ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಅವರ ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ತನಿಖೆ ನಡೆಸಲಾಗುವುದು: ಕಟೀಲ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 8: ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ಮುಚ್ಚಿ ಹಾಕುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ದಾಖಲಾತಿಗಳನ್ನು ಮುಚ್ಚಿಹಾಕಲು ಯತ್ನಿಸಿದ್ದು, ನಮ್ಮ ಸರಕಾರ ಹೊರತೆಗೆಯುತ್ತದೆ. ಮುಂದಿನ ದಿನಗಳಲ್ಲಿ‌ ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದ ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲಾವಧಿಯಲ್ಲಿನ ಹಗರಣಗಳು ಹೊರಬರುತ್ತವೆ ಎಂದು ತಿಳಿಸಿದರು.

ಮಾಜಿ ಸಚಿವ ಕೆ. ಎಸ್. ಈಶ್ವರಪ್ಪರಿಗೆ ಯಾವುದೇ ಅಸಮಾಧಾನ ಇಲ್ಲ. ಖಾಲಿ ಇರುವ ಸ್ಥಾನಗಳನ್ನು ತುಂಬಬೇಕು ಎಂಬರ್ಥದಲ್ಲಿ ಹೇಳಿದ್ದಾರೆ. ಅವರು ನಿರಂತರವಾಗಿ ನಮ್ಮ ಜೊತೆಯಲ್ಲಿದ್ದಾರೆ. ಯಾವುದೇ ಗೊಂದಲ ಇಲ್ಲ. ಸಂಪುಟ ವಿಸ್ತರಣೆ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಅದು ಸರಿಯಾಗಿಯೇ ಇದೆ. ಈ ಬಗ್ಗೆ ಚರ್ಚಿಸಿ ವಿಸ್ತರಣೆ ಮಾಡಲಾಗುತ್ತದೆ. ಸಂಪುಟ ವಿಸ್ತರಣೆ ಮಾಡುವ ವಿಚಾರ‌ ಸಿಎಂ ವಿವೇಚನೆಗೆ ಬಿಟ್ಟದ್ದು. ಅದರಲ್ಲಿ ಚರ್ಚೆ ಮಾಡುವುದೇನಿಲ್ಲ ಎಂದು ಹೇಳಿದರು.

ಕಟೀಲು ದೇವಳಕ್ಕೂ ವ್ಯಾಪಿಸಿದ ಮನಿ ಮಾಫಿಯಾ, 100 ರೂ ಕೊಟ್ಟರೆ ಶೀಘ್ರದರ್ಶನ, ಭಕ್ತರ ಅಸಮಾಧಾನಕಟೀಲು ದೇವಳಕ್ಕೂ ವ್ಯಾಪಿಸಿದ ಮನಿ ಮಾಫಿಯಾ, 100 ರೂ ಕೊಟ್ಟರೆ ಶೀಘ್ರದರ್ಶನ, ಭಕ್ತರ ಅಸಮಾಧಾನ

ಭಾರತ್ ಜೋಡೊ ಯಾತ್ರೆ ಮಾಡುತ್ತಿರುವುದರಿಂದ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿಲ್ಲ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಅಧಿಕಾರದಲ್ಲಿದ್ದಾಗ ಯಾಕೆ ಮಾಡಲಿಲ್ಲ. ಆಗ ಈ ಸಮುದಾಯಗಳ ಬಗ್ಗೆ ಕಾಳಜಿ ಇರಲಿಲ್ವಾ. ನುಡಿದಂತೆ ನಡೆದ ಮುಖ್ಯಮಂತ್ರಿ, ಮಾತು ತಪ್ಪದ ಸರ್ಕಾರ ನಮ್ಮದು. ಅವರ ಕಾಳಜಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಎಲ್ಲವನ್ನೂ ಅಧ್ಯಯನ ಮಾಡಿ ಕ್ರಮ ವಹಿಸಲಾಗಿದೆ ಎಂದರು.

 ಪಾಕಿಸ್ತಾನ ಜಿಂದಾಬಾದ್ ಎನ್ನುವವರು ಯಾತ್ರೆಯಲ್ಲಿದ್ದಾರೆ

ಪಾಕಿಸ್ತಾನ ಜಿಂದಾಬಾದ್ ಎನ್ನುವವರು ಯಾತ್ರೆಯಲ್ಲಿದ್ದಾರೆ

ಭಾರತ್ ಜೋಡೊ ಯಾತ್ರೆ ಅಲ್ಲ, ಓಡೋ ಯಾತ್ರೆ. ದೇಶದ ವಿಭಜನೆ ಮಾಡಿದ್ದು ಕಾಂಗ್ರೆಸ್ಸಿಗರು. ಗಾಂಧೀಜಿಗೂ ಈ ಗಾಂಧೀಜಿಗೂ ಏನು ಸಂಬಂಧ ಎಂದು‌ ಮಕ್ಕಳು ಕೇಳುತ್ತಿದ್ದಾರೆ. ದೇಶದ ವಿಭಜನೆಗೆ ಕಾರಣ ಹಾಗೂ ಬಹುಸಂಖ್ಯಾತ ಸಮುದಾಯದ ಜಾತಿ ಜಾತಿಗಳ ನಡುವೆ ಜಗಳ, ಮುಸಲ್ಮಾನ ಸಮುದಾಯವನ್ನು ಹಿಂದುಗಳ ಮೇಲೆ ಎತ್ತಿಕಟ್ಟುವ ಕೆಲಸ ಮಾಡಿದ್ದೇ ಕಾಂಗ್ರೆಸ್. ಜಾತಿ, ಭಾಷೆ, ಭೌಗೋಳಿಕ ವಿಭಜನೆ ಮಾಡಿ ದೇಶ ಇಬ್ಬಾಗ ಮಾಡಿ ಈಗ ಯಾತ್ರೆ ನಡೆಸಿದರೆ ಏನು ಪ್ರಯೋಜನ. ಪಾಕಿಸ್ತಾನ ಜಿಂದಾಬಾದ್ ಎನ್ನುವ ತಬ್ಲಿಘಿಗಳು ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮನಸ್ಸು ವಿಭಜನೆ‌ ಮಾಡುವ ಯಾತ್ರೆ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.

