ಪ್ರಾಚಾರ್ಯರಿಗೆ ಜಾತಿ ನಿಂದನೆ ಮಾಡಿದ್ದ ಮಹಿಳೆಗೆ ಜೈಲು ಶಿಕ್ಷೆ
ಧಾರವಾಡ, ಜನವರಿ 03: ಕಾಲೇಜು ಪ್ರಾಚಾರ್ಯರಿಗೆ ಜಾತಿ ನಿಂದನೆ ಮಾಡಿದ್ದಲ್ಲದೇ, ಜೀವ ಬೆದರಿಕೆ ಹಾಕಿದ್ದ ಮಹಿಳೆಗೆ ಒಂದು ವರ್ಷ ಜೈಲು ಹಾಗೂ 11 ಸಾವಿರ ರೂ, ದಂಡ ವಿಧಿಸಿ ಧಾರವಾಡದ 2 ನೇ ಜಿಲ್ಲಾ ಸತ್ರ ನ್ಯಾಯಾಲಯ ಗುರುವಾರ ಆದೇಶಿದೆ.
ರಮಾ ಕುಲಕುರ್ಣಿ ಎಂಬ ಮಹಿಳೆಯೇ ಶಿಕ್ಷೆಗೆ ಗುರಿಯಾದ ಮಹಿಳೆ. ಇವರು 2018 ರ ಮೇ 3 ರಂದು ನಗರದ ಕರ್ನಾಟಕ ವಿಜ್ಞಾನ ಕಾಲೇಜಿಗೆ ಬಂದು ಪ್ರಾಚಾರ್ಯ ಡಾ.ಚನ್ನಪ್ಪ ಮೂಲಿಮನಿ ಅವರೊಂದಿಗೆ ಜಗಳವಾಡಿಕೊಂಡಿದ್ದರು.
ರಮಾ ಕುಲಕರ್ಣಿ ಅವರ ಮಗ ಪ್ರಥಮ ಪಿಯುಸಿ ಓದುತ್ತಿದ್ದ. ತನ್ನ ಮಗ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಲು ನೀನೇ ಕಾರಣ ಎಂದು ಪ್ರಾಚಾರ್ಯರಿಗೆ ಬೈದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದರು.

ರಮಾ ಅವರ ವಿರುದ್ದ ಪ್ರಾಚಾರ್ಯ ಡಾ.ಚನ್ನಪ್ಪ ಮೂಲಿಮನಿ ಅವರು ಉಪನಗರ ಪೊಲೀಸ್ ಠಾಣಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಎಸಿಪಿ ಎಂ.ಎನ್.ರುದ್ರಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣಣಕ್ಕೆ ಸಂಬಂಧಪಟ್ಟಂತೆ ವಾದ-ಪ್ರತಿವಾದ ಆಲಿಸಿದ ನ್ಯಾ.ಸಿ.ಎಂ.ಗಂಗಾಧರ ಅವರು ಗುರುವಾರ ಶಿಕ್ಷೆ ಪ್ರಕಟಿಸಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.
ರಮಾ ಕುಲಕರ್ಣಿ ಅವರು ಮಹಾದಾಯಿ, ಕಳಸಾ-ಬಂಡೂರಿ ಸೇರಿ ಹಲವು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 2018 ರ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಪಶ್ಚಿಮ ಕೇತ್ರದಿಂದ ಸ್ಪರ್ಧಿಸಿ ಸೋತಿದ್ದರು.












Click it and Unblock the Notifications