಡೆಯಲಿದೆ.

150ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಮತ್ತು 1500 ಸಾವಿರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯದ ವಿದ್ಯಾರ್ಥಿಗಳು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. [ನ್ಯಾಷನಲ್‌ ಇನ್ಸುರೆನ್ಸ್‌ ಕಂಪೆನಿಯಲ್ಲಿ ಕೆಲಸ ಖಾಲಿ ಇದೆ]

ಹೆಚ್ಚಿನ ಮಾಹಿತಿಗೆ www.leadcampus.org ವೆಬ್ ತಾಣ ಮತ್ತು ಸಮ್ಮೇಳನದ ಆಯೋಜಕ ಅಭಿನಂದನ್ 9900053763 ಅವರನ್ನು ಸಂಪರ್ಕಿಸಬಹುದು.

ನಾಯಕತ್ವ ತರಬೇತಿ

ನಾಯಕತ್ವ ತರಬೇತಿ

1200 ಪ್ರೊಜೆಕ್ಟ್ ಗಳಲ್ಲಿ ಆಯ್ಕೆಯಾದ 60 ಅತ್ಯುತ್ತಮ ನಾಯಕತ್ವ ಯೋಜನೆಗಳನ್ನು ಮಂಡಿಸಲಾಗುವುದು. ಶಾಲಾ ಮಕ್ಕಳಲ್ಲಿ ವೆಚ್ಚಕಡಿತದ ಜಾಗೃತಿ, ಮಹಿಳಾ ಸಬಲಿಕರಣ, ಶೌಚಾಲಯ ನಿರ್ಮಾಣ ಅಗತ್ಯ ಮತ್ತು ಜಾಗೃತಿ, ನೀರು ಬಳಸಿ ದ್ವಿಚಕ್ರ ವಾಹನದ ಮೈಲೇಜ್ ಹೆಚ್ಚಿಸುವ ತಂತ್ರ, ವಾಯು ಮಾಲಿನ್ಯ ತಡೆಗೆ ನೂತನ ತಂತ್ರಗಳು ಸೇರಿದಂತೆ ಅನೇಕ ಪ್ರೊಜೆಕ್ಟ್ ಗಳನ್ನು ವಿದ್ಯಾರ್ಥಿಗಳು ಮಂಡಿಸಲಿದ್ದಾರೆ.

ಜಾಗೃತಿಗೆ ಮೊದಲ ಆದ್ಯತೆ

ಜಾಗೃತಿಗೆ ಮೊದಲ ಆದ್ಯತೆ

ಮಕ್ಕಳಲ್ಲಿ, ಮಹಿಳೆಯರಲ್ಲಿ ದೇಶಭಕ್ತಿ ಮತ್ತು ಪರಿಸರ ಪ್ರೇಮದ ಜಾಗೃತಿ, ಮತದಾನ ಜಾಗೃತಿ ಮೂಡಿಸುವ ಕೆಲಸವನ್ನು ವಿದ್ಯಾರ್ಥುಗಳು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಹೊಸ ಯೋಜನೆಗಳಿಗೆ, ಚಿಂತನೆಗಳಿಗೆ ಸಮ್ಮೇಳನ ವೇದಿಕೆಯಾಗುವುದರಲ್ಲಿ ಅನುಮಾನವಿಲ್ಲ.

ಏನಿದು ಲೀಡ್ ಪ್ರೊಗ್ರಾಮ್

ಏನಿದು ಲೀಡ್ ಪ್ರೊಗ್ರಾಮ್

ದೇಶಪಾಂಡೆ ಫೌಂಡೇಶನ್ ಮುಂದಾಳತ್ವದಲ್ಲಿ ಮೂಡಿಬಂದಿರುವ 'ಲೀಡ್' ನಾಯಕತ್ವ ನಿರೂಪಣೆ ಕಾರ್ಯಕ್ರಮದಲ್ಲಿ ರಾಜ್ಯ ಸೇರಿದಂತೆ ಪಕ್ಕದ ಆಂಧ್ರ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯದ ವಿದ್ಯಾರ್ಥಿಗಳು ತಮ್ಮ ನವೀನ ಯೋಜನೆಗಳನ್ನು ಹಂಚಿಕೊಂಡಿದ್ದಾರೆ. ಒಟ್ಟು 23 ಸಾವಿರ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದು ಅತ್ಯುತ್ತಮ ಯೋಜನೆಗಳನ್ನು ಸಮ್ಮೇಳನದಲ್ಲಿ ಪ್ರಚುರ ಪಡಿಸಲಾಗುವುದು.

ಪ್ರಮುಖರ ಮಾತು?

ಪ್ರಮುಖರ ಮಾತು?

ಶಾಂತಿ ನೊಬೆಲ್ ಪ್ರಶಸ್ತಿ ವಿಜೇತ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ, ಇನ್ಫೋಸಿಸ್ ದಿಗ್ಗಜ ನಾರಾಯಣ ಮೂರ್ತಿ, ಡಾ. ಗುರುರಾಜ್ ದೇಶಪಾಂಡೆ, ನಾರಾಯಣ ಹೃದಯಾಲಯದ ಮುಖ್ಯಸ್ಥ ದೇವಿಪ್ರಸಾದ್ ಶೆಟ್ಟಿ, ರೆಡ್ ಬಸ್ ಸಂಸ್ಥೆಯ ಫಣಿಂದ್ರ ಸಮಾ ಸೇರಿದಂತೆ ಅನೇಕರು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣದ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ.

English summary
On 6 February, 2015, thousands of academicians, entrepreneurs and enthusiastic youth will assemble for the fifth annualYuva Summit,a conference focused on instilling leadership, innovation and entrepreneurship among youth at DCSE Building, Hubli.On this occasion, young college students will showcase their innovative leadership projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X