ವಿಶೇಷ ವರದಿ: ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ MIS-C, A-NEC ಸೋಂಕು ಪತ್ತೆ

ದಾವಣಗೆರೆ, ಜೂನ್ 26: ಕೊರೊನಾ ಸೋಂಕು ತಗುಲಿ ಗುಣಮುಖರಾದ ಮಕ್ಕಳಲ್ಲಿ MIS-C ಹಾಗೂ A-NEC ಎಂಬ ಸೋಂಕು ಕಂಡುಬರುತ್ತಿದೆ ಎಂಬ ಆಘಾತಕಾರಿ ವಿಚಾರ ಹೊರಬಿದ್ದಿದೆ. ಇನ್ನು ಆರು ವಾರದಿಂದ ಎರಡು ತಿಂಗಳಲ್ಲಿ ಹೆಚ್ಚಾಗಿ ಈ ರೋಗಗಳು ಕಂಡು ಬರುವ ಸಾಧ್ಯತೆ ಇದೆ ಎಂದು ಮಕ್ಕಳ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಏಳು ಮಕ್ಕಳಲ್ಲಿ MIS-C ಸೋಂಕು ಪತ್ತೆಯಾಗಿದ್ದು, ಈ ಪೈಕಿ ಐವರು ಗುಣಮುಖರಾಗಿದ್ದು, ಇನ್ನು ಇಬ್ಬರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎರಡು- ಮೂರು ತಿಂಗಳಿನಿಂದ MIS-C ಕೇಸ್‌ಗಳು ಬರುತ್ತಿವೆ. ಕೊರೊನಾ ಬಂದು ಹೋದ ಮಕ್ಕಳಲ್ಲಿ ಈ ರೋಗ ಪತ್ತೆಯಾಗುತ್ತಿದ್ದು, ಪೋಷಕರು ಎಚ್ಚರಿಕೆ ವಹಿಸಬೇಕಾಗಿದೆ.

 MIS-C ಗುಣಲಕ್ಷಣಗಳು ಏನು?

MIS-C ಗುಣಲಕ್ಷಣಗಳು ಏನು?

ಮಕ್ಕಳಲ್ಲಿ ಸರಿಸುಮಾರು ಶೇ.87 ರಿಂದ 93ರಷ್ಟು ಕೊರೊನಾ ಎ ಸಿಮ್ಟಮಿಟಿಕ್ ಬಂದು ಹೋಗಿರುತ್ತದೆ. ಆದರೆ, ಇದು ಗೊತ್ತಾಗುವುದಿಲ್ಲ. ಹೊಟ್ಟೆ ನೋವು, ವಾಂತಿ, ಮೈಮೇಲೆ ಅಮ್ಮನ ಜ್ವರ ರೀತಿ ಕಾಣಿಸಿಕೊಳ್ಳುವುದು MIS-C ಗುಣಲಕ್ಷಣಗಳು. ಇಂಥ ಮಕ್ಕಳಿಗೆ ಬೇಗನೇ ಡಯಾಗ್ನ್ ಮಾಡಿ ಚಿಕಿತ್ಸೆ ನೀಡಿದರೆ ಹುಷಾರಾಗುತ್ತಾರೆ. ಆಸ್ಪತ್ರೆಗೆ ಮಕ್ಕಳು ಬಂದಾಗಲೇ ಅಂಗಾಂಗಳ ವೈಫಲ್ಯತೆಯಿಂದ
ಬಳಲುತ್ತಿದ್ದದ್ದು ಗೊತ್ತಾಯಿತು. ಹಾರ್ಟ್, ಲೀವರ್, ಉಸಿರಾಟ ತೊಂದರೆ, ಕಿಡ್ನಿ ವೈಫಲ್ಯ ಆಗಿರುವ ಮಕ್ಕಳು ಬಂದಿದ್ದು ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಇಬ್ಬರು ಮಕ್ಕಳಿಗೆ ಚಿಕಿತ್ಸೆ ಮುಂದುವರಿದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

 ಏನು ಚಿಕಿತ್ಸೆ ನೀಡಲಾಗುತ್ತದೆ?

ಏನು ಚಿಕಿತ್ಸೆ ನೀಡಲಾಗುತ್ತದೆ?

ಇನ್ನು MIS-C ರೋಗಕ್ಕೆ ತುತ್ತಾದ ಮಕ್ಕಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿರುವ ವೈದ್ಯರು ಹೇಳುವ ಪ್ರಕಾರ, "ಸ್ಟಿರಾಯ್ಡ್ ಹಾಗೂ ಇಮೋಗ್ಲೋಬಿನ್ ಇಂಜೆಕ್ಷನ್ ಸಿಗುವ ಆಸ್ಪತ್ರೆಗೆ ಹೋಗಬೇಕು. ಎಷ್ಟೋ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್ ಸಿಗುವುದಿಲ್ಲ. ಹಾಗಾಗಿ ಈ ವ್ಯವಸ್ಥೆ ಇರುವ ಆಸ್ಪತ್ರೆಗೆ ಹೋಗಬೇಕು. ಇಲ್ಲದಿದ್ದರೆ ಮಗು ಬದುಕುಳಿಯುವುದು ಕಷ್ಟವಾಗುತ್ತದೆ'' ಎಂದು ಎಸ್.ಎಸ್. ಹೈಟೆಕ್
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎನ್. ಕೆ. ಕಾಳಪ್ಪನವರ್ ಹೇಳಿದರು.
"ಮಕ್ಕಳಿಗೆ ಚಿಕಿತ್ಸೆ ನೀಡುವ ವೆಚ್ಚವೂ ಜಾಸ್ತಿಯಾಗುತ್ತದೆ. ಹತ್ತು ಕೆಜಿ ಇರುವ ಮಗುವಿನ ಚಿಕಿತ್ಸೆಗೆ 60 ಸಾವಿರ ರೂಪಾಯಿ ತಗುಲುತ್ತದೆ. ಇಮೋಗ್ಲೋಬಿನ್ ಎಲ್ಲಾ ಕಡೆಗಳಲ್ಲಿಯೂ ಸಿಗುವುದಿಲ್ಲ. ಇನ್ನು ಮಕ್ಕಳ ತೂಕಕ್ಕೆ ತಕ್ಕಂತೆ ಇದನ್ನು ಕೊಡಬೇಕಾಗುತ್ತದೆ. ಹಾಗಾಗಿ, ಹೆಚ್ಚಿನ ತೂಕವಿರುವ ಮಗುವಿಗೆ ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ವೆಚ್ಚ ಆಗುತ್ತದೆ'' ಎಂದು ಮಾಹಿತಿ ನೀಡಿದ್ದಾರೆ.

