ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ: ನವಲಗುಂದ ಠಾಣೆಯಲ್ಲಿ ಲಾಕಪ್ ಡೆತ್?

|
Google Oneindia Kannada News

ಧಾರವಾಡ, ಡಿ. 1 : ದೇವರ ದರ್ಶನ ಮಾಡಿದವ ಜೂಜಾಡುತ್ತ ನಿಂತಿದ್ದ, ದಾಳಿ ಮಾಡಿದ ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ದರು. ಮರುದಿನ ಬೆಳಗಾಗುವುದರೊಳಗೆ ಆತ ಸಾವಿಗೀಡಾದ ಎಂಬ ಸುದ್ದಿ ಬಂತು.

ಹೌದು ಇಂಥ ಪ್ರಕರಣ ನಡೆದಿರುವುದು ಧಾರವಾಡ ತಾಲೂಕಿನ ನವಲಗುಂದದಲ್ಲಿ. ಪೊಲೀಸರ ವಶದಲ್ಲಿದ್ದ ಮಲ್ಲಿಕಾರ್ಜುನ ಅಡಕಿ (43) ಸಾವು ಲಾಕಪ್ ಡೆತ್ ಎಂದು ಆರೋಪಿಸಿ ಮೃತನ ಕುಟುಂಬದವರು ಶವಾಗಾರದ ಎದುರು ಪ್ರತಿಭಟನೆ ನಡೆಸಿದರು.[ಬೆಂಗಳೂರಿನ ಸರ್ಜಾಪುರ ಠಾಣೆಯಲ್ಲಿ ಲಾಕಪ್ ಡೆತ್?]

police

ಹುಬ್ಬಳ್ಳಿಯ ಅಕ್ಕಿಹೊಂಡ ನಿವಾಸಿ ಆಟೊ ಚಾಲಕ ಮಲ್ಲಿಕಾರ್ಜುನ ಅಡಕಿ ತಾಲೂಕಿನ ಯಮನೂರು ಗ್ರಾಮದ ಚಾಂಗದೇವರ ದರ್ಶನಕ್ಕೆಂದು ಆಗಮಿಸಿದ್ದ. ಪೂಜೆಯ ಬಳಿಕ ಸ್ನೇಹಿತರೊಂದಿಗೆ ದೇವಾಲಯದ ಸಮೀಪ ಜೂಜಾಡುತ್ತಿದ್ದ. ಈ ವೇಳೆ ದಾಳಿ ನಡೆಸಿದ ನವಲಗುಂದ ಪೊಲೀಸರು ಮಲ್ಲಿಕಾರ್ಜುನ ಅಡಕಿ ಸೇರಿದಂತೆ 9 ಮಂದಿಯನ್ನು ಬಂಧಿಸಿದ್ದರು.

ಆದರೆ ರಾತ್ರಿ ಮಲ್ಲಿಕಾರ್ಜುನ ಅಡಕಿ ಸಾವನ್ನಪ್ಪಿದ್ದಾನೆ. ಈ ಸುದ್ದಿ ತಿಳಿದ ಕುಂಟುಬಸ್ಥರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಶುರುಹಚ್ಚಿಕೊಂಡರು. ಲಾಕಪ್ ಡೆತ್ ಎಂಬ ಸುದ್ದಿ ಹರಡದ್ದು ಜನರನ್ನು ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿತ್ತು. [ಕವಿವಿ ಪ್ರಕರಣದ ವಾಲೀಕಾರ ಕತೆಯೇನು?]

ಪೊಲೀಸರ ದೌರ್ಜನ್ಯದಿಂದಲೇ ಅಡಕಿ ಮೃತಪಟ್ಟಿದ್ದು ಸೂಕ್ತ ಕ್ರಮ ಜರುಗಿಸಬೇಕು. ಅಲ್ಲದೇ ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಮರಣೋತ್ತರ ಪರೀಕ್ಷೆ ಒರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಇದನ್ನಿ ಸಿಐಡಿ ಒಪ್ಪಿಸಲಾಗಿದ್ದು ಇಲಾಖೆಯಿಂದ ತಪ್ಪಾಗಿದ್ದರೆ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು.

English summary
Dharwad: Mallikarujn Adaki died in the police custody. Total 9 people arrest for the Gambling Charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X