KSRTC Good News: ದಾವಣಗೆರೆಯಿಂದ ಈ ಭಾಗಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರದಲ್ಲಿ ಭಾರೀ ರಿಯಾಯಿತಿ

KSRTC Good News: ಕೆಎಸ್‌ಆರ್‌ಟಿಸಿ ಕರ್ನಾಟಕ ರಾಜ್ಯದ ಜೀವನಾಡಿ ಸಾರಿಗೆಯಾಗಿದೆ. ಇದು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಆಗಾಗ ಹೊಸ ಯೋಜನೆಗಳನ್ನು ರೂಪಿಸುತ್ತಲಿರುತ್ತದೆ. ಇದೀಗ ದಾವಣಗೆರೆಯಿಂದ ಈ ಭಾಗಗಳಿಗೆ ಸಂಚಾರ ಮಾಡುವ ಬಸ್‌ಗಳ ಟಿಕೆಟ್‌ ದರಗಳಲ್ಲಿ ರಿಯಾಯಿತಿ ನೀಡಿದೆ. ಇದು ಇದೇ ಜನವರಿ 5ರಿಂದ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೆಎಸ್‌ಆರ್‌ಟಿಸಿ ಕೈಗೆಟಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಅಲ್ಲದೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮಹತ್ವದ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳುತ್ತಲಿರುತ್ತದೆ. ಇದೀಗ ದಾವಣಗೆರೆಯಿಂದ ಸಂಚಾರ ಮಾಡುವ ಬಸ್‌ಗಳ ಟಿಕೆಟ್‌ ದರದಲ್ಲಿ ರಿಯಾಯಿತಿ ನೀಡಿದೆ. ಹಾಗಾದ್ರೆ ಯಾವೆಲ್ಲಾ ಬಸ್‌ಗಳಿಗೆ ಅನ್ವಯ ಆಗಲಿದೆ ಹಾಗೂ ದರಗಳು, ಮಾರ್ಗಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

KSRTC Good News Ticket Fare Discount Announced on Davanagere Bengaluru amp amp Other Routes from Jan 5

ಜನವರಿ 5ರಿಂದ ಭಾರೀ ರಿಯಾಯಿತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ದಾವಣಗೆರೆ-ಬೆಂಗಳೂರು ಸೇರಿ ಹಲವಯ ಮಾರ್ಗಗಳ ವೋಲ್ವೋ/ಇ.ವಿ. ಪವರ್ ಪ್ಲಸ್ ಹಾಗೂ ನಾನ್ ಎಸಿ ಸ್ಲೀಪರ್ ಬಸ್‌ಗಳ ಟಿಕೆಟ್ ದರಗಳಲ್ಲಿ 2026ರ ಜನವರಿ 5ರಿಂದ ಭಾರೀ ರಿಯಾಯಿತಿ ದರವನ್ನು ನೀಡಲಾಗಿದೆ.

ಟಿಕೆಟ್‌ ದರದಲ್ಲಿ ಭಾರೀ ರಿಯಾಯಿತಿ

* ದಾವಣಗೆರೆಯಿಂದ ಬೆಂಗಳೂರು ವೋಲ್ವೋ ಬಸ್‌ನಲ್ಲಿ ಪ್ರಸ್ತುತ ದರ ಹಗಲು 689 ರೂಪಾಯಿ, ರಾತ್ರಿ ಪ್ರಯಾಣಕ್ಕೆ 748 ರೂಪಾಯಿ ಇತ್ತು. ಇದೀಗ ಪರಿಷ್ಕೃತ ದರ ಹಗಲು ಮತ್ತು ರಾತ್ರಿ ಎರಡು ವೇಳೆಗೂ ಒಂದೇ ದರ 650 ರೂಪಾಯಿ ನಿಗದಿ ಮಾಡಲಾಗಿದೆ.

ಇನ್ನೂ ಇ.ವಿ. ಪವರ್ ಪ್ಲಸ್ ಎ/ಸಿ ಪ್ರಸ್ತುತ ದರ ಹಗಲು ವೇಳೆಯಲ್ಲಿ 663 ರೂಪಾಯಿ, ರಾತ್ರಿ 720 ರೂಪಾಯಿ ಇದ್ದು, ಪ್ರಸ್ತುತ ರಿಯಾಯಿತಿ ದರ 600 ರೂಪಾಯಿ ದರ ನಿಗದಿಪಡಿಸಿದೆ. ವೋಲ್ವೋ 2.0 ಪ್ರಸ್ತುತ ದರ 721 ರೂಪಾಯಿ ಇದ್ದು, ರಿಯಾಯಿತಿ ದರ 680 ರೂಪಾಯಿ ನಿಗದಿಪಡಿಸಲಾಗಿದೆ.

* ದಾವಣಗೆರೆ - ಕಲಬುರಗಿ ನಾನ್ ಎ/ಸಿ ಸ್ಲೀಪರ್ ಪ್ರಸ್ತುತ ದರ 1,091 ರೂಪಾಯಿ ಇದ್ದು, ರಿಯಾಯಿತಿ ದರ 1,005 ರೂಪಾಯಿ ನಿಗದಿಪಡಿಸಿದೆ.

* ದಾವಣಗೆರೆ - ಹೈದರಾಬಾದ್ ನಾನ್ ಎ/ಸಿ ಸ್ಲೀಪರ್ ಪ್ರಸ್ತುತ ದರ 1,405 ರೂಪಾಯಿ ಇದ್ದು, ರಿಯಾಯಿತಿ ದರ 1,265 ರೂಪಾಯಿ ನಿಗದಿಪಡಿಸಿದೆ.

ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒಂದು ಕಡೆ ಹಾಗೂ ಎರಡು ಕಡೆಯ ಪ್ರಯಾಣದ ಬುಕ್ಕಿಂಗ್ ಒಟ್ಟಿಗೆ ಮಾಡಿದದರೆ, ಪ್ರಯಾಣ ದರಕ್ಕೆ ಶೇಕಡ 10ರಷ್ಟು ರಿಯಾಯಿತಿ ನೀಡಲಾಗಿದೆ. ಪ್ರಯಾಣಿಕರು ರಿಯಾಯಿತಿ ದರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+