ಕಡಿಮೆ ದರದ ಟಾಟಾ ಟಿಯಾಗೋದ ವಿಶೇಷತೆಗಳೇನು?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್, 29: ಟಾಟಾದವರ 'ಟಿಯಾಗೋ' ಹೆಸರಿನ ಹೊಸ ಕಾರನ್ನು ಗುರುವಾರ ನಗರದ ಮಾಣಿಕಬಾಗ್ ಶೋರೂಂ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಟಾಟಾ ಕಂಪನಿಯ ಪ್ರಯಾಣಿಕ ವಾಹನಗಳ ವಿಭಾಗದ ಉತ್ತರ ಕರ್ನಾಟಕ ಹಾಗೂ ಗೋವಾ ವಿಭಾಗದ ಮುಖ್ಯಸ್ಥ ನಿಶಾಂತ ಕೆ ಮಾತನಾಡಿ, ಟಿಯಾಗೋ ಕಾರಿನಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸೌಕರ್ಯಗಳೊಂದಿಗೆ ವಿನ್ಯಾಸ, ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದರು.

tata

ಕ್ರೋಮ್ ಹ್ಯಾಂಡಲ್, ಇಂಧನ ಮಿತವ್ಯಯ ಮತ್ತು ಉತ್ತಮ ಚಾಲನಾ ಅನುಭವಕ್ಕೆ ಎರಡು ತರಹದ ಡ್ರೈವ್ ಮೋಡ್ ಗಳಿವೆ, ಹರ್ಮಾನ್ ಪ್ರತ್ಯೇಕವಾಗಿ ವಿನ್ಯಾಸಗೊಳಿಸಿದ ಮ್ಯೂಸಿಕ್ ಸಿಸ್ಟೆಮ್, ಜ್ಕೂಕ್ ಕಾರ್ ಯಾಪ್ ಕೂಡ ಅಳವಡಿಸಲಾಗಿದೆ ಎಂದು ವಿವರ ನೀಡಿದರು.[ನೋಂದಣಿ ಸಂಖ್ಯೆ ಇದ್ರೆ ಸಾಕು, ಒಂದೆ ಕ್ಲಿಕ್‌ನಲ್ಲಿ ಎಲ್ಲ ಮಾಹಿತಿ]

ಕಾರಿನ ಬೆಲೆ ಹೀಗಿದೆ: ಎಕ್ಸ್ ಬಿ, ಎಕ್ಸ್ ಇ, ಎಕ್ಸ್ ಎಂ, ಎಕ್ಸ್ ಟಿ ಹಾಗೂ ಎಕ್ಸ್ ಝೆಡ್ ಮಾಡೆಲ್ ಸೇರಿದಂತೆ ಒಟ್ಟು 6 ಬಣ್ಣಗಳಲ್ಲಿ ಟಿಯಾಗೋ ಕಾರು ಲಭ್ಯವಿದೆ. ಪೆಟ್ರೋಲ್ ಎಂಜಿನ್ ಎಕ್ಸ್ ಶೋರೂಮ್ ಮೆಲೆ 3.28 ಲಕ್ಷ ರೂ.ನಿಂದ ಆರಂಭವಾಗುತ್ತದೆ. ಡಿಸೇಲ್ ಎಂಜಿನ್ 4.04 ಲಕ್ಷ ರೂ. ನಿಂದ ಆರಂಭಗೊಳ್ಳುತ್ತದೆ. ಪೆಟ್ರೋಲ್ ಕಾರು ಲೀಟರ್ 23.84 ಕಿ.ಮೀ, ಡಿಸೇಲ್ ಕಾರು 27.28 ಕಿ.ಮೀ ಮೈಲೇಜ್ ನೀಡುತ್ತದೆ. ಈಗಾಗಲೇ ನಗರದಿಂದ 70 ಹಾಗೂ ಕರ್ನಾಟಕದಲ್ಲಿ 1500 ಕಾರುಗಳಿಗೆ ಬೇಡಿಕೆ ಬಂದಿದೆ ಎಂದು ತಿಳಿಸಿದರು.[ನಮ್ಮ ಬೆಂಗಳೂರು ಪ್ರವೇಶಿಸಿದ ಬಹುನಿರೀಕ್ಷಿತ ಟಿಯಾಗೊ]

-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata Tiago car launched at Hubballi Manickbag showroom on 28 April 2016. The car is available in petrol and diesel variants. Compared to the prices of small cars of other brands, the price of the Tata Tiago was the least. The car has dual front airbags, advanced auto braking system, corner stability control, parking sensors appearing on the front windscreen are some of the main features of the model.
Please Wait while comments are loading...