 ಎ-ನೆಕ್ ರೋಗವೂ ಪತ್ತೆ!

ಎ-ನೆಕ್ ರೋಗವೂ ಪತ್ತೆ!

"ದೇಶದಲ್ಲಿಯೇ ಮೊದಲ ಬಾರಿ ಎನ್ನುವಂತೆ ಹತ್ತು ವರ್ಷದ ಬಾಲಕನಲ್ಲಿ ಎ-ನೆಕ್ ಎಂಬ ಮತ್ತೊಂದು ರೋಗವೂ ಪತ್ತೆಯಾಗಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಬಾಲಕನಲ್ಲಿ ಈ ರೋಗ ದೃಢಪಟ್ಟಿದ್ದು, ಈತನಿಗೆ ದಾವಣಗೆರೆಯ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈಗಾಗಲೇ ವೆಂಟಿಲೇಟರ್‌ನಿಂದ ಹೊರ ಬಂದಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.''
"ಎ-ನೆಕ್ ಅಂದರೆ ಸ್ವರೋಗ ನಿರೋಧಕ ಶಕ್ತಿಯುತ ಅಂಗಾಂಗಳ ನಿಷ್ಕ್ರಿಯತೆ (Acute- Necrotizing Encephalopathy in children) ಎಂದರ್ಥ. ವಿದೇಶಗಳಲ್ಲಿ ವಯಸ್ಕರಲ್ಲಿ ಕಂಡು ಬರುತ್ತಿದ್ದ ಈ ರೋಗ ಈಗ ದಾವಣಗೆರೆಯಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ಬೇರೆ ಎಲ್ಲಿಯೂ ಮಕ್ಕಳಲ್ಲಿ ಬಂದಿರುವ ಬಗ್ಗೆ ವರದಿಯಾಗಿಲ್ಲ. ಕೋವಿಡ್ ಬಂದು ವಾಸಿಯಾದ ಬಳಿಕ ಜ್ವರ, ತಲೆನೋವಿನಿಂದ ಬಳಲುತ್ತಿದ್ದ ಮಗು ಆಸ್ಪತ್ರೆಗೆ ಬಂದಿತ್ತು. ಈ ವೇಳೆ ಪಿಡ್ಸ್ ಬಂದು ಎಚ್ಚರ ತಪ್ಪಿತ್ತು. ತಕ್ಷಣವೇ ಕೋವಿಡ್ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಲಾಯಿತು. ಬಳಿಕ ತೊಂದರೆ ಇರುವುದು ಕಂಡು ಬಂತು. ನಂತರ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ. ಮಗು ಈಗ ಚೇತರಿಸಿಕೊಳ್ಳುತ್ತಿದೆ,'' ಎಂದು ವೈದ್ಯ ಕಾಳಪ್ಪನವರ್ ವಿವರಿಸಿದ್ದಾರೆ.

 ಲಸಿಕೆ ಹಾಕಿಸಿಕೊಳ್ಳುವುದೇ ಪರಿಹಾರ

ಲಸಿಕೆ ಹಾಕಿಸಿಕೊಳ್ಳುವುದೇ ಪರಿಹಾರ

"ವೈದ್ಯರ ಬಳಿ ಹೋದಾಗ ಆರ್‌ಟಿ- ಪಿಸಿಆರ್ ಟೆಸ್ಟ್ ಮಾಡಿಸುವಂತೆ ಹೇಳಿದರೂ, ಪೋಷಕರು ನಿಷ್ಕಾಳಜಿ ವಹಿಸುತ್ತಿದ್ದಾರೆ. ವ್ಯಾಕ್ಸಿನ್ ಪಡೆದರೆ ಪೋಷಕರಿಗೆ ಕೊರೊನಾ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಮಕ್ಕಳಿಗೆ ಸೋಂಕು ತಗುಲುವುದನ್ನು ತಪ್ಪಿಸಬಹುದು. ಅಸ್ತಮಾ, ಸಕ್ಕರೆ ಕಾಯಿಲೆ, ಹೃದಯ ಕಾಯಿಲೆ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಹೆಚ್ಚಾಗಿ MIS-C ಹಾಗೂ A-NEC ಕಂಡು ಬರುತ್ತದೆ.

ಸರ್ಕಾರದ ಕೋವಿಡ್ ನಿಯಮಾವಳಿ ಪಾಲಿಸಬೇಕು. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಈ ರೋಗಗಳು ಬರದಂತೆ ತಡೆಯಬಹುದಾಗಿದೆ,'' ಎಂದು ಡಾ. ಎನ್. ಕೆ. ಕಾಳಪ್ಪನವರ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+