ದಾವಣಗೆರೆ; ಹಕ್ಕು ಚಲಾಯಿಸಿ ಸಂತಸ ಪಟ್ಟ ತೃತೀಯ ಲಿಂಗಿಗಳು
ದಾವಣಗೆರೆ, ಮೇ 10; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಮಧ್ಯಾಹ್ನ 1 ಗಂಟೆಯ ತನಕ ಶೇ 37.25ರಷ್ಟು ಮತದಾನವಾಗಿದೆ. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಅರ್ಹರು ಮತದಾನ ಮಾಡಿ ಎಂದು ಚುನಾವಣಾ ಆಯೋಗ ಕರೆ ನೀಡಿದೆ.
ದಾವವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದಲ್ಲಿ ತೃತೀಯ ಲಿಂಗಿಗಳು ಮೊದಲ ಬಾರಿಗೆ ಮತದಾನ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಚುನಾವಣಾ ಆಯೋಗ ಈ ಫೋಟೋವನ್ನು ಟ್ವೀಟ್ ಮಾಡಿದೆ. ವಾಟ್ಸಪ್ ಸ್ಟೇಟಸ್‌ನಲ್ಲಿಯೂ ಅವರು ಹಾಕಿಕೊಂಡಿದ್ದಾರೆ.

ರಾಜ್ಯ ಚುನಾವಣಾ ಆಯೋಗ ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ಬೇತೂರು ಹಳ್ಳಿಯಲ್ಲಿ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬಕ್ಕೆ ಮೆರಗು ತಂದಿದ್ದಾರೆ ಎಂದು ಹೇಳಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ 4,927 ತೃತೀಯ ಲಿಂಗಿಗಳು ಮತದಾನದ ಹಕ್ಕು ಹೊಂದಿದ್ದಾರೆ.
ಇಬ್ಬರು ತೃತೀಯ ಲಿಂಗಿಗಳು ಕಣದಲ್ಲಿ; ಕೇಂದ್ರ ಚುನಾವಣಾ ಆಯೋಗ ತೃತೀಯ ಲಿಂಗಿ ಮತದಾರರು ಮುಕ್ತವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ, ಅಂತಿಮ ಮತದಾರರ ಪಟ್ಟಿ ಪ್ರಕಟಿಸುವಾಗ ತೃತೀಯ ಲಿಂಗಿ ಮತದಾರರು ಎಷ್ಟಿದ್ದಾರೆ? ಎಂದು ಜಿಲ್ಲಾವಾರು ಪಟ್ಟಿಯನ್ನು ಸಹ ಆಯೋಗ ಬಿಡುಗಡೆ ಮಾಡುತ್ತದೆ.
ಕರ್ನಾಟಕದ 224 ಕ್ಷೇತ್ರಗಳಲ್ಲಿ 2,613 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಒಬ್ಬರು ತೃತೀಯ ಲಿಂಗಿ ಅಭ್ಯರ್ಥಿಗಳು ಸಹ ಸೇರಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಎಷ್ಟು ತೃತೀಯ ಲಿಂಗಿ ಮತದಾರರು ಇದ್ದಾರೆ ಎಂದು ಜಿಲ್ಲಾಡಳಿತವು ಮಾಹಿತಿ ನೀಡಿದೆ.
ರಾಜ್ಯದಲ್ಲಿ ಬೆಳಗಾವಿ 151, ವಿಜಯಪುರ 221, ಕಲಬುರಗಿ 329, ರಾಯಚೂರು 262, ಬಳ್ಳಾರಿ 172, ದಾವಣಗೆರೆ 118, ತುಮಕೂರು 108, ಚಿಕ್ಕಬಳ್ಳಾಪುರ 106, ಕೋಲಾರ 163 ತೃತೀಯ ಲಿಂಗಿ ಮತದಾರರು ಇದ್ದಾರೆ.
ಬೆಂಗಳೂರು ಗ್ರಾಮಾಂತರ 148, ಮಂಡ್ಯ 145, ಮೈಸೂರು 230, ಬೆಂಗಳೂರು (ಸೆಂಟ್ರಲ್) 234, ಬೆಂಗಳೂರು (ಉತ್ತರ) 487, ಬೆಂಗಳೂರು (ದಕ್ಷಿಣ) 366, ವಿಜಯನಗರದಲ್ಲಿ 146 ತೃತೀಯ ಲಿಂಗಿ ಮತದಾರರು ಇದ್ದಾರೆ ಎಂದು ಚುನಾವಣಾ ಆಯೋಗವೇ ಮಾಹಿತಿ ನೀಡಿದೆ.












Click it and Unblock the Notifications