ದಾವಣಗೆರೆಯಲ್ಲಿ ಡಬಲ್ ಡಿಸ್ಕೌಂಟ್ ಗೆ ಸೀರೆ, ಬಂಪರ್ ಆಫರ್ ಗೆ ಮುಗಿಬಿದ್ದ ಹೆಂಗಳೆಯರು

Recommended Video

      ದಾವಣಗೆರೆಯ ಜವಳಿ ಮಳಿಗೆಯಲ್ಲಿ ಡಬಲ್ ಡಿಸ್ಕೌಂಟ್ ಗೆ ಸೀರೆ | Oneindia Kannada

      ದಾವಣಗೆರೆ, ಆಗಸ್ಟ್.23: ಶ್ರಾವಣ ಮಾಸ ಬಂತೆಂದರೆ ಸಾಲು ಸಾಲು ಹಬ್ಬಗಳು ಬರುತ್ತಲೇ ಇರುತ್ತವೆ. ಹಬ್ಬಗಳು ಬಂತೆಂದರೆ ಕೇಳಬೇಕೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂತಸ. ಅಂದಹಾಗೆ ಈ ಶ್ರಾವಣ ಮಾಸದಲ್ಲಿ ಹೆಂಗಳೆಯರು ಮತ್ತಷ್ಟು ಖುಷಿಯಾಗಿರಲಿ ಎಂದು ಇಲ್ಲೊಂದು ಜವಳಿ ಮಳಿಗೆ ಡಬಲ್ ಡಿಸ್ಕೌಂಟ್ ಗೆ ಸೀರೆ ಕೊಡುತ್ತಿದೆ. ಅದು ಎಲ್ಲಿ ಅಂತಿರಾ? ಈ ಸ್ಟೋರಿ ನೋಡಿ.

      ಬೆಳಗಿನ ಜಾವ ಮೂರು ಗಂಟೆಯಿಂದ ಸರದಿ ಸಾಲಲ್ಲಿ ನಿಂತಿರುವ ಹೆಣ್ಣು ಮಕ್ಕಳು, ಮತ್ತೊಂದು ಕಡೆ ನಾ ಮುಂದು ತಾ ಮುಂದು ಎಂದು ಸೀರೆ ಕೊಂಡುಕೊಳ್ಳಲು ಮುಗಿಬಿದ್ದಿರುವ ಜನ. ಇಂತಹದೊಂದು ಸನ್ನಿವೇಶ ಕಂಡು ಬಂದಿದ್ದು ದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿರುವ ಬಿಎಸ್ ಚನ್ನಬಸಪ್ಪ ಜವಳಿ ಅಂಗಡಿಯ ಮುಂಭಾಗ.

      ಹೌದು. ಶ್ರಾವಣ ಮಾಸದ ಪ್ರಯುಕ್ತ ಅಂಗಡಿ ಮಾಲೀಕರು ಸೀರೆಗಳನ್ನು ಡಬಲ್ ಡಿಸ್ಕೌಂಟ್ ಗೆ ಕೊಡಲಾರಂಭಿಸಿದ್ದಾರೆ. ಇದೇ ಕಾರಣಕ್ಕೆ ಕಳೆದ ಎರಡು ದಿನಗಳಿಂದ ಹೆಂಗಳೆಯರು ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಬಂದು ಸರದಿ ಸಾಲಲ್ಲಿ ನಿಂತು ಸೀರೆ ಖರೀದಿ ಮಾಡುತ್ತಿದ್ದಾರೆ.

      Saree will give to Double Discount at BS Chanabasappa Textile Store

      800 ರೂಪಾಯಿ ಮೌಲ್ಯದ ಸೀರೆಯನ್ನು ಕೇವಲ 200 ರೂಪಾಯಿಗೆ ಕೊಡುತ್ತಿದ್ದು, ಸೀರೆಗಳಷ್ಟೇ ಅಲ್ಲ, ಪುರುಷರ ಉಡುಪುಗಳನ್ನು ಸಹ ಡಬಲ್ ಡಿಸ್ಕೌಂಟ್ ನಲ್ಲಿ ಕೊಡಲಾಗುತ್ತಿದೆ. ಹಾಗಾಗಿ ಹಬ್ಬಕ್ಕೆ ಬಟ್ಟೆ ಖರೀದಿ ಮಾಡಲು ಜನ ಅಂಗಡಿಯತ್ತ ಧಾವಿಸುತ್ತಿದ್ದಾರೆ.

      ಸೀರೆಗಳನ್ನು ಈ ರೀತಿ ಡಬಲ್ ಡಿಸ್ಕೌಂಟ್ ನಲ್ಲಿ ಕೊಟ್ರೆ ಹಬ್ಬವನ್ನು ನಾವು ಖುಷಿಯಿಂದ ಮಾಡಬಹುದು ಎನ್ನುತ್ತಾರೆ ಮಹಿಳೆಯರು.

      ಅಂಗಡಿ ಮಾಲೀಕರು ಹೇಳಿದ್ದು ಹೀಗೆ...
      "ಇಡೀ ರಾಜ್ಯಕ್ಕೆ ಹೆಸರುವಾಸಿಯಾದ ಬಿಎಸ್ ಚನ್ನಬಸಪ್ಪ ಜವಳಿ ಅಂಗಡಿಯಲ್ಲಿ ಪ್ರತಿ ವರ್ಷವೂ ಇದೇ ರೀತಿಯ ಆಫರ್ ನೀಡಲಾಗುತ್ತದೆ. ಈ ದುಬಾರಿ ಖರ್ಚಿನಲ್ಲಿ ಕೆಲ ಕುಟುಂಬಗಳಿಗೆ ಹಬ್ಬ ಮಾಡುವುದೇ ಕಷ್ಟವಾಗಿರುತ್ತೆ. ಅಂತಹುದರಲ್ಲಿ ಸಾವಿರಾರು ರೂಪಾಯಿ ಹಣ ಕೊಟ್ಟು ಬಟ್ಟೆ ಬರೆ ತೆಗೆದುಕೊಳ್ಳುವುದು ಇನ್ನು ಕಷ್ಟವಾಗಿರುತ್ತೆ.

      Saree will give to Double Discount at BS Chanabasappa Textile Store

      ಆದ್ದರಿಂದ ಪ್ರತಿಯೊಬ್ಬರೂ ಹಬ್ಬವನ್ನು ಖುಷಿಯಿಂದ ಆಚರಿಸಲಿ ಎನ್ನುವ ದೃಷ್ಟಿಯಿಂದ ಎಲ್ಲಾ ಬಟ್ಟೆಗಳ ಮೇಲೆ ಡಬಲ್ ಆಫರ್ ನೀಡಲಾಗುತ್ತಿದೆ" ಎನ್ನುತ್ತಾರೆ ಅಂಗಡಿ ಮಾಲೀಕರು.

      ಒಟ್ಟಾರೆಯಾಗಿ ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳನ್ನು ಜನರು ಖುಷಿಯಿಂದ ಮಾಡಲು ಬಿಎಸ್ ಚನ್ನಬಸಪ್ಪ ಅಂಗಡಿಯವರು ಡಬಲ್ ಡಿಸ್ಕೌಂಟ್ ಆಫರ್ ನೀಡಿದ್ದು, ಮಧ್ಯಮ ವರ್ಗದ ಜನರಿಗೆ ಖುಷಿ ತಂದಂತಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+