ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಪಾದಯಾತ್ರೆ
ಧಾರವಾಡ,
ಮಾ.26 : ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಕ್ಷೇತ್ರದಲ್ಲಿ ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದಾರೆ. ನಾಮಪತ್ರ ಸಲ್ಲಿಸಿರುವ ಅವರು ಕ್ಷೇತ್ರದಲ್ಲಿ ಬುಧವಾರ ಪಾದಯಾತ್ರೆ ಮಾಡುವ ಮೂಲಕ ಮತ ಯಾಚಿಸಿದರು. id="toptextpromo"> id='are-slot-1' class='oiad oi-axt oiadv'>ಬುಧವಾರ
ಪ್ರಹ್ಲಾದ್ ಜೋಶಿ ಕ್ಷೇತ್ರದ ವ್ಯಾಪ್ತಿಯ ಶಿವಳ್ಳಿ ಹಾಗೂ ಹೆಬ್ಬಳ್ಳಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸುವ ಮೂಲಕ ಮತಯಾಚಿಸಿದರು. ಗ್ರಾಮದಲ್ಲಿ ಜನರರೊಂದಿಗೆ ಸಭೆ ನಡೆಸುವ ಮೂಲಕ ಕರ್ನಾಟಕ ಮತ್ತು ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಚಿತ್ರಗಳಲ್ಲಿ ನೋಡಿ ಜೋಶಿ ಪ್ರಚಾರ [ಮೋದಿ ಮಾತನ್ನು ಕನ್ನಡಲ್ಲಿ ಕೇಳಿರಿ] id='are-slot-2' class='oiad oi-axt oiadv'>
ಕ್ಷೇತ್ರದಲ್ಲಿ ಜೋಶಿ ಬಿರುಸಿನ ಪ್ರಚಾರ
ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಸ್ವ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯ ಪ್ರವಾಸದ ಜೊತೆ ಜೊತೆಗೆ ಕ್ಷೇತ್ರದಲ್ಲೂ ಪ್ರಚಾರ ನಡೆಸಿ ಮತ ಯಾಚಿಸುತ್ತಿದ್ದಾರೆ.

ಪಾದಯಾತ್ರೆ ಮೂಲಕ
ಬುಧವಾರ ಪ್ರಹ್ಲಾದ್ ಜೋಶಿ ಶಿವಳ್ಳಿ ಹಾಗೂ ಹೆಬ್ಬಳ್ಳಿ ಗ್ರಾಮಗಳಲ್ಲಿ ಪ್ರಾದಯಾತ್ರೆ ನಡೆಸುವ ಮೂಲಕ ಮತ ಯಾಚನೆ ಮಾಡಿದರು.

ಬಿಜೆಪಿ ಬೆಂಬಲಿಸುವಂತೆ ಕರೆ
ಶಿವಳ್ಳಿ ಮತ್ತು ಹೆಬ್ಬಳ್ಳಿ ಗ್ರಾಮಗಳಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಪ್ರಹ್ಲಾದ್ ಜೋಶಿ ಯುಪಿಎ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಅವರಿಗೆ ಮಾಹಿತಿ ನೀಡಿ, ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಜೋಶಿ ಎದುರಾಳಿಗಳು
ಧಾರವಾಡ ಕ್ಷೇತ್ರದ ಚುನಾವಣಾ ಕಣದ ಕುರಿತು ಅಂತಿಮ ಚಿತ್ರಣ ಲಭ್ಯವಾಗಿದೆ. ಬಿಜೆಪಿಯಿಂದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನಿಂದ ವಿಜಯ್ ಕುಲಕರ್ಣಿ, ಎಎಪಿಯಿಂದ ಹೇಮಂತ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಹ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.












Click it and Unblock the Notifications