ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ ಜಿಲ್ಲೆಯ ಜನರಿಗೆ ಎಚ್‌1 ಎನ್‌1 ಭೀತಿ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಸೆಪ್ಟಂಬರ್‌, 15: ಕಳೆದ ಹಲವಾರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹದಿಂದ ಕಂಗೆಟ್ಟಿರುವ ಧಾರವಾಡ ಜಿಲ್ಲೆಯ ಜನರಿಗೆ ಇದೀಗ ಎಚ್‌1 ಎನ್‌1 ಭೀತಿ ಎದುರಾಗಿದೆ.

ಮೊದಲೇ ಕುಂಭದ್ರೋಣ ಮಳೆಗೆ ಧಾರವಾಡ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಮನೆ, ಜಮೀನುಗಳು ಜಲಾವೃತವಾಗಿದ್ದು, ಜನರು ಅಕ್ಷರಶಃ ನಲುಗಿ ಹೋಗಿದ್ದರು. ಬೆಳೆಗಳು ಸಂಪೂರ್ಣ ಜಲಾವೃತವಾಗಿದ್ದು, ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಮತ್ತೊದೆಡೆ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿ ಸಂಗ್ರಹವಾದ ಮಳೆ ನೀರನ್ನು ಹೊರಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. ಇದರ ಮಧ್ಯೆ ಭಯಾನಕ ಖಾಯಿಲೆಯೊಂದು ಒಕ್ಕರಿಸಿ ಜಿಲ್ಲೆಯ ಜನರು ಕಂಗಾಲಾಗಿ ಹೋಗಿದ್ದಾರೆ.

ಹುಬ್ಬಳ್ಳಿಯಲ್ಲಿ ಶ್ರಮಿಕರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ 'ಶ್ರಮಿಕ ಸಂಜೀವಿನಿ'ಹುಬ್ಬಳ್ಳಿಯಲ್ಲಿ ಶ್ರಮಿಕರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ 'ಶ್ರಮಿಕ ಸಂಜೀವಿನಿ'

ಮೊದಲೇ ಮಳೆ ಹಾಗೂ ಜಲ ಪ್ರಳಯದಿಂದ ಮನೆಮಠಗಳನ್ನು ಕಳೆದುಕೊಂಡು ಬೀದಿಪಾಲಾಗಿರುವ ಜನರು ಒಪ್ಪತ್ತಿನ ಗಂಜಿಗಾಗಿ ಪರದಾಡುತ್ತಿದ್ದಾರೆ. ಈ ಸಮಯದಲ್ಲೇ ಜಿಲ್ಲೆಯ ಜನರಲ್ಲಿ ಎಚ್1ಎನ್1 ಭೀತಿ ಹುಟ್ಟಹಾಕಿದೆ. ಜಿಲ್ಲೆಯಾದ್ಯಂತ ಎಚ್‌1 ಎನ್‌1 ಭೀತಿ ಹೆಚ್ಚಾಗಿದ್ದು, ಜನರಿಗೆ ಮತ್ತೊಂದು ಶಾಕ್ ಎದುರಾದಂತಿದೆ. 2022ರ ಜನವರಿಯಿಂದ ಆಗಸ್ಟ್ 31ರವರೆಗೆ ಒಟ್ಟು 100 ಜನರ ರಕ್ತದ ಮಾದರಿಗಳನ್ನು ಸಂಗ್ರಹ ಮಾಡಲಾಗಿತ್ತು. ಇದರಲ್ಲಿ 7 ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿದ್ದವು. ಆದರೆ ಈ ಸೋಂಕಿನಿಂದ ರೋಗಿಗಳು ಮೃತಪಟ್ಟಿರುವುದು ಇಲ್ಲಿಯವರೆಗೂ ಖಚಿತಪಟ್ಟಿಲ್ಲ.

H1N1 fear for people of Dharwad district

ಎಚ್‌1 ಎನ್‌1 ರೋಗ ಲಕ್ಷಣಗಳು
ತೀವ್ರ ಜ್ವರ, ವಾಂತಿ-ಭೇದಿ, ಕೆಮ್ಮು, ಹಳದಿ ಕಫ, ನೆಗಡಿ ಮತ್ತು ಗಂಟಲು ಕೆರೆತ, ಉಸಿರಾಟದ ತೊಂದರೆ ಉಂಟಾಗುವುದು ಎಚ್‌1 ಎನ್‌1 ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ರೋಗ ನಿರೋಧಕ ಶಕ್ತಿ ಕುಗ್ಗಿದವರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆದಿದ್ದಾರೆ. ಬಹಳಷ್ಟು ಜನರು ತೀವ್ರ ಜ್ವರ, ಕೆಮ್ಮು, ವಾಂತಿ-ಭೇದಿಯಿಂದ ನರಳಿದ್ದಾರೆ. ಈಗಲೂ ಕೂಡ ಈಗೂ ಹೆಚ್ಚಿನ ಜನರು ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ.

H1N1 fear for people of Dharwad district

ಧಾರವಾಡದಲ್ಲಿ ಎಚ್‌1 ಎನ್‌1 ಭೀತಿ
ಹಲವು ವೈದ್ಯರು ರೋಗಿಗಳ ರಕ್ತ ಪರೀಕ್ಷೆ ಮಾಡಿಸಲು ಸೂಚಿಸಿದಾಗ ಎಚ್1 ಎನ್1 ಪ್ರಕರಣಗಳು ಇರುವುದು ಗೊತ್ತಾಗಿದೆ. ರೋಗ ಲಕ್ಷಣ ಇರುವುದು ಗೊತ್ತಾದ ತಕ್ಷಣ ರೋಗಿಗಳಿಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ರಚಿಸಲಾಗಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ. ಆರೋಗ್ಯದ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ, ಸಾವು ಎದುರಾಗುವ ಸಾಧ್ಯತೆಗಳು ಹೆಚ್ಚಿದೆ ಎಂದು ವೈದ್ಯರ ಮೂಲಗಳು ತಿಳಿಸಿವೆ. ಮೊದಲೇ ಭಾರಿ ಮಳೆಯಿಂದ ಕಂಗೆಟ್ಟಿರುವ ಧಾರವಾಡ ಜಿಲ್ಲೆಯ ಜನರಿಗೆ ಈ ಮಹಾಮಾರಿ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿದೆ. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.

English summary
people of Dharwad district shaken by heavy rains, now people are facing threat of H1N1, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X