ದಾವಣಗೆರೆ ಜಯಚಾಮರಾಜೇಂದ್ರ ಎಕ್ಸ್ ಟೆನ್ಷನ್ ನಲ್ಲಿ ರಾಯರ ಆರಾಧನೆ

Posted By:
Subscribe to Oneindia Kannada

ದಾವಣಗೆರೆ, ಆಗಸ್ಟ್ 8: ಇಲ್ಲಿನ ಜಯಚಾಮರಾಜೇಂದ್ರ ಎಕ್ಸ್ ಟೆನ್ಷನ್ ನಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 8ರ ಮಂಗಳವಾರ ರಾಯರ ಪೂರ್ವಾರಾಧನೆ ಶ್ರದ್ಧಾ- ಭಕ್ತಿಯಿಂದ ನೆರವೇರಿತು. ಆರು ನೂರಕ್ಕೂ ಹೆಚ್ಚು ಭಕ್ತರು ತೀರ್ಥ-ಪ್ರಸಾದವನ್ನು ಸ್ವೀಕಾರ ಮಾಡಿದರು.

ಒನ್ಇಂಡಿಯಾ ಭದ್ರತಾ ಅಧಿಕಾರಿಗೆ ದೇವರನಾಮ ಸ್ಪರ್ಧೆಯಲ್ಲಿ ಬಹುಮಾನ

ಬೆಳಗ್ಗೆ ಹಾಗೂ ಸಂಜೆ ಪುರಾಣ ಪ್ರವಚನವನ್ನು ಏರ್ಪಡಿಸಲಾಗಿತ್ತು. ಇನ್ನು ಬುಧವಾರದಂದು ರಥೋತ್ಸವವನ್ನು ಆಯೋಜಿಸಲಾಗಿದ್ದು, ಉಪನಯನ ಮಾಡಲು ಬಯಸುವವರು ಮುಂಚಿತವಾಗಿ ತಿಳಿಸಿದ್ದರೆ ಅದಕ್ಕೂ ವ್ಯವಸ್ಥೆ ಮಾಡಲಾಗಿದೆ. ಇನ್ನು ಗುರುವಾರದಂದು ಮಠದ ಆವರಣದಲ್ಲಿ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗಿದೆ.

Davanagere Brindavana

ಅಂದು ರಾಯರಿಗೆ ಪಾದಪೂಜೆ ಮಾಡಲು ಇಚ್ಛಿಸುವವರು ಸ್ವತಃ ಪೂಜೆಗೆ ಹಾಗೂ ಮಂಗಳಾರತಿ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಇನ್ನು ಶ್ರಾವಣ ಮಾಸದ ಪ್ರಯುಕ್ತ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಪ್ರವಚನ ಕಾರ್ಯಕ್ರಮವನ್ನು ಪುರಂದರಾಚಾರ್ಯ ಹಯಗ್ರೀವ, ಪಾಂಡುರಂಗಾಚಾರ್ಯ, ಗೋಪಾಲಾಚಾರ್ಯರಿಂದ ಆಯೋಜಿಸಲಾಗಿದೆ.

Raghavendra Swamy Aradhane- Jayanagar, Bengaluru

ರಾಯರ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ತಮ್ಮ ಸೇವೆಯನ್ನು ನೀಡಲು ಬಯಸುವವರು ನೇರವಾಗಿ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ, ಸೇವೆಯ ವಿವರಗಳನ್ನು ತಿಳಿಯಬಹುದು ಎಂದು ಮಠದ ವ್ಯವಸ್ಥಾಪಕರಾದ ಕೆ.ಸುತೀರ್ಥ ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three days special pooja on the occasion of Raghavendra Swamy aradhane at Davanagere Jayachamarajendra extention start from August 8th. Here is the complete details.
Please Wait while comments are loading...