'ಮಹಾಭಾರತ ಸಿನಿಮಾಕ್ಕೆ ಮೋದಿ, ಮೇಕ್ ಇನ್ ಇಂಡಿಯಾವೇ ಸ್ಫೂರ್ತಿ!
'ಮಹಾಭಾರತ ಸಿನಿಮಾವನ್ನು 300 ಕೋಟಿ ಜನರಿಗೆ ತಲುಪಿಸುವ ಗುರಿ ಎಂದು ಉದ್ಯಮಿ ಬಿ. ಆರ್ ಶೆಟ್ಟಿ ಘೋಷಿಸಿದ್ದಾರೆ.
ದಾವಣಗೆರೆ,ಜೂನ್ 13: ಸಾವಿರ ಕೋಟಿ ರೂ. ವೆಚ್ಚದ 'ಮಹಾಭಾರತ' ಚಲನಚಿತ್ರ ನಿರ್ಮಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾಧನೆ ಹಾಗೂ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ತಮಗೆ ಸ್ಫೂರ್ತಿಯಾಗಿದೆ ಎಂದು ಯುಎಇಯಲ್ಲಿ ನೆಲೆಸಿರುವ ಕರಾವಳಿ ಮೂಲದ ಉದ್ಯಮಿ ಡಾ. ಬಿ.ಆರ್. ಶೆಟ್ಟಿ ತಿಳಿಸಿದ್ದಾರೆ.
ದಾವಣಗೆರೆಯ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಅವರ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಆಗಸ್ಟ್ ತಿಂಗಳಲ್ಲಿ ಈ ಚಿತ್ರದ ತಯಾರಿ ಆರಂಭವಾಗಲಿದೆ.
ಅಬುಧಾಬಿಯಲ್ಲಿ ಚಿತ್ರ ನಟ - ನಟಿಯರಿಗೆ ಎರಡು ತಿಂಗಳ ಕಾಲ ತರಬೇತಿ ನೀಡಲಾಗುವುದು. 2018ರ ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ ಎಂದರು.
'ಮೇಕ್ ಇಂಡಿಯಾ' ಪರಿಕಲ್ಪನೆಯಲ್ಲಿ ಚಿತ್ರ ನಿರ್ಮಿಸಿದರೂ ಹಾಲಿವುಡ್, ಬಾಲಿವುಡ್ ಸೇರಿದಂತೆ ಹಲವಾರು ಚಿತ್ರರಂಗದವರು ಯೋಜನೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಚಿತ್ರ ವಿಶ್ವದಲ್ಲೇ ವಿನೂತನವಾಗಿ ರೂಪುಗೊಳ್ಳುವ ವಿಶ್ವಾಸ ತಮ್ಮದಾಗಿದೆ ಎಂದು ಹೇಳಿದರು.













Click it and Unblock the Notifications