ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ; ಕೋವಿಡ್ ಸೋಂಕಿತರಿಗಾಗಿ 24*7 ಓಪಿಡಿ ಕೌಂಟರ್ ಆರಂಭ

|
Google Oneindia Kannada News

ಧಾರವಾಡ, ಜನವರಿ 21; ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಬೆಂಗಳೂರು ನಗರ ಮಾತ್ರವಲ್ಲ ವಿವಿಧ ಜಿಲ್ಲೆಗಳಲ್ಲಿಯೂ ಏರಿಕೆಯಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ 698 ಹೊಸ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3787ಕ್ಕೆ ಏರಿಕೆಯಾಗಿದೆ. ಜಿಲ್ಲಾಡಳಿತ ಕೋವಿಡ್ ಸೋಂಕಿತರ ಸಹಾಯಕ್ಕಾಗಿ ಹಲವು ವ್ಯವಸ್ಥೆ ಮಾಡಿದೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಧಾರವಾಡ ಜಿಲ್ಲಾಡಳಿತ ಕೋವಿಡ್ ಸೋಂಕಿತರ ಮತ್ತು ಶಂಕಿತರ ಪರೀಕ್ಷೆ, ಚಿಕಿತ್ಸೆಗೆ ಅನುಕೂಲವಾಗುವಂತೆ ದಿನದ 24 ಗಂಟೆಗಳ ಕಾಲವೂ ಸೇವೆ ನೀಡುವ ಹೊರರೋಗಿ ಚಿಕಿತ್ಸಾ ವಿಭಾಗ ಆರಂಭಿಸಿದೆ. ಜಿಲ್ಲೆಯಲ್ಲಿ 58 ಸ್ವ್ಯಾಬ್ ಸಂಗ್ರಹ ಕೇಂದ್ರಗಳನ್ನು ಸಹ ಆರಂಭಿಸಲಾಗಿದೆ.

ಹುಬ್ಬಳ್ಳಿ; ಕಿಮ್ಸ್ ಆವರಣದಲ್ಲಿ 24*7 ಸ್ವ್ಯಾಬ್ ಸಂಗ್ರಹ, ಚಿಕಿತ್ಸೆ ಹುಬ್ಬಳ್ಳಿ; ಕಿಮ್ಸ್ ಆವರಣದಲ್ಲಿ 24*7 ಸ್ವ್ಯಾಬ್ ಸಂಗ್ರಹ, ಚಿಕಿತ್ಸೆ

ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. "ಜಿಲ್ಲಾ ಆಸ್ಪತ್ರೆ, ಕಿಮ್ಸ್ ಸೇರಿದಂತೆ 8 ಕೇಂದ್ರಗಳಲ್ಲಿ ಈ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಕೋವಿಡ್ ಸೋಂಕಿತರು, ಸೋಂಕಿನ ಲಕ್ಷಣ ಹೊಂದಿರುವ ಮತ್ತು ಲಕ್ಷಣ ಹೊಂದಿರದ ಸೋಂಕಿತರು ತಮ್ಮ ಸಮೀಪದ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ, ಔಷಧಿ ಪಡೆಯಬಹುದಾಗಿದೆ" ಎಂದು ಹೇಳಿದ್ದಾರೆ.

ಧಾರವಾಡ; ಕೋವಿಡ್ ಸೋಂಕಿತೆ ಸಾವು, ವರದಿ ಕೇಳಿದ ಡಿಸಿ ಧಾರವಾಡ; ಕೋವಿಡ್ ಸೋಂಕಿತೆ ಸಾವು, ವರದಿ ಕೇಳಿದ ಡಿಸಿ

ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ವಿವಿಧ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಜಿಲ್ಲೆಯ ಸಾರ್ವಜನಿಕರು ಸಹಕಾರ ನೀಡಬೇಕು ಮತ್ತು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಕರೆದ ಧಾರವಾಡ ಜಿಲ್ಲಾ ಪಂಚಾಯಿತಿ ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಕರೆದ ಧಾರವಾಡ ಜಿಲ್ಲಾ ಪಂಚಾಯಿತಿ

ವಿವಿಧ ವ್ಯವಸ್ಥೆಗಳು ಆರಂಭ

ವಿವಿಧ ವ್ಯವಸ್ಥೆಗಳು ಆರಂಭ

ಕೋವಿಡ್ ಲಕ್ಷಣ ಹೊಂದಿರುವ ಮತ್ತು ಲಕ್ಷಣ ಇಲ್ಲದಿರುವ ಸೋಂಕಿತರು ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವುದರಿಂದ ಸೋಂಕು ಇತರರಿಗೆ ಹರಡುವ ಮತ್ತು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಅಂತಹವರ ಸಂಚಾರ ಕಡಿಮೆ ಮಾಡಲು, ಗಂಟಲು ದ್ರವ ಸಂಗ್ರಹ, ಫಿವರ್ ಕ್ಲಿನಿಕ್ ಹಾಗೂ ಓಪಿಡಿ ಘಟಕಗಳನ್ನು ವಿವಿಧ ಸ್ಥಳಗಳಲ್ಲಿ ಆರಂಭಿಸಲಾಗಿದೆ. ಕೋವಿಡ್ ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ಹಾಗೂ ಔಷಧಿ ನೀಡಲು ದಿನದ 24 ಗಂಟೆ ಸೇವೆಗೆ ಲಭ್ಯವಿರುವ 8 ಓಪಿಡಿ ಕೇಂದ್ರಗಳನ್ನು ಧಾರವಾಡ ಜಿಲ್ಲಾಡಳಿತ ಆರಂಭಿಸಿದೆ.

ಎಲ್ಲೆಲ್ಲಿ ಲಭ್ಯವಿದೆ ಓಪಿಡಿ ಸೌಲಭ್ಯ

ಎಲ್ಲೆಲ್ಲಿ ಲಭ್ಯವಿದೆ ಓಪಿಡಿ ಸೌಲಭ್ಯ

ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್, ರೈಲ್ವೇ ಆಸ್ಪತ್ರೆ, ಚಿಟಗುಪ್ಪಿ ಹಾಗೂ ಇಎಸ್‍ಐ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಅಂಜುಮನ್ ಹಾಸ್ಟೇಲ್, ಸಂಗೊಳ್ಳಿ ರಾಯಣ್ಣ ನಗರದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನ ಹಾಗೂ ಅಂಚಟಗೇರಿಯ ಮೊರಾರ್ಜಿ ದೇಸಾಯಿ ವಸತಿ ನಿಲಯಗಳಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಹೊರ ರೋಗಿ ಚಿಕಿತ್ಸಾ ಕೌಂಟರ್ ತೆರೆಯಲಾಗಿದೆ. ಇಲ್ಲಿ ವೈದ್ಯರು ಆರೋಗ್ಯ ಸೇವೆ, ಔಷಧಿಗಳನ್ನು ನೀಡುತ್ತಿದ್ದಾರೆ.

24 ಗಂಟೆ ತೆರೆದಿರುವ ಫೀವರ್ ಕ್ಲಿನಿಕ್

24 ಗಂಟೆ ತೆರೆದಿರುವ ಫೀವರ್ ಕ್ಲಿನಿಕ್

ಜಿಲ್ಲಾ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆ, ಚಿಟಗುಪ್ಪಿ ಹಾಗೂ ಇಎಸ್‍ಐ ಆಸ್ಪತ್ರೆ, ರೈಲ್ವೇ ಆಸ್ಪತ್ರೆ ಮತ್ತು ಎಸ್.ಡಿ.ಎಂ ಖಾಸಗಿ ಆಸ್ಪತ್ರೆಯಲ್ಲಿ 24 ಗಂಟೆ ಸೇವೆ ನೀಡುವ ಫಿವರ್ ಕ್ಲಿನಿಕ್‍ಗಳನ್ನು ತೆರೆಯಲಾಗಿದೆ. ಇಲ್ಲಿ ಸೋಂಕಿತರ ಸ್ವ್ಯಾಬ್ ಸಂಗ್ರಹ ಮಾಡಿ ಪ್ರಾಥಮಿಕ ಚಿಕಿತ್ಸೆ, ಔಷಧಿ ನೀಡಲಾಗುತ್ತದೆ.

ಇನ್ನು ಜಿಲ್ಲಾ ಆಸ್ಪತ್ರೆಯ ಓಪಿಡಿ ಚೀಟಿ ನೀಡುವ ಹೊರರೋಗಿ ನೋಂದಣಿ ವಿಭಾಗವು ಜನವರಿ 20 ರಿಂದ ಬೆಳಗ್ಗೆ 8 ಗಂಟೆಯಿಂದ ಕಾರ್ಯನಿರ್ವಹಿಸಲು ಆರಂಭಿಸಿದೆ. ಆಸ್ಪತ್ರೆಗೆ ಆಗಮಿಸುವ ಮಕ್ಕಳ, ಗರ್ಭಿಣಿಯರ ನೋಂದಣಿಗೆ ಪ್ರತ್ಯೇಕ ಕೌಂಟರ್ ಆರಂಭ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನವಿ ಮಾಡಲಾಗಿದೆ.

58 ಸ್ವ್ಯಾಬ್ ಸಂಗ್ರಹ ಕೇಂದ್ರಗಳು

58 ಸ್ವ್ಯಾಬ್ ಸಂಗ್ರಹ ಕೇಂದ್ರಗಳು

ಧಾರವಾಡ ಜಿಲ್ಲೆಯ 51 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕು ಆಸ್ಪತ್ರೆಗಳು ಹಾಗೂ ರೈಲ್ವೇ ಆಸ್ಪತ್ರೆಗಳಲ್ಲಿ ಮತ್ತು ಎಸ್‍ಡಿಎಂ ಖಾಸಗಿ ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸ್ವ್ಯಾಬ್ ಸಂಗ್ರಹ ಮಾಡಲಾಗುತ್ತದೆ.

ಜಿಲ್ಲಾ ಆಸ್ಪತ್ರೆ, ಕಿಮ್ಸ್, ರೈಲ್ವೇ ಆಸ್ಪತ್ರೆಗಳಲ್ಲಿ ದಿನದ 24 ಗಂಟೆ ಸ್ವ್ಯಾಬ್ ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 58 ಸ್ಥಳಗಳಲ್ಲಿ ಸ್ವ್ಯಾಬ್ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ಸ್ವ್ಯಾಬ್ ಸಂಗ್ರಹಕ್ಕಾಗಿ 5 ಸಂಚಾರಿ ವಾಹನಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ತಾಲೂಕಿಗೆ ತಲಾ ಒಂದು ವಾಹನ ನೀಡಲಾಗಿದೆ.

Recommended Video

Indian Maharajas ತಮ್ಮ ಮೊದಲನೇ ಪಂದ್ಯದಲ್ಲೇ ಗೆದ್ದಿದ್ದು ಹೀಗೆ | Oneindia Kannada

English summary
Dharwad district administration set up 8 Out Patient Department (OPD) to teat Covid 19 patients. 58 Swab collection center available in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X