SC, ST ಮೀಸಲಾತಿ ಏರಿಕೆ: ಸ್ವಾಗತಿಸಿದ ಕಾಂಗ್ರೆಸ್ ಮುಖಂಡ ಡಾ. ಮಹದೇವಪ್ಪSC, ST ಮೀಸಲಾತಿ ಏರಿಕೆ: ಸ್ವಾಗತಿಸಿದ ಕಾಂಗ್ರೆಸ್ ಮುಖಂಡ ಡಾ. ಮಹದೇವಪ್ಪ

 ಮುಸ್ಲಿಂರ ಭಾವನೆ ಕೆರಳುವಂತೆ ಮಾಡಿದ್ದೇ ಸಿದ್ದರಾಮಯ್ಯ

ಮುಸ್ಲಿಂರ ಭಾವನೆ ಕೆರಳುವಂತೆ ಮಾಡಿದ್ದೇ ಸಿದ್ದರಾಮಯ್ಯ

ಮುಸಲ್ಮಾನ ಸಮುದಾಯದವರು ಟಿಪ್ಪು ಜಯಂತಿ ಕೇಳಿರಲಿಲ್ಲ. ಆದರೂ ಸಿದ್ದರಾಮಯ್ಯ ಜಯಂತಿ ಮಾಡಲು ಅವಕಾಶ ಕೊಟ್ಟರು. ಈ ಮೂಲಕ ಮುಸ್ಲಿಂರ ಭಾವನೆ ಕೆರಳುವಂತೆ ಮಾಡಿದ್ದೇ ಸಿದ್ದರಾಮಯ್ಯ. ವೀರಶೈವ ಲಿಂಗಾಯತ ಸಮುದಾಯ ಒಡೆಯಲು ಯತ್ನಿಸಿ ಸಮಾಜ ಇಬ್ಭಾಗ ಮಾಡಲು ಹೋಗಿ ಏನಾದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

 ಎಸ್ಸಿ, ಎಸ್ಟಿ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ

ಎಸ್ಸಿ, ಎಸ್ಟಿ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ

ಅಕ್ಟೋಬರ್‌ 11ರಿಂದ ಬಿಜೆಪಿ ಯಾತ್ರೆ ಶುರುವಾಗುತ್ತದೆ. ನಾನು ಈಗಾಗಲೇ ಪ್ರವಾಸ ಶುರು ಮಾಡಿದ್ದೇನೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರವಾಸ ನಡೆಸಲಿದ್ದಾರೆ ಎಂದು ತಿಳಿಸಿದ ಅವರು, ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರ ಭಾವನೆಗಳ ಬೆಂಬಲವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡು ಸಮಯದಾಯಗಳಿಗೆ ನ್ಯಾಯ ಸಿಕ್ಕಂತಾಗಿದೆ. ಬೇರೆ ಸಮುದಾಯಗಳಿಗೆ ಕಾನೂನು ವಿವರ ಪಡೆದು ಯೋಚನೆ ಮಾಡಿಯೇ ಮಾಡಲಾಗುತ್ತದೆ ಎಂದರು.

 ಟಿಪ್ಪು ಹೆಸರೇ ಗೊಂದಲ, ಒಡೆಯರ್ ಹೆಸರಿಟ್ಟಿದ್ದು ಒಳ್ಳೆಯದು

ಟಿಪ್ಪು ಹೆಸರೇ ಗೊಂದಲ, ಒಡೆಯರ್ ಹೆಸರಿಟ್ಟಿದ್ದು ಒಳ್ಳೆಯದು

ಬೆಂಗಳೂರು - ಮೈಸೂರು ನಡುವೆ ಸಂಚರಿಸುವ ಟಿಪ್ಪು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಟಿಪ್ಪು ಹೆಸರು ಕೈಬಿಟ್ಟಿರುವುದನ್ನು ಸಮರ್ಥಿಸಿಕೊಂಡ ನಳೀನ್‌ ಕುಮಾರ್ ಕಟೀಲ್, ಟಿಪ್ಪು ಹೆಸರಿನ ಬದಲಿಗೆ ಒಡೆಯರ್ ಹೆಸರು ಇಟ್ಟಿರುವುದು ಒಳ್ಳೆಯದು. ರಾಜ್ಯಕ್ಕೆ ಒಡೆಯರ್ ದೊಡ್ಡ ಕೊಡುಗೆ ನೀಡಿದ ಅಭಿವೃದ್ದಿಯ ಹರಿಕಾರರು. ಮೊದಲ ಬಾರಿಗೆ ಸಕ್ಕರೆ ಕಾರ್ಖಾನೆ ಆರಂಭಿಸಿದವರು. ಹತ್ತಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಟಿಪ್ಪು ಹೆಸರೇ ಗೊಂದಲ, ಚರ್ಚೆಯಲ್ಲಿದೆ. ಚರ್ಚೆಯಲ್ಲಿರುವ ಕಾರಣ ಹೆಸರು ತೆಗೆಯಲಾಗಿದೆ ಎಂದು ತಿಳಿಸಿದರು.

English summary
Karnatakan government will probe the Arkavathy de-notification scandal which took place during Siddaramaiah’s tenure, BJP state president Nalin Kumar Kateel said in Davanagere,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X