Get Updates
Get notified of breaking news, exclusive insights, and must-see stories!

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ 70.06ರಷ್ಟು ಮತದಾನ

ಧಾರವಾಡ, ಏಪ್ರಿಲ್ 24 : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ 70.06ರಷ್ಟು ಮತದಾನ ನಡೆದಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿದೆ.

ಏಪ್ರಿಲ್ 23ರ ಮಂಗಳವಾರ ಧಾರವಾಡ ಲೋಕಸಭಾ ಕ್ಷೇತ್ರದ ಮತದಾನ ನಡೆಯಿತು. ಶೇ.70.06 ರಷ್ಟು ಮತದಾನ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದರೆ ಶೇ. 75.03 ರಷ್ಟು ಮತದಾನ ನಡೆದಿದೆ.

ಧಾರವಾಡ ಲೋಕಸಭಾ ಕ್ಷೇತ್ರದ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಎಂದರೆ ಶೇ.63.95 ಮತದಾನವಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಶೇ 64.64ರಷ್ಟು ಮತದಾನವಾಗಿದೆ.

Dharwad lok sabha seat

2014 ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 15,78,125 ಮತದಾರರಿದ್ದರು. 10,41,226 ಜನ ಮತ ಚಲಾಯಿಸಿದ್ದರು. ಶೇ.65.98 ಮತದಾನವಾಗಿತ್ತು. ಕಳೆದ ಬಾರಿಗೆ ಹೋಲಿಕೆ ಮಾಡಿರೆ ಈ ಬಾರಿ ಮತದಾನ ಹೆಚ್ಚಾಗಿದೆ.

ಉತ್ತಮ ಮತದಾನಕ್ಕಾಗಿ ಜಿಲ್ಲಾ ಸ್ವೀಪ್ ಸಮಿತಿಯ ಜೊತೆಗೆ ಖಾಸಗಿ ಸಂಘಸಂಸ್ಥೆಗಳು, ವಿವಿಧ ಉದ್ಯಮಿಗಳು ಸಹ ಕೈ ಜೋಡಿಸಿದ್ದರು. ಧಾರವಾಡದ ಶ್ರೀ ಪಂಜುರ್ಲಿ, ಹಳಿಯಾಳ ರಸ್ತೆಯ ಶಿವಸಾಗರ್ ಹಾಗೂ ಆರ್.ಎಲ್. ಎಸ್.ಕಾಲೇಜು ಬಳಿಯ ಎಲ್.ಇ.ಎ.ಕ್ಯಾಂಟೀನ್ ಮಾಲೀಕರು ಮತಚಲಾಯಿಸಿ ಬಂದವರಿಗೆ ಶೇ.10 ರ ರಿಯಾಯಿತಿ ದರದಲ್ಲಿ ಊಟ, ಉಪಹಾರ ಪೂರೈಸಿದರು.

ವೀರ ಸಿಂಧೂರ ಲಕ್ಷ್ಮಣ ವೃತ್ತ ಬಳಿಯ ಜ್ಯೋತಿ ಪೆಟ್ರೋಲ್ ಬಂಕ್ ನವರು ಮತ ಚಲಾಯಿಸಿ ಬಂದವರಿಗೆ ಪ್ರತಿ ಒಂದು ಲೀಟರ್ ಪೆಟ್ರೋಲ್‌ಗೆ 1 ರೂಪಾಯಿ ರಿಯಾಯಿತಿ ನೀಡಿದರು. ಸುಗತೆ ಸರ್ಜಿಕಲ್ಸ್ ತನ್ನ ಉತ್ಪನ್ನಗಳನ್ನು ಶೇ.25 ರ ರಿಯಾಯಿತಿ ದರದಲ್ಲಿ ನೀಡಿದರೆ, ಮಾಳಮಡ್ಡಿಯ ಹರೀಶ ಮೆಡಿಲ್ಯಾಬ್‌ನವರು ಉಚಿತವಾಗಿ ರಕ್ತ ತಪಾಸಣೆ, ಇಸಿಜಿ ಮಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+