ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರ್ಗಿ ಹತ್ಯೆಯಾಗಿ 2 ತಿಂಗಳು : ಎತ್ತ ಸಾಗಿದೆ ತನಿಖೆ?

By ವಿಕಾಸ್ ನಂಜಪ್ಪ
|
Google Oneindia Kannada News

ಧಾರವಾಡ, ಅಕ್ಟೋಬರ್ 30 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ತನಿಖೆಯ ಬಗ್ಗೆ ನಿಖರವಾದ ಯಾವುದೇ ಮಾಹಿತಿಗಳು ಇಲ್ಲಿಯ ತನಕ ಲಭ್ಯವಾಗಿಲ್ಲ. ಬೆಳಗಾವಿಯಲ್ಲಿ ಸಿಕ್ಕ ಅಪರಿಚಿತ ಶವ ರುದ್ರ ಪಾಟೀಲ್‌ನದ್ದೇ ಎಂಬುದಕ್ಕೆ ಸೂಕ್ತವಾದ ಆಧಾರಗಳು ದೊರಕಿಲ್ಲ.

ಧಾರವಾಡದ ಕಲ್ಯಾಣ ನಗರದಲ್ಲಿನ ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ವಿದ್ಯಾರ್ಥಿಗಳ ಸೋಗಿನಲ್ಲಿ ಆಗಸ್ಟ್ 30ರ ಬೆಳಗ್ಗೆ 8.40ರ ಸುಮಾರಿಗೆ ಬಂದ ಇಬ್ಬರು ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಹತ್ಯೆ ನಡೆದು ಎರಡು ತಿಂಗಳು ಕಳೆದರೂ ಹಂತಕರ ಸುಳಿವು ಪತ್ತೆಯಾಗಿಲ್ಲ. [ಕಲಬುರ್ಗಿ ಹತ್ಯೆ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ]

mm kalburgi

ಅಕ್ಟೋಬರ್ 28ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಣಿಕವಾಡಿ ಗ್ರಾಮದಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಈ ಶವ ಕಲಬುರ್ಗಿ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾದ ರುದ್ರ ಪಾಟೀಲ್ ಅವರ ರೇಖಾ ಚಿತ್ರಕ್ಕೆ ಹೋಲಿಕೆಯಾಗುತ್ತಿತ್ತು. [ಕಲಬುರ್ಗಿ ಹತ್ಯೆಯ ಕುರಿತು ಸಿಐಡಿ ತನಿಖೆ]

ಆದರೆ, ಈ ಶವ ರುದ್ರ ಪಾಟೀಲ್ ಅವನದ್ದೇ ಎಂಬುದಕ್ಕೆ ಖಚಿತವಾದ ಆಧಾರಗಳು ಸಿಕ್ಕಿಲ್ಲ. ಅಪರಿಚಿತ ಶವವನ್ನು ರುದ್ರ ಪಾಟೀಲ್ ಪೋಷಕರಿಗೆ ತೋರಿಸಿದಾಗ 10 ವರ್ಷಗಳಿಂದ ಮಗನನ್ನು ಭೇಟಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಆದ್ದರಿಂದ ಶವ ರುದ್ರ ಪಾಟೀಲ್‌ನದ್ದೇ ಎಂದು ಖಚಿತವಾಗಿ ಹೇಳಲಾಗುತ್ತಿಲ್ಲ. [ಕಲಬುರ್ಗಿ ಹತ್ಯೆ: ರಾಜ್ಯ ಪೊಲೀಸರ ಹಿನ್ನಡೆಗೆ ಕಾರಣ ಏನಿರಬಹುದು?]

ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಹತ್ಯೆಯನ್ನು ಮಾಡಿದ ಗುಂಪು ಕಲಬುರ್ಗಿ ಅವರನ್ನು ಹತ್ಯೆ ಮಾಡಿದೆ ಎಂಬುದನ್ನು ಬಿಟ್ಟರೆ ಮಹತ್ವದ ಸುಳಿವುಗಳು ಪೊಲೀಸರಿಗೆ ಲಭ್ಯವಾಗಿಲ್ಲ. ಬೆಳಗಾವಿಯಲ್ಲಿ ಸಿಕ್ಕ ಅಪರಿಚಿತ ಶವದ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲು ಕರ್ನಾಟಕ ಸಿಐಡಿ ತಂಡ ಮತ್ತು ಮಹಾರಾಷ್ಟ್ರದ ಪೊಲೀಸರು ಬೆಳಗಾವಿಗೆ ತೆರಳಿದ್ದಾರೆ.

ಯಾವುದೇ ಕರೆ ಬಂದಿಲ್ಲ : ಕಲಬುರ್ಗಿ ಅವರ ಹತ್ಯೆಯಾದ ನಂತರ ಪೊಲೀಸರು ಶಂಕಿತ ಆರೋಪಿಗಳ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಆದರೆ, ರೇಖಾ ಚಿತ್ರದಲ್ಲಿರುವ ವ್ಯಕ್ತಿಗಳ ಕುರಿತು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಯಾವುದೇ ಕರೆಗಳು ಬಂದಿಲ್ಲ.

English summary
The investigation into the murder of Professor M.M.Kalburgi hangs on theory and there is not a single concrete lead so far in the case. M.M. Kalburgi who was shot at his residence at Kalyan Nagar Dharwad on August 30th, 2015 morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X