ದಾವಣಗೆರೆಯ ಕೆಲವೆಡೆ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ವಡೆ ಕೊಟ್ಟು ವಿಶೇಷ ಜಾಗೃತಿ
ದಾವಣಗೆರೆ, ನವೆಂಬರ್, 29: ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗುತ್ತಿವೆ. ಟ್ರಾಫಿಕ್ ಪೊಲೀಸರಿಗೂ ಇದಕ್ಕೆ ಬ್ರೇಕ್ ಹಾಕುವುದು ತುಂಬಾನೇ ಕಷ್ಟ. ಜಿಲ್ಲಾ ಪೊಲೀಸ್ ಇಲಾಖೆಯು ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ. ಆದರೂ ರಾಂಗ್ ರೂಟ್‌ನಲ್ಲಿ ಬರುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ಕಾರಣಕ್ಕೆ ದಾವಣಗೆರೆಯಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ವಿಭಿನ್ನವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಇದು ನಿಜಕ್ಕೂ ವಿಭಿನ್ನ. ಇಂತಹ ವಿಶೇಷ ಜಾಗೃತಿ ಮೂಡಿಸಿದ್ದು ಸಾಮಾಜಿಕ ಕಾರ್ಯಕರ್ತ ಎಂ. ಜಿ. ಶ್ರೀಕಾಂತ್. ದಾವಣಗೆರೆಯಲ್ಲಿ ಟ್ರಾಫಿಕ್ ಸಿಗ್ನಲ್ ಜಂಪ್, ನಿಯಮ ಪಾಲನೆ ಮಾಡದಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಪೊಲೀಸ್ ಇಲಾಖೆಗೆ ತಲೆನೋವು ತಂದಿದೆ. ಕೆಲವರಂತೂ ರಾಂಗ್ ರೂಟ್‌ನಲ್ಲಿ ವೇಗವಾಗಿ ಸಂಚರಿಸುತ್ತಾರೆ. ಬೈಕ್, ಸ್ಕೂಟಿಯಲ್ಲಿ ಬರುವ ಯುವತಿಯರು, ವೇಗವಾಗಿ ಬೈಕ್‌ನಲ್ಲಿ ಬರುವ ಯುವಕರು ಸರಿಯಾದ ದಾರಿಯಲ್ಲಿ ಬರುವವರಿಗೂ ದಂಗು ಬಡಿಸುತ್ತಾರೆ.

ಈ ಜಾಗೃತಿ ಯಾಕೆ?
ದಾವಣಗೆರೆಯ ಪಿ.ಬಿ.ರಸ್ತೆ, ಎವಿಕೆ ಕಾಲೇಜು, ಬಾಪೂಜಿ ಡೆಂಟಲ್ ಕಾಲೇಜ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಬೈಕ್, ಕಾರು ಓಡಿಸುತ್ತಿರುವವರು ಹೆಚ್ಚಾಗಿದ್ದಾರೆ. ಎಷ್ಟೇ ಮನವಿ ಮಾಡಿದರೂ ತಪ್ಪುತ್ತಿಲ್ಲ. ಅಪಘಾತಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಕೆಲವರು ಜೀವ ಕಳೆದುಕೊಂಡರೆ, ಮತ್ತೆ ಕೆಲವರು ಆಸ್ಪತ್ರೆ ಸೇರಿದ ನಿದರ್ಶನಗಳೂ ಸಾಕಷ್ಟಿವೆ. ಈ ಹಿನ್ನೆಲೆ ಟ್ರಾಫಿಕ್ ಪೊಲೀಸರು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ.
ಪ್ರತಿಯೊಬ್ಬರೂ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡದಿದ್ದರೆ ಅಪಘಾತಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಜನರು ಹುಷಾರಾಗಿ ಮನೆ ಸೇರಬಹುದು. ಆದರೆ ಇದು ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ ವಿಶೇಷ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.
ನಗರದ ಪಿ.ಬಿ.ರಸ್ತೆಯಲ್ಲಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ಸಂಚಾರ ನಿಯಮ ಉಲ್ಲಂಘಿಸಿ ಬರುತ್ತಿದ್ದ ಬೈಕ್ ಸವಾರರಿಗೆ ಚಾಕೊಲೇಟ್ ನೀಡುವ ಮೂಲಕ ಅರಿವು ಮೂಡಿಸಿದ್ದ ಎಂ.ಜಿ.ಶ್ರೀಕಾಂತ್ ಅವರು, ಒಂದು ಹೆಜ್ಜೆ ಮುಂದೆ ಹೋಗಿ ವಡಾ ವಿತರಿಸುವ ಮೂಲಕ ಡಿಫರೆಂಟ್ ಆಗಿ ಬುಧವಾರ ಸಂಜೆ ಅರಿವು ಮೂಡಿಸಿದರು.
