ಧಾರವಾಡ: ಸೈಕಲ್ ಕವಿ ಎಂದೇ ಖ್ಯಾತರಾಗಿದ್ದ ಐರಸಂಗ ನಿಧನ
ಧಾರವಾಡ, ನವೆಂಬರ್ 13: ಸೈಕಲ್ ಕವಿ ಎಂದೇ ಪ್ರಖ್ಯಾತರಾಗಿದ್ದ ಆಶುಕವಿ ಐರಸಂಗ(91) ನಿಧನರಾಗಿದ್ದಾರೆ. ತಮ್ಮ ಜೀವನದುದ್ದಕ್ಕೂ ಬಡತನ ಹೊದ್ದು ಬೆಳೆದ ಅವರು ಸೈಕಲ್ ಮೇಲೆಯೇ ಸುತ್ತಾಡುತ್ತಿದ್ದರು.
50ಕ್ಕೂ ಹೆಚ್ಚು ಕವನ ಸಂಕಲನಗಳನ್ನು ರಚಿಸಿದ್ದ ಅವರ ಸಾಹಿತ್ಯ ಕೊಡುಗೆ ನೋಡಿ ಧಾರವಾಡದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.
ವಿಸಿ ಐರಸಂಗ ಅವರು ಮಗ, ಮಗಳು, ಮೊಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಸಂತ್ಯಸಂಸ್ಕಾರ ಬೆಳಗ್ಗೆ 11.30ಕ್ಕೆ ಹೊಸ ಯಲ್ಲಾಪುರ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು,ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸೈಕಲ್ ಮೇಲೆ ಬಂದಿದ್ದರು. ಜನರು ಇವರನ್ನು ಸೈಕಲ್ ಕವಿ ಎಂದು ಕರೆಯುತ್ತಿದ್ದರು.
ನೂರಾರು ಆಶುಕವಿತೆಗಳನ್ನು ಬರೆದಿರುವ ಅವರು, ಅವುಗಳನ್ನು ಪಾಕೆಟ್ ಪುಸ್ತಕ ರೂಪದಲ್ಲಿ ಮುದ್ರಿಸಿ ತಮ್ಮ ಸೈಕಲ್ ಮೇಲಿಟ್ಟು ಮಾರುತ್ತಿದ್ದರು.
Recommended Video
ರವಿ ಬೆಳಗೆರೆ ಮಾಡಿದ ಸಹಾಯವನ್ನು ನೆನಪಿಸಿಕೊಂಡ R ಅಶೋಕ್ | Oneindia Kannada












Click it and Unblock the Notifications