ಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸೇವೆ, ಸಮಯ, ದಿನಾಂಕಗಳ ವಿವರ
Indian Railways: ಭಾರತೀಯ ರೈಲ್ವೆಯು ವಿಶೇಷ ಹಬ್ಬ, ಕಾರ್ಯಕ್ರಮಗಳ ವೇಳೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹಾಗೂ ಜನದಟ್ಟಣೆ ನಿಯಂತ್ರಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಲಿರುತ್ತದೆ. ಇದೀಗ ಆಷಾಢ ಏಕಾದಶಿ ಹಬ್ಬದ ಪ್ರಯುಕ್ತ ಧಾರವಾಡ ಹಾಗೂ ಪಂಡರಪುರ ನಡುವೆ ಕಾಯ್ದಿರಿಸದ ವಿಶೇಷ ಎಕ್ಟ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ದಿನಾಂಕ ಸಮಯಗಳ ವಿವರನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಷಾಢ ಏಕಾದಶಿ ಹಬ್ಬದ ಪ್ರಯುಕ್ತ ಪಂಡರಪುರಕ್ಕೆ ಪ್ರಯಾಣ ಬೆಳೆಸುವ ಭಕ್ತಾದಿಗಳ ಅನುಕೂಲಕ್ಕಾಗಿ ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ನೈರುತ್ಯ ರೈಲ್ವೆಯು ಧಾರವಾಡ ಮತ್ತು ಪಂಡರಪುರ ನಡುವೆ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ರೈಲು ಸಂಖ್ಯೆ, ಸಮಯ, ದಿನಾಂಕಗಳ ವಿವರ
* ರೈಲು ಸಂಖ್ಯೆ 07357/07358 ಧಾರವಾಡ-ಪಂಡರಪುರ-ಧಾರವಾಡ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಜುಲೈ 23ರಿಂದ 28ರ ವರೆಗೆ ಒಟ್ಟು 6 ಟ್ರಿಪ್‌ಗಳು ಸಂಚರಿಸಲಿವೆ.
* ರೈಲು ಸಂಖ್ಯೆ 07357: ಧಾರವಾಡದಿಂದ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊರಡಲಿದ್ದು, ಅದೇ ದಿನ ಸಂಜೆ 4:50ಕ್ಕೆ ಪಂಡರಪುರ ತಲುಪಲಿದೆ. ಮರುಪ್ರಯಾಣ ರೈಲು ಸಂಖ್ಯೆ 07358: ಇದು ಪಂಡರಪುರದಿಂದ ಪ್ರತಿದಿನ ಸಂಜೆ 6:40ಕ್ಕೆ ಹೊರಟು, ಮರುದಿನ ಬೆಳಗ್ಗೆ 4:30ಕ್ಕೆ ಧಾರವಾಡಕ್ಕೆ ಆಗಮಿಸಲಿದೆ.
ಎಲ್ಲೆಲ್ಲಿ ನಿಲುಗಡೆ ಇರಲಿದೆ?
ಈ ರೈಲು ಎರಡೂ ಮಾರ್ಗಗಳಲ್ಲಿ ಅಳ್ನಾವರ, ಲೊಂಡಾ, ಖಾನಾಪುರ, ದೇಸೂರ, ಬೆಳಗಾವಿ, ಪಚ್ಛಾಪುರ, ಗೋಕಾಕ್ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ್, ಶೇಡಬಾಳ, ವಿಜಯನಗರ, ಮಿರಜ್ ಜಂಕ್ಷನ್, ಅರಗ್, ಧಾಳಗಾವ್, ಜತ್ ರೋಡ್, ವಾಸುದ್ ಹಾಗೂ ಸಾಂಗೋಲಾ ನಿಲ್ದಾಣಗಳಲ್ಲಿ ನಿಲ್ಲಲಿದೆ. ಈ ರೈಲು ಒಟ್ಟು 10 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 8 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ ದಿವ್ಯಾಂಗ ಸ್ನೇಹಿ ಸೌಲಭ್ಯವನ್ನೊಳಗೊಂಡ 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.
ಬೆಂಗಳೂರು- ಪ್ರಯಾಗ್‌ರಾಜ್ ನಡುವೆ ವಿಶೇಷ ರೈಲು
ಮತ್ತೊಂದೆಡೆ ಬೆಂಗಳೂರಿನಿಂದ ಯಶವಂತಪುರ ಹಾಗೂ ಪ್ರಯಾಗ್‌ರಾಜ್ ನಡುವೆ ವಿಶೇಷ ರೈಲು ಓಡಿಸಲಾಗುತ್ತಿದೆ. ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಪ್ರಯಾಗ್‌ರಾಜ್ ಜಂಕ್ಷನ್ ಮತ್ತು ಯಶವಂತಪುರ ಜಂಕ್ಷನ್ ನಡುವೆ ಎರಡೂ ದಿಕ್ಕುಗಳಲ್ಲೂ ತಲಾ 8 ಟ್ರಿಪ್‌ಗಳ ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ಉತ್ತರ ಮಧ್ಯ ರೈಲ್ವೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
* ರೈಲು ಸಂಖ್ಯೆ 04149 ಪ್ರಯಾಗ್‌ರಾಜ್ ಜಂಕ್ಷನ್ - ಯಶವಂತಪುರ ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಓಡಿಸಲು ನಿರ್ಧರಿಸಲಾಗಿದೆ. ಈ ರೈಲು ಆಗಸ್ಟ್ 5ರಿಂದ ಸೆಪ್ಟೆಂಬರ್ 23ರ ವರೆಗೆ ಪ್ರತಿ ಬುಧವಾರ ಸಂಜೆ 6 ಗಂಟೆಗೆ ಪ್ರಯಾಗ್‌ರಾಜ್ ಜಂಕ್ಷನ್‌ನಿಂದ ಹೊರಡಲಿದ್ದು, ಶುಕ್ರವಾರ ರಾತ್ರಿ 9 ಗಂಟೆಗೆ ಯಶವಂತಪುರ ಜಂಕ್ಷನ್ ತಲುಪಲಿದೆ.
* ರೈಲು ಸಂಖ್ಯೆ 04150 ಯಶವಂತಪುರ ಜಂಕ್ಷನ್ - ಪ್ರಯಾಗ್‌ರಾಜ್ ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಸ್ಟ್ 8ರಿಂದ ಸೆಪ್ಟೆಂಬರ್ 26 ರವರೆಗೆ ಪ್ರತಿ ಶನಿವಾರ ಬೆಳಿಗ್ಗೆ 7 ಗಂಟೆಗೆ ಯಶವಂತಪುರ ಜಂಕ್ಷನ್‌ನಿಂದ ಹೊರಡಲಿದ್ದು, ಸೋಮವಾರ ಬೆಳಗ್ಗೆ 6.30 ಗಂಟೆಗೆ ಪ್ರಯಾಗ್‌ರಾಜ್ ಜಂಕ್ಷನ್ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಶಂಕರಗಢ, ದಭೌರಾ, ಮಾಣಿಕ್ಪುರ ಜಂಕ್ಷನ್, ಚಿತ್ರಕೂಟ ಧಾಮ ಕರ್ವಿ, ಬಂದಾ ಜಂಕ್ಷನ್, ಮಹೋಬ ಜಂಕ್ಷನ್, ಖಜುರಾಹೊ, ದರಿಯಾಗಂಜ್, ಮಹಾರಾಜ ಛತ್ರಸಾಲ್ ಸ್ಟೇಷನ್ ಛತ್ತರಪುರ, ಟಿಕಮ್‌ಗಢ, ಲಲಿತ್‌ಪುರ ಜಂಕ್ಷನ್, ಬಿನಾ ಜಂಕ್ಷನ್, ರಾಣಿ ಕಮಲಾಪತಿ, ಇಟಾರ್ಸಿ ಜಂಕ್ಷನ್, ನಾಗ್ಪುರ, ಬಲ್ಲಾರ್ಶಾ, ಬೆಲ್ಲಂಪಳ್ಳಿ, ಮಂಚೇರಿಯಲ್, ಕಾಜಿಪೇಟ್ ಜಂಕ್ಷನ್, ಸಿಕಂದರಾಬಾದ್ ಜಂಕ್ಷನ್, ಲಿಂಗಂಪಲ್ಲಿ, ವಿಕಾರಾಬಾದ್ ಜಂಕ್ಷನ್, ತಾಂಡೂರ್, ಯಾದಗಿರಿ, ಕೃಷ್ಣ, ರಾಯಚೂರು, ಗುಂತಕಲ್ ಜಂಕ್ಷನ್, ಅನಂತಪುರ, ಧರ್ಮಾವರಂ ಜಂಕ್ಷನ್, ಹಿಂದೂಪುರ ಮತ್ತು ಯಲಹಂಕ ಜಂಕ್ಷನ್‌ನಲ್ಲಿ ನಿಲುಗಡೆ ಇರಲಿದೆ.


Click it and Unblock the Notifications