ದಾವಣಗೆರೆ ಎವಿಕೆ ಕಾಲೇಜು ರಸ್ತೆಯಲ್ಲಿ ಸಾರ್ವಜನಿಕರು ಒನ್ ವೇ ರಸ್ತೆಯಲ್ಲಿ ಬಂದು ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದರು. ಇದು ಹಲವು ಬಾರಿ ಪೊಲೀಸರ ಗಮನಕ್ಕೂ ಬಂದಿತ್ತು. ಟ್ರಾಫಿಕ್ ಪೊಲೀಸರು ಬಂದು ನಿಂತರೂ ಕೆಲವರು ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಿದ್ದರು. ಇನ್ನು ಪೊಲೀಸರು ಇಲ್ಲ ಎಂದರೆ ಯಾರಿಗೂ ಹೆದರುತ್ತಿರಲಿಲ್ಲ. ವೇಗವಾಗಿ ಸಂಚಾರ ಮಾಡುತ್ತಿದ್ದರು.
ಕೆಲವರು ಮೊಬೈಲ್‌ನಲ್ಲಿ ಮಾತನಾಡುತ್ತಾ ಒಮ್ಮುಖವಾಗಿ ಬಂದರೆ, ಮತ್ತೆ ಕೆಲವರು ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದರು. ಆಗಾಗ್ಗೆ ಅಪಘಾತಗಳು ಆಗುತ್ತಿದ್ದವು. ಇದರಿಂದ ಜನರಲ್ಲಿ ಡಿಫರೆಂಟ್ ಆಗಿ ಜಾಗೃತಿ ಮೂಡಿಸಲು ಶ್ರೀಕಾಂತ್ ಅವರು ನಿರ್ಧರಿಸಿದರು.
ಸಂಚಾರಿ ನಿಯಮ ಉಲ್ಲಂಘಿಸುತ್ತೀರಾ. ನಿಮಗಾಗಿ ಮನೆಯಲ್ಲಿ ಕಾಯುತ್ತಿರುತ್ತಾರೆ. ಯಾವಾಗ ಬರುತ್ತಾರೆ, ಇಷ್ಟು ಹೊತ್ತಾದರೂ ಬರಲಿಲ್ಲ ಎಂದು ಮನೆಯವರು ಆತಂಕದಲ್ಲಿಯೇ ಇರುತ್ತಾರೆ. ಅದರಲ್ಲಿಯೂ ಯುವತಿಯರು, ಕಾಲೇಜು ಹುಡುಗರು ಬೈಕ್ ಓಡಿಸುವ ರೀತಿಗೆ ಪೋಷಕರೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಅಪಘಾತವಾಗಿ ಆಸ್ಪತ್ರೆಗೆ ಸೇರಿದಾಗ ಪೋಷಕರು ಕಣ್ಣೀರು ಹಾಕಿ, ಯಾಕಾದರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತಾರೋ ಎಂದು ಭಯ ವ್ಯಕ್ತಪಡಿಸಿದ್ದುಂಟು.
ಅಪಘಾತದಲ್ಲಿ ಒಂದು ವೇಳೆ ಮೃತಪಟ್ಟರೆ ಮನೆಯವರೆಲ್ಲಾ ತಿಥಿ ಮಾಡಿ ವಡೆ ತಿಂತಾರೆ. ಹಾಗಾಗಿ, ಮೊದಲು ನೀವೇ ವಡಾ ತಿನ್ನಿ. ಆಗಲಾದರೂ ನಿಮಗೆ ನೆನಪಿಗೆ ಬರಬಹುದು. ಹಾಗಾಗಿ, ವಡಾ ತಿನ್ನಿ, ಸಂಚಾರಿ ನಿಯಮ ಪಾಲಿಸಿ. ಆಗ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಒನ್ ವೇ ಇದ್ದರೂ ಬೈಕ್ ಓಡಿಸುವುದು, ವೇಗವಾಗಿ ಬರುವುದನ್ನು ಮಾಡಬೇಡಿ.
ಕಾಲೇಜು ಯುವತಿಯರು, ಯುವಕರು, ಹಿರಿಯರು, ಪುರುಷರಿಗೆ ಅಲ್ಲಿ ಬೋರ್ಡ್ ಹಾಕಿದ್ದರೂ ನೀವು ಸಂಚಾರಿ ನಿಯಮ ಉಲ್ಲಂಘಿಸಿ ಬರುತ್ತಿದ್ದೀರಾ. ಅಲ್ಲಿಂದಲೇ ಹೋಗಬಹುದು. ಆದ್ರೂ ಯಾಕೆ ಬರುತ್ತೀರಾ. ನಿಮಗಾಗಿ ಮನೆಯವರು ಕಾಯುತ್ತಿರುತ್ತಾರೆ. ಈ ಕಾರಣಕ್ಕಾದರೂ ಎಚ್ಚರ ವಹಿಸಿ ವಾಹನ ಚಲಾಯಿಸಿ ಎಂದು ಎಂ. ಜಿ. ಶ್ರೀಕಾಂತ್ ಮನವಿ ಮಾಡಿದರು.
ಇನ್ನು ಎಂ.ಜಿ.ಶ್ರೀಕಾಂತ್ ಅವರರ ಡಿಫರೆಂಟ್ ಜಾಗೃತಿ ಕಾರ್ಯಕ್ರಮಕ್ಕೆ ಎರೋಫಿಟ್ ಮಂಜು ಉದ್ದಿನ ವಡಾ ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ನೀವು ನಿಯಮ ಉಲ್ಲಂಘನೆ ಮಾಡಿ ಹೀಗೆ ಒಮ್ಮುಖ ರಸ್ತೆಯಲ್ಲಿ ಬಂದರೆ ನಿಮಗೇನಾದರೂ ಆಗಿ ನೀವು ಮರಣ ಹೊಂದಿದರೆ ನಿಮ್ಮ ಮನೆಯವರು ನಿಮ್ಮ ಹೆಸರಿನಲ್ಲಿ ತಿಥಿ ಮಾಡಿ ವಡಾ ತಿನ್ನುತಾರೆ. ಆದ್ದರಿಂದ ಸಂಚಾರ ನಿಯಮ ಪಾಲನೆ ಮಾಡಿ ಎಂದು ವಡಾ ನೀಡಿ ಮನವಿ ಮಾಡುತ್ತಿದ್ದೇವೆ. ದಯವಿಟ್ಟು ಸಹಕರಿಸಿ. ಅರ್ಥ ಮಾಡಿಕೊಳ್ಳಿ. ಸಂಚಾರಿ ನಿಯಮ ಪಾಲಿಸಿ ಎಂದು ಮನವಿ ಮಾಡಿದರು.
ಎವಿಕೆ ಕಾಲೇಜು, ಪಿ.ಬಿ.ರಸ್ತೆಯ ರೇಣುಕಾ ಮಂದಿರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಬಂದವರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಮಾತ್ರವಲ್ಲ, ವಡಾ ಕೊಟ್ಟು ವಾಪಸ್ ಕಳುಹಿಸಿದರು. ಮತ್ತೆ ಕೆಲವರಂತೂ ಮತ್ತೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂದರೆ, ಮತ್ತೆ ಕೆಲವರು ಈಗಾಗ್ಲೇ ಬಂದು ಬಿಟ್ಟಿದ್ದೀವಿ. ಮತ್ತೆ ಬರೋಲ್ಲ, ಈಗ ಬಿಡಿ ಎಂದು ಮನವಿ ಮಾಡಿದ ಪ್ರಸಂಗವೂ ನಡೆಯಿತು.
ಒಟ್ಟಿನಲ್ಲಿ ಸಂಚಾರಿ ನಿಯಮ ಪಾಲನೆಗೆ ವಡಾ ನೀಡುವ ಅಭಿಯಾನಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಸವಾರರು ಈ ಕಾರ್ಯಕ್ಕೆ ಭೇಷ್ ಎಂದರು. ಮತ್ತೆ ಕೆಲವರು ಹೌದಲ್ವಾ. ಅಪಘಾತದಲ್ಲಿ ನಮಗೇನಾದರೂ ಆದರೆ ಮನೆಯವರು ತಿಥಿ ಮಾಡಿ ವಡಾ ತಿಂತಾರೆ. ಹಾಗಾಗಿ, ಸಂಚಾರಿ ನಿಯಮ ಪಾಲಿಸುವ ಮೂಲಕ ಹೆಚ್ಚಿನ ಗಮನ ನೀಡಬೇಕು. ಅಪಘಾತ ಆಗದಂತೆ ಎಚ್ಚರ ವಹಿಸಬೇಕು ಎಂಬ ಮಾತು ಹೇಳಿದರು. ಒಟ್ಟಿನಲ್ಲಿ ಶ್ರೀಕಾಂತ್ ಅವರ ಈ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಬೈಕ್ ಸವಾರರು ಹೇಳಿದರು.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications