ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ : ಕಣಮಾ-ಪರಸಾ ಗ್ಯಾಂಗ್‌ನಿಂದ ಬುಳ್ ನಾಗ ಹತ್ಯೆ

|
Google Oneindia Kannada News

ದಾವಣಗೆರೆ, ಮೇ 22 : ದಾವಣಗೆರೆಯಲ್ಲಿ ನಡೆದಿದ್ದ ರೌಡಿ ಶೀಟರ್ ಬುಳ್ ನಾಗ ಹತ್ಯೆ ಪ್ರಕರಣದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ರೌಡಿ ಕಾಗೆ ರಾಜಾ- ಚಟ್ನಿ ಅಜ್ಜಯ್ಯ ಜೋಡಿ ಕೊಲೆಗೆ ಪ್ರತೀಕಾರವಾಗಿ ಬುಳ್ ನಾಗನ ಹತ್ಯೆ ನಡೆದಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ದಾವಣಗೆರೆಯ ವಿದ್ಯಾನಗರ ಪೊಲೀಸರು ಬುಳ್ ನಾಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಆರೋಪಿಗಳನ್ನು ಬಂಧಿಸಿದ್ದಾರೆ. ಕಣಮಾ-ಪರಸಾ ಗ್ಯಾಂಗ್ ಸದಸ್ಯರು ಸೇರಿ ಬುಳ್ ನಾಗನನ್ನು ಹತ್ಯೆ ಮಾಡಿದ್ದರು.

ದಾವಣಗೆರೆ : ನಡು ರಾತ್ರಿ ರೌಡಿ ಶೀಟರ್ ಕೊಚ್ಚಿ ಕೊಲೆದಾವಣಗೆರೆ : ನಡು ರಾತ್ರಿ ರೌಡಿ ಶೀಟರ್ ಕೊಚ್ಚಿ ಕೊಲೆ

ಸಂತೋಷ್ ಅಲಿಯಾಸ್ ಕಣಮಾ, ಪರುಶರಾಮ್ ಅಲಿಯಾಸ್ ಪರಸಾ ಗ್ಯಾಂಗ್‌ನ ಸದಸ್ಯರು ಒಟ್ಟಾಗಿ ರೌಡಿ ಕಾಗೆ ರಾಜಾ- ಚಟ್ನಿ ಅಜ್ಜಯ್ಯ ಜೋಡಿ ಕೊಲೆಗೆ ಪ್ರತೀಕಾರವಾಗಿ ಬುಳ್ ನಾಗನನ್ನು ಹತ್ಯೆ ಮಾಡಿದ್ದರು.

Rowdy sheeter Nagaraj murder 18 arrested

ಮಾಜಿ ಪಾಲಿಕೆ ಸದಸ್ಯ ಮೋಟ್ ಬೆಳ್ ಸೀನ, ಕಬ್ಬಡ್ಡಿ ಶಿವು ಸೇರಿದಂತೆ 16 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಎರಡು ಬಾರಿ ಬುಳ್ ನಾಗನ ಹತ್ಯೆಗೆ ಪ್ರಯತ್ನ ನಡೆದಿತ್ತು, ಆದರೆ, ಪ್ರಾಣಾಪಾಯದಿಂದ ಪಾರಾಗಿದ್ದ.

ದಾವಣಗೆರೆ: ವಿಮೆ ಹಣ ಲಪಟಾಯಿಸಲು ಸಿನಿಮಾ ಮಾದರಿ ಕೊಲೆದಾವಣಗೆರೆ: ವಿಮೆ ಹಣ ಲಪಟಾಯಿಸಲು ಸಿನಿಮಾ ಮಾದರಿ ಕೊಲೆ

ಮೇ 11ರಂದು ರಾತ್ರಿ ದಾವಣಗೆರೆಯ ಕೆಎಸ್ಆರ್‌ಟಿಸಿ ಬಸ್ ಡಿಪೋ ಸಮೀಪ 30 ವರ್ಷದ ನಾಗರಾಜ್ ಅಲಿಯಾಸ್ ಬುಳ್ ನಾಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ಡಿಸೆಂಬರ್ 9ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಗ್ಯಾಂಗ್‌ವೊಂದು ಬುಳ್ ನಾಗನ ಮೇಲೆ ದಾಳಿ ಮಾಡಿತ್ತು. ಆದರೆ, ಪ್ರಾಣಾಪಾಯದಿಂದ ಪಾರಾಗಿದ್ದ. ಮತ್ತೊಮ್ಮೆ ಆತನ ಹತ್ಯೆ ಯತ್ನ ನಡೆದಿತ್ತು.

ಮೇ 11ರಂದು ರಾತ್ರಿ ಸಹಚರರ ಜೊತೆ ಬೈಕ್‌ನಲ್ಲಿ ಬರುವಾಗ ಮಚ್ಚಿನಿಂದ ಬುಳ್ ನಾಗನ ಮೇಲೆ ದಾಳಿ ಮಾಡಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದ.

ಬಂಧಿತ ಆರೋಪಿಗಳು : ಸಂತೋಷ್ ಕುಮಾರ್ ಅಲಿಯಾಸ್ ಕಣುಮ (34), ಪರುಶರಾಮ್ ಅಲಿಯಾಸ್ ಪರಸ (27), ಕೆ.ವಿಜಯನಾಯ್ಕ್ (25), ಪವನ್ ಕುಮಾರ್ (20), ಮಹಾಂತೇಶ್ (20), ಜಿ.ನವೀನ್ (19), ಪಿ.ರಾಕೇಶ್ (19).

ಮಂಜುನಾಥ್ (19), ಎಸ್.ವಿಜಯ್ (18), ಕಬ್ಬಡಿ ಶಿವು (27), ಎ.ಮೈಲಾರಿ (22), ರಮೇಶ್ (24), ಎನ್. ಮನೋಜ್ (19), ಮೋಟ್ ಬೆರಳ್ ಸೀನ (43), ಸುಬಾನಿ (24), ರಾಬಿ (44), ನೀಲಗಿರಿ (37), ಪರಮೇಶಿ (30).

ಮೋಟ್ ಬೆರಳ್ ಸೀನ ನಗರ ಪಾಲಿಕೆ ಮಾಜಿ ಸದಸ್ಯನಾಗಿದ್ದು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೊಲೆಗೆ ಈತ ಸಹಕಾರ ನೀಡಿದ್ದ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

English summary
Davanagere Vidya Nagar police arrested 18 accused in connection with the rowdy sheeter Nagaraj (30) death case. Nagaraj hacked to death in Davanagere city on May 11, 2019 night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X