ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ನಾಗೇಶ್ ಮನೆ ಮೇಲೆ ದಾಳಿಯತ್ನ: ಜಗದೀಶ್ ಶೆಟ್ಟರ್ ಖಂಡನೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂ. 3: ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆ ಮೇಲೆ ದಾಳಿ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪಠ್ಯ ಪರಿಷ್ಕರಣೆ ವಿರೋಧಿಸಲು ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ಬಗ್ಗೆ ಆಕ್ಷೇಪಗಳಿದ್ದರೆ ಸರ್ಕಾರಕ್ಕೆ ಮನವಿ ಸಲ್ಲಿಸಲಿ. ಕಾನೂನು ರೀತಿ ಹೋರಾಟ ಮಾಡಲಿ. ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು. ಸಚಿವರು ಏನೋ ಒಂದು ನಿರ್ಧಾರ ತೆಗೆದುಕೊಂಡಿರುತ್ತಾರೆ. ಅದು ತಪ್ಪು ಅನಿಸಿದರೆ ಕಾನೂನು ರೀತಿ ಹೋರಾಟ ಮಾಡಿ. ಅದನ್ನ ಬಿಟ್ಟು ಮನೆಗೆ ಬೆಂಕಿ ಹಚ್ಚುವುದು, ದಾಳಿ ಮಾಡುವುದು ಸರಿಯಲ್ಲ. ಇದನ್ನ ನಾನು ಖಂಡಿಸುತ್ತೇನೆ ಎಂದು ತಿಳಿಸಿದರು. ಪಠ್ಯಕ್ರಮ ಪರಿಷ್ಕರಣೆ ವಿವಾದದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಚಿವರ ವರದಿ ಕೇಳಿದ್ದಾರೆ. ಆಕ್ಷೇಪಣೆಗಳಿದ್ದರೆ ವಿಧಾನಸಭೆಯಲ್ಲಿ ಸಿಎಂ ಜೊತೆ ಚರ್ಚಿಸಿ. ಚರ್ಚೆಗೆ ಅವಕಾಶವಿದ್ದಾಗಲೂ ಟೀಕೆ ಮಾಡುವುದು ಸೂಕ್ತವಲ್ಲ. ಪ್ರಚಾರ, ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದರು.

ಸಚಿವ ನಾಗೇಶ್ ಮನೆ ಮೇಲೆ ದಾಳಿ: ಕಠಿಣ ಕ್ರಮಕ್ಕೆ ಗೃಹ ಸಚಿವರ ಆಗ್ರಹಸಚಿವ ನಾಗೇಶ್ ಮನೆ ಮೇಲೆ ದಾಳಿ: ಕಠಿಣ ಕ್ರಮಕ್ಕೆ ಗೃಹ ಸಚಿವರ ಆಗ್ರಹ

 ವಿವಾದ ಕುರಿತು ಸಿಎಂ ಜತೆ ಚರ್ಚೆ: ಶೆಟ್ಟರ್

ವಿವಾದ ಕುರಿತು ಸಿಎಂ ಜತೆ ಚರ್ಚೆ: ಶೆಟ್ಟರ್

ಪಠ್ಯಪುಸ್ತಕದಲ್ಲಿ ಬಸವಣ್ಣನ ವಿಚಾರ ಕೈ ಬಿಟ್ಟ ಕುರಿತು ಮಾಹಿತಿ ಪಡೆಯುತ್ತೇನೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಾವುದನ್ನು ಮಕ್ಕಳು ಓದುತ್ತಾರೆಯೋ ಅದೇ ಪಠ್ಯದಲ್ಲಿ ಇರಬೇಕು ಹೊರತು ಯಾವುದೇ ಸಿದ್ದಾಂತವನ್ನು ಪಠ್ಯದಲ್ಲಿ ಅಳವಡಿಸುವುದು ತಪ್ಪು ಎಂಬುದೇ ನಮ್ಮ ನಿಲುವು. ಇದನ್ನು ನಾನು ಸಹ ಹೇಳುತ್ತೇನೆ, ಶಿಕ್ಷಣ ಸಚಿವರು ಹೇಳುತ್ತಾರೆ ಎಂದರು. ಆದರೆ, ಪಠ್ಯದಲ್ಲಿ ಯಾವ ಕಾರಣಕ್ಕೆ ಬಸವಣ್ಣನವರ ವಿಚಾರ ಕೈ ಬಿಟ್ಟಿದ್ದಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಮಾತನಾಡುತ್ತೇನೆ. ಈಗಾಗಲೇ ಈ ಬಗ್ಗೆ ಮಾಹಿತಿ ಕೇಳಿದ್ದೇನೆ. ಇನ್ನು, ಹೆಚ್ಚಿನ ಮಾಹಿತಿಯನ್ನು ತರಲು ಸಹ ಹೇಳಿದ್ದೇನೆ. ಲಿಂಗಾಯತ ಮಠಾಧೀಶರರು ಯಾವ ಕಾರಣಕ್ಕೆ ಪತ್ರ ಬರೆದಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನನಗೆ ಇಲ್ಲ ಎಂದು ಹೇಳಿದರು.

ಪಠ್ಯದಿಂದ ಅಧ್ಯಾಯ ಕೈಬಿಡಿ ಅಭಿಯಾನ ಕಾಂಗ್ರೆಸ್ ಉಪಕೃತರ ನಾಟಕ: ಪ್ರತಾಪ್ ಸಿಂಹಪಠ್ಯದಿಂದ ಅಧ್ಯಾಯ ಕೈಬಿಡಿ ಅಭಿಯಾನ ಕಾಂಗ್ರೆಸ್ ಉಪಕೃತರ ನಾಟಕ: ಪ್ರತಾಪ್ ಸಿಂಹ

 ಇತಿಹಾಸ ತಿರುಚುವ ಕೆಲಸ ಆಗಬಾರದು

ಇತಿಹಾಸ ತಿರುಚುವ ಕೆಲಸ ಆಗಬಾರದು


ರಾಜ್ಯದಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನೇ ರದ್ದು ಮಾಡುವಂತೆ ಮಾಜಿ ಸಚಿವ ಎಂ. ಬಿ. ಪಾಟೀಲ್ ಅವರು ಒತ್ತಾಯಿಸಿದರು. ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಠ್ಯದಲ್ಲಿ ಬಸವಣ್ಣ, ಕೆಂಪೇಗೌಡ, ಗೌತಮ ಬುದ್ದ ಸೇರಿ ಹಲವು ಮಹಾಪುರುಷರಿಗೆ ಗೌರವ ನೀಡಬೇಕು. ಆದರೆ, ಪಠ್ಯದಲ್ಲಿ ಅವರ ಹೆಸರಿಗೆ ಅಪಚಾರ ಮಾಡಬಾರದು ಎಂದು ಹೇಳಿದರು.

ಮಹಾಪುರುಷರು ಮುಂದಿನ ಪೀಳಿಗೆಗೂ ಮಾರ್ಗದರ್ಶಕರು. ಈ ವಿಚಾರದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಬಹಳ ಗೊಂದಲ ಸೃಷ್ಟಿ ಮಾಡಿದೆ. ಹೀಗಾಗಿ, ಇದನ್ನ ಕೂಡಲೇ ವಜಾಗೊಳಿಸಿ. ರಾಜ್ಯದಲ್ಲಿ ಸಾಕಷ್ಟು ಚಿಂತಕರು, ಸಾಹಿತಿಗಳು, ಬುದ್ದಿಜೀವಿಗಳಿದ್ದಾರೆ. ಒಳ್ಳೆಯ ಜನರಿಂದ ಪರಿಷ್ಕರಣೆ ಮಾಡಿಸಿ. ಸತ್ಯ ಸಂಗತಿ ನಾಡಿಗೆ ತಿಳಿಸಲಿ. ಇತಿಹಾಸ ತಿರುಚುವ ಕೆಲಸ ಯಾವುದೇ ಕಾರಣಕ್ಕೂ ಆಗಬಾರದು ಎಂದು ಆಗ್ರಹಿಸಿದರು.

ಸಚಿವ ಬಿ ಸಿ ನಾಗೇಶ್ ಮನೆ ಮೇಲೆ ದಾಳಿ ಯತ್ನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇದಕ್ಕೆಲ್ಲ ಕಾನೂನು ಕೈಗೆ ತೆಗೆದು ಕೊಳ್ಳಬಾರದು. ಇದರಲ್ಲಿ ನಮಗೆ ನಂಬಿಕೆಯೂ ಇಲ್ಲ. ಸಮಯ ಸಿಕ್ಕರೆ ನಾನು ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೆ ಚರ್ಚಿಸುತ್ತೇನೆ. ಮಹಾಪುರುಷರ ಹೆಸರಲ್ಲಿ ಗೊಂದಲ ಸೃಷ್ಟಿ ಮಾಡಿದ್ದನ್ನ ಯಾರೂ ಒಪ್ಪಲ್ಲ ಎಂದು ಅಭಿಪ್ರಾಯಪಟ್ಟರು.

 ನಿಜ ಹೇಳಲು ಇಂದಿರಾಗಾಂಧಿ ಕಾಲದಿಂದಲೂ ಅವಕಾಶ ನೀಡಿಲ್ಲ

ನಿಜ ಹೇಳಲು ಇಂದಿರಾಗಾಂಧಿ ಕಾಲದಿಂದಲೂ ಅವಕಾಶ ನೀಡಿಲ್ಲ

ಮಕ್ಕಳಿಗೆ ಇತಿಹಾಸದ ಘಟನೆಗಳ ಬಗ್ಗೆ ನಿಜ ಹೇಳಬೇಕೋ ಅಥವಾ ಸುಳ್ಳು ಹೇಳಬೇಕೋ ಇತಿಹಾಸದ ಬಗ್ಗೆ ನಿಜ ಹೇಳಲು ಬಹಳ ಕಾಲದಿಂದಲೂ ಅವಕಾಶ ನೀಡಿಲ್ಲ ಎಂದು ಡಾ. ಎಸ್.ಎಲ್.‌ಭೈರಪ್ಪ‌ ತಿಳಿಸಿದ್ದಾರೆ.

ಮೈಸೂರು ಕುವೆಂಪು ನಗರದ ತಮ್ಮ‌ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಠ್ಯಪುಸ್ತಕ ಪರಷ್ಕರಣೆ ವಿವಾದದ ಬಗ್ಗೆ ಮಾತನಾಡಿದರು. ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ಏನನ್ನು ಹೇಳಬೇಕು ಎಂಬ ನಿಲುವಿಗೆ ಈ ತನಕ ಬರಲಾಗಿಲ್ಲ.‌ ಮಕ್ಕಳಿಗೆ ಇತಿಹಾಸದ ಘಟನೆಗಳ ಬಗ್ಗೆ ನಿಜ ಹೇಳಬೇಕೋ ಅಥವಾ ಸುಳ್ಳು ಹೇಳಬೇಕೋ ? ನಿಜ ಹೇಳಲು ಇಂದಿರಾಗಾಂಧಿ ಕಾಲದಿಂದಲೂ ಅವಕಾಶ ನೀಡಿಲ್ಲ.‌ ನಾನು ಎನ್.ಸಿ.ಇ.ಆರ್.ಟಿ ಯಲ್ಲಿ ಸೇವೆ ಸಲ್ಲಿಸುವಾಗ ಪಠ್ಯ ಪುಸ್ತಕ ಪರಿಷ್ಕರಣೆಗೆ ಇಂದಿರಾ ಸರ್ಕಾರ ಸಮಿತಿ ರಚನೆ ಮಾಡಿತ್ತು. ಅ ಸಮಿತಿಯಲ್ಲಿ ನಾನು ಇದ್ದೆ. ಅದರೆ ಪಠ್ಯ ಪುಸ್ತಕದಲ್ಲಿ ಅನೇಕ ಅನಗತ್ಯ ವಿಚಾರಗಳಿವೆ ಅಂತಾ ಸಮಿತಿ ಅಧ್ಯಕ್ಷರಾಗಿದ್ದ ಪಾರ್ಥಸಾರಥಿ ಹೇಳಿದ್ರು ಅನಗತ್ಯ ವಿಚಾರ ಯಾವುದು ಎಂಬ ಉದಾಹರಣೆ ಕೊಡಿ ಅಂತ ನಾನು ಪ್ರಶ್ನೆ ಮಾಡಿದ್ದೆ ಎಂದು ಹೇಳಿದರು.

ಶಿಕ್ಷಣ ಸಚಿವ ನಾಗೇಶ್ ಮನೆ ಮೇಲೆ ದಾಳಿ ವಿಚಾರವಾಗಿ ಮಾತನಾಡಿದ ಅವರು, ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು.‌ ಸಚಿವ ನಾಗೇಶ್ ಮನೆ ಸುಟ್ಟು ಹಾಕಲು ಹೋಗಿದ್ದರು. ಸುಮ್ಮನೆ ಯಾರೋ ಹುಡುಗರು ಇದನ್ನು ಮಾಡುವುದಿಲ್ಲ ಇದನ್ನು ಯಾರೋ ಮಾಡಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಐಕ್ಯತೆ ಮೂಡುವುದು ಯಾವಾಗ ಎಂದರು.

 ಕಠಿಣ ಕ್ರಮಕ್ಕೆ ಗೃಹ ಸಚಿವರ ಆಗ್ರಹ

ಕಠಿಣ ಕ್ರಮಕ್ಕೆ ಗೃಹ ಸಚಿವರ ಆಗ್ರಹ

ಸಚಿವ ಬಿ.ಸಿ ನಾಗೇಶ್ ಅವರ ಮನೆಯ ಮೇಲಿನ ದಾಳಿ ನಡೆಸಿ, ಬೆಂಕಿ ಹಚ್ಚಲು ಮುಂದಾದ ಎನ್ ಎಸ್ ಯು ಐ ಕಾರ್ಯಕರ್ತರ ಕೃತ್ಯವನ್ನು ಖಂಡಿಸುತ್ತೇನೆ ಎಂದು ಗೃಹಸಚಿವರ ಆರಗ ಜ್ಞಾನೆಂದ್ರ ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮನೆಯ ಮೇಲೆ ಎನ್ ಎಸ್ ಯು ಐ ಕಾರ್ಯಕರ್ತರ ದಾಳಿ ನಡೆದ ಹಿನ್ನೆಲೆಯಲ್ಲಿ ತಿಪಟೂರಿನ ಶಿಕ್ಷಣ ಸಚಿವರ ಮನೆಗೆ ಗೃಹಸಚಿವ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಗಾಗಲೇ ಸಚಿವರ ಮನೆ ಮೇಲೆ ದಾಳಿ ಮಾಡಲು ಯತ್ನಸಿದವರನ್ನು ಬಂಧಿಸಲಾಗಿದೆ. ಅಜಾತಶತ್ರು ಬಿ.ಸಿ.ನಾಗೇಶ್ ರವರಿಗೆ ಯಾರು ಶತ್ರುಗಳಿಲ್ಲ ಎಂದು ಭಾವಿಸಿ ಪಕ್ಷದ ತತ್ವ ಮತ್ತು ಸಿದ್ಧಾಂತಕ್ಕೆ ತಲೆಬಾಗಿ ಸಾಮಾನ್ಯ ಕಾರ್ಯಕರ್ತರಂತೆ ರಾಜಕೀಯವೇ ಸೇವೆ ಮಾಡುತ್ತಿದ್ದವರನ್ನು, ಸಹಿಸದ ಕೆಲ ಕಿಡಿಗೇಡಿ ಸಂಘಟನೆಗಳ ಹೇಯ ಕೃತ್ಯವಾಗಿದೆ.

ಈ ಘಟನೆಗೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧಿಗಳ ಸಾಲೇ ಸೃಷ್ಟಿಯಾಗಿದೆ..! ಕಾಂಗ್ರೆಸ್, ಜೆಡಿಎಸ್ ನಾಯಕರು ಮಾತಿನ ಸಮರವನ್ನೇ ಸಾರಿದ್ದಾರೆ. ಸಾಹಿತಿಗಳು, ಪ್