ಧಾರವಾಡ; ಪೊಲೀಸ್ ತರಬೇತಿ ಶಾಲೆ ಕೋವಿಡ್ ಹಾಟ್ ಸ್ಪಾಟ್

ಧಾರವಾಡ, ಆಗಸ್ಟ್ 03: ಹುಬ್ಬಳ್ಳಿ- ಧಾರವಾಡ ಪೊಲೀಸ್ ತರಬೇತಿ ಶಾಲೆ ಧಾರವಾಡ ಜಿಲ್ಲೆಯ ಕೊರೊನಾ ವೈರಸ್ ಹಾಟ್‌ ಸ್ಪಾಟ್ ಆಗಿದೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 4,456.

Recommended Video

      ಗೃಹ ಮಂತ್ರಿಗೆ ಕೊರೋನ, ಯಾರನ್ನು ಬಿಡದ ಕೋರೋನ.!! | Oneindia Kannada

      ಕಳೆದ ನಾಲ್ಕು ದಿನದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ತರಬೇತಿ ಶಾಲೆಯಲ್ಲಿ 100 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಕಲಘಟಗಿ ರಸ್ತೆಯಲ್ಲಿ ತರಬೇತಿ ಶಾಲೆ ಇದೆ.

      ಸೋಂಕು ಹಡರುವಿಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವವರ ಆತಂಕ ಹೆಚ್ಚಿಸಿದೆ. ಸುಮಾರು 380 ಜನರು ಈ ಶಾಲೆಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

      Hubballi Dharwad Police Training School Now Corona Hotspot

      ಪೊಲೀಸ್ ಇಲಾಖೆಗೆ ಸೇರುವವರಿಗೆ ಇಲ್ಲಿ ಮೂಲ ತರಬೇತಿ ನೀಡಲಾಗುತ್ತದೆ. ಹಾಸ್ಟೆಲ್ ಸೌಲಭ್ಯವೂ ಇಲ್ಲಿ ಇದ್ದು, ತರಬೇತಿ ಪಡೆಯುತ್ತಿರುವ ಎಲ್ಲರೂ ಸಾಮೂಹಿಕ ಶೌಚಾಲಯ, ಮೆಸ್ ಸೌಲಭ್ಯ ಬಳಕೆ ಮಾಡಲಿದ್ದಾರೆ.

      ಈ ವರ್ಷದ ತರಬೇತಿ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಎಲ್ಲರನ್ನೂ ಮಾರ್ಚ್ 23ರಂದು ವಾಪಸ್ ಕಳಿಸಲಾಗಿತ್ತು. ಕಳೆದ ತಿಂಗಳು ಪುನಃ ತರಬೇತಿ ಪುನಃ ಆರಂಭವಾಗಿದ್ದು, ಎಲ್ಲರನ್ನೂ ವಾಪಸ್ ಕರೆಸಲಾಗಿದೆ.

      ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೆಲವು ನಿವೃತ್ತ ಅಧಿಕಾರಿಗಳು ತರಬೇತಿ ನೀಡಲು ಶಾಲೆಗೆ ಬರಲು ನಿರಾಕರಿಸುತ್ತಿದ್ದಾರೆ. ನಿತ್ಯ ತರಬೇತಿ ನೀಡುವ ಸಿಬ್ಬಂದಿಗಳು ತರಬೇತಿಯನ್ನು ಮುಂದುವರೆಸಿದ್ದಾರೆ.

      ಕೆಲವು ಸಿಬ್ಬಂದಿ ಮತ್ತು ಅಭ್ಯರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದ ಬಳಿಕವೂ ತರಬೇತಿ ಮುಂದುವರೆದಿತ್ತು. ಈಗ ಹೆಚ್ಚು ಅಭ್ಯರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ತರಬೇತಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+