ಹುಬ್ಬಳ್ಳಿ ಕಿಮ್ಸ್ ನಲ್ಲಿ ಪಾರ್ಕಿಂಗ್ ನಿರ್ವಹಣೆ ಬೇಕಿತ್ತಾ?

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜೂನ್, 29: ನಗರದ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಇನ್ನು ಮೇಲೆ ವಾಹನ ಪಾರ್ಕಿಂಗ್ ಮಾಡಬೇಕಾದರೆ ಶುಲ್ಕ ತೆರಬೇಕಾಗಿದೆ. ಹೌದು,, ಕಿಮ್ಸ್ ಆವರಣದಲ್ಲಿ ವಾಹನ ಪಾರ್ಕಿಂಗ್ ಗಾಗಿ ಟೆಂಡರ್ ಕರೆಯಲಾಗಿದೆ. ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಜಾಹೀರಾತನ್ನು ನೀಡಿದೆ.

ಕರ್ನಾಟಕ ವೈದ್ಯಕೀಯ ಸಂಸ್ಥೆಯ (ಕಿಮ್ಸ್) ಆವರಣದಲ್ಲಿ ಪಾರ್ಕಿಂಗ್ ನಿರ್ವಹಣೆ ಮಾಡಲು ಜೂನ್ 24 ರಂದು ಟೆಂಡರ್ ಕರೆಯಲಾಗಿದೆ. ವಾಹನ ನಿಲುಗಡೆ ವ್ಯವಸ್ಥೆಯನ್ನು ನಿರ್ವಹಣೆ ಮಾಡಲು ಖಾಸಗಿಯವರಿಗೆ ನೀಡಿದ್ದೇಕೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.[ಕಳಸಾ ಬಂಡೂರಿ: ಜುಲೈ 14ಕ್ಕೆ ಉತ್ತರ ಕರ್ನಾಟಕ ಬಂದ್]

hubballi

ಸಾಮಾನ್ಯವಾಗಿ ಕಿಮ್ಸ್ ಆವರಣದಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ಸಂಬಂಧಿಕರು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ವೈದ್ಯರು, ಸಿಬ್ಬಂದಿಗಳು ವಾಹನ ತೆಗೆದುಕೊಂಡು ಬರುತ್ತಾರೆ. ಹೊರಗಿನವರು ಅಲ್ಲಿ ಬರುವ ಪ್ರಮೇಯವೇ ಉದ್ಭವಿಸುವುದಿಲ್ಲ. ಹೀಗಿದ್ದಾಗ್ಯೂ ವಿಶಾಲ ಜಾಗೆಯ ಹೊಂದಿರುವ ಕಿಮ್ಸ್ ನ ಆವರಣದಲ್ಲಿ ವಾಹನ ಪಾರ್ಕಿಂಗ್ ಗೆ ಶುಲ್ಕ ವಿಧಿಸುವ ನಿರ್ಧಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಿಮ್ಸ್ ನಲ್ಲಿ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳಿದ್ದಾರೆ. ಇವರು ಈಗ ಪಾರ್ಕಿಂಗ್ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಪಾರ್ಕಿಂಗ್ ಗಾಗಿ ಟೆಂಡರ್ ಕರೆದಿರುವುದು ಎಷ್ಟು ಸೂಕ್ತ ಎಂದು ಜನ ತಲೆ ಕೆರೆದುಕೊಳ್ಳುತ್ತಿದ್ದಾರೆ. ಟೆಂಡರ್ ಕರೆಯುವ ಮೂಲಕ ಕಿಮ್ಸ್ ಮತ್ತೊಂದು ಹಗರಣದಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಎಂದು ಹೆಸರು ಹೇಳಲಿಚ್ಛಿಸದ ಕಿಮ್ಸ್ ಸಿಬ್ಬಂದಿಯೊಬ್ಬರು ಹೇಳುತ್ತಾರೆ. [ಕಳಸಾ ಬಂಡೂರಿ ಯೋಜನೆ ಎಂದರೇನು?]

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಿಮ್ಸ್ ನಿರ್ದೇಶಕ ಡಾ.ದತ್ತಾತ್ರೇಯ ಬಂಟ್ ಅವರನ್ನು ಒನ್ ಇಂಡಿಯಾ ದೂರವಾಣಿ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಮಾಜಿ ಮೇಯರ್ ಪುತ್ರನಿಗೆ ಟೆಂಡರ್:

ಪಾರ್ಕಿಂಗ್ ಗೆ ಸಂಬಂಧಿಸಿದ ಟೆಂಡರ್ ಮಾಜಿ ಮೇಯರ್ ವೊಬ್ಬರ ಪುತ್ರರ ಪಾಲಾಗಲಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hubballi: Karnataka Institute of Medical Science (KIMS) parking tender issue became a controversy. The hospital Administration has issued a notification about parking management in hospital Campus. Now this move became talk of the town.
Please Wait while comments are loading...