ಹುಬ್ಬಳ್ಳಿ ಪೊಲೀಸರ ಭರ್ಜರಿ ಬೇಟೆ, ಬೈಕ್ ಕಳ್ಳರಿಬ್ಬರ ಬಂಧನ

ಹುಬ್ಬಳ್ಳಿ, ಫೆಬ್ರುವರಿ, 03: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್ ಗಳನ್ನು ಕದ್ದು, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ಹುಬ್ಬಳ್ಳಿ ನಗರ ಪೊಲೀಸರು ಬಂಧಿಸಿದ್ದು, ಅವರಿಂದ 15 ಮೋಟರ್ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಕೇಶ್ವಾಪುರ ನಿವಾಸಿ ಕ್ಲೈಮೆಂಟ್ ಬಬಲೂ ರಿಚರ್ಡ್ ಲಾಜಸ (36) ಹಾಗೂ ನವಲಗುಂದ ತಾಲೂಕು ಮಣಕವಾಡ ಗ್ರಾಮದ ಭೀಮರಡ್ಡಿ ಹನುಮರಡ್ಡಿ ನಾಗಾವಿ (29) ಬಂಧಿತರು. ಈ ಹದಿನೈದು ಬೈಕ್ ಗಳ ಬೆಲೆ 4ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.[ಹುಬ್ಬಳ್ಳಿ ಬೈಕ್ ಸವಾರರಿಗೆ ಪೊಲೀಸರ ಭಯ]

Hubballi

ಬಬಲೂ ರಿಚರ್ಡ್ ಲಾಜಸ ಮತ್ತು ಭೀಮರಡ್ಡಿ ಹನುಮರಡ್ಡಿ ನಾಗಾವಿ ತಮ್ಮ ಸಹಪಾಠಿಗಳ ಜೊತೆ ಸೇರಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್ ಗಳನ್ನು ಸಲೀಸಾಗಿ ಕದಿಯುತ್ತಿದ್ದರು. ಬಳಿಕ ಕದ್ದ ಬೈಕ್ ಗಳನ್ನು ಇತರರಿಗೆ ಮಾರುತ್ತಿದ್ದರು.

ಸೋಮವಾರ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಆರೋಪಿಗಳು ಮತ್ತು ಆತನ ಸಹಪಾಠಿಗಳನ್ನು ಸಂಶಯದ ಮೇರೆಗೆ ಪೊಲೀಸರು ಬಂಧಿಸಿದ್ದು, ಬಳಿಕ ವಿಚಾರಣೆ ನಡೆಸಿದಾಗ ವಿವಿಧೆಡೆ ಬೈಕ್ ಕದ್ದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಇವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.[ಇಡೀ ಕರ್ನಾಟಕಕ್ಕೆ ಇನ್ಮುಂದೆ ಶಿರಸ್ತ್ರಾಣ ಕಡ್ಡಾಯ]

Hubballi

ಪಿಐ ಶ್ಯಾಂರಾಜ್ ಎಸ್.ಸಜ್ಜನ, ಪಿಎಸ್ಐ ಸುರೇಶ ಕಲಭಾವಿ, ಸಿಬ್ಬಂದಿಗಳಾದ ಡಿ.ವೈ.ಭಜಂತ್ರಿ, ಎಸ್.ಎನ್.ದೇಯಣ್ಣವರ, ಸಿ.ಎಸ್.ಪಟ್ಟಣಶೆಟ್ಟಿ, ಚಂದ್ರ ಚಲವಾದಿ, ಎಸ್.ಎಚ್.ಕಲ್ಲಾಪೂರ, ಕೃಷ್ಣಾ ಕಟ್ಟಿಮನಿ, ಎಸ್.ಎಸ್.ಪಾಂಡೆ, ವಿ.ಕೆ.ಜಾಡರ, ಮಾಲತೇಶ ಗೋನಾಳ ಪ್ರಕರಣ ಬೇಧಿಸುವಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+