ನಾಲ್ವರು ಗಣ್ಯರ ಸಿಡಿ ಶೀಘ್ರ ಬಿಡುಗಡೆ: ಮುಲಾಲಿ

Posted By:
Subscribe to Oneindia Kannada

ಧಾರವಾಡ, ಡಿಸೆಂಬರ್ 23: ಮಾಜಿ ಅಬಕಾರಿ ಸಚಿವ ಎಚ್.ವೈ. ಮೇಟಿ ಅವರ ರಾಸಲೀಲೆ ಪ್ರಕರಣವನ್ನು ಬಯಲಿಗೆಳೆದು ಚರ್ಚೆಗೆ ಕಾರಣವಾಗಿದ್ದ ಉದ್ಯಮಿ ರಾಜಶೇಖರ ಮುಲಾಲಿ, ಶೀಘ್ರವೇ ಮತ್ತಷ್ಟು ಗಣ್ಯ ರಾಜಕಾರಣಿಗಳ ಸಿಡಿ ಬಿಡುಗಡೆಗೊಳಿಸುವುದಾಗಿ ಮತ್ತೊಮ್ಮೆ ನುಡಿದಿದ್ದಾರೆ.

ಧಾರವಾಡದ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರಕ್ಕೆ ಮದುವೆ ಸಮಾರಂಭಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನು ಇಬ್ಬರು ಶಾಸಕರು ಹಾಗು ಇಬ್ಬರು ಸಚಿವರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಆ ಸಿಡಿಗಳನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.[ಮೇಟಿ ರಾಸಲೀಲೆ ಬಯಲಿಗೆಳೆದ ಮುಲಾಲಿಗೆ ಪೊಲೀಸರ 6 ಪ್ರಶ್ನೆ]

The four politicians rapid to release on CD

ಮಾಜಿ ಸಚಿವ ಮೇಟಿ ಅಷ್ಟೇ ಅಲ್ಲ ಅಂತಹ ಸಾಕಷ್ಟು ಜನಪ್ರತಿನಿಧಿಗಳು ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಂತಹ ಕೆಲವರ ಮಾಹಿತಿ ನನ್ನ ಬಳಿಯಿದೆ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.[ಮೇಟಿ ರಾಸಲೀಲೆ: ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ಬಾಂಬ್]

ಮುಂದಿನ ಹೋರಾಟದ ಬಗ್ಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಬೇಟಿ ಮಾಡಿ ಚರ್ಚಿಸಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಶೀಘ್ರ ಭಷ್ಟಾಚಾರ ನಿರ್ಮೂಲನೆಗಾಗಿ ದೊಡ್ಡ ಮಟ್ಟದ ಹೋರಾಟ ಕೈಗೆತ್ತಿಕೊಳ್ಳುವುದಾಗಿ ರಾಜಶೇಖರ ಮುಲಾಲಿ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The four politicians shortly to released on CD next nowadays says rajshekar mulali in marriage program in dharwad.
Please Wait while comments are loading...