ಸ್ಮಾರ್ಟ್ ಸಿಟಿ ದಾವಣಗೆರೆ ರಸ್ತೆಗಿಳಿಯಲಿವೆ ಇ-ಆಟೋಗಳು

ದಾವಣಗೆರೆ, ಜೂನ್ 27 : ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆಗೆ ಇ-ಆಟೋಗಳು ಸಿಗಲಿವೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಇ-ಆಟೋಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲು ತೀರ್ಮಾನಿಸಲಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಈ ವರ್ಷ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತಿವೆ. ಪರಿಸರ ಮಾಲಿನ್ಯ ಕಡಿಮೆ ಮಾಡಲು ಹಾಗೂ ಯುವಕರಿಗೆ ಉದ್ಯೋಗ ನೀಡಲು ಇ-ಆಟೋಗಳನ್ನು ವಿತರಣೆ ಮಾಡಲಾಗುತ್ತದೆ.

ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 20 ಇ-ಆಟೋಗಳನ್ನು ವಿತರಣೆ ಮಾಡಲು ಉದ್ದೇಶಿಸಲಾಗಿದೆ. ಈ ಯೋಜನೆಯಾಗಿ 36 ಲಕ್ಷ ರೂ. ಅನುದಾನವನ್ನು ಮೀಸಲಾಗಿಡಲಾಗಿದೆ. ಒಂದು ಇ-ಆಟೋ ಬೆಲೆ 1.80 ಲಕ್ಷವಾಗಿದೆ.

Under smart city project Davanagere to get e auto rickshaw

ಸ್ಮಾರ್ಟ್ ಸಿಟಿ ಯೋಜನೆಯಡಿ ಶೇ 60ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಉಳಿದ ಹಣಕ್ಕಾಗಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ಪ್ರಸ್ತುತ ನಾಲ್ಕು ಫಲಾನುಭವಿಗಳು ಆಟೋಗಳನ್ನು ಪಡೆಯಲು ಅರ್ಜಿ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ 80 ಆಟೋಗಳನ್ನು ವಿತರಣೆ ಮಾಡುವ ಗುರಿಯನ್ನು ಹೊಂದಲಾಗಿದೆ.

ಬಸ್ ಮತ್ತು ರೈಲ್ವೆ ನಿಲ್ದಾಣದಿಂದ ಮಹಿಳಾ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಪಿಂಕ್ ಇ-ಆಟೋ ಸೇವೆ ಆರಂಭಿಸಲು ಮಹಿಳೆಯರು ಮುಂದೆ ಬಂದರೆ ಅವರಿಗೆ ಶೇ 75ರಷ್ಟು ಸಬ್ಸಿಡಿಯನ್ನು ನೀಡಲು ಪ್ರಸ್ತಾವನೆ ಸಿದ್ಧಗೊಳಿಸಲಾಗಿದೆ.

ಇ-ಆಟೋಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರಲಿವೆ. ಒಮ್ಮೆ ಬ್ಯಾಟರಿ ಜಾರ್ಜ್ ಮಾಡಿದರೆ 60 ರಿಂದ 75 ಕಿ.ಮೀ. ದೂರ ಆಟೋಗಳು ಸಂಚಾರ ನಡೆಸಬಹುದಾಗಿದೆ. ಗರಿಷ್ಠ 30 ಕಿ.ಮೀ.ವೇಗದಲ್ಲಿ ಸಾಗಲಿವೆ.

ಇ-ಆಟೋಗಳ ಹೊರತಾಗಿ 9.90 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಬೈಸಿಕಲ್ ಷೇರಿಂಗ್ ಸಿಸ್ಟಮ್ ಆರಂಭಿಸಲಾಗುತ್ತದೆ. 100 ವಿದ್ಯುತ್ ಚಾಲಿತ ಬೈಸಿಕಲ್ 100 ಪಡೆಲ್ ಸೈಕಲ್‌ಗಳನ್ನು ಈ ಯೋಜನೆಯಡಿ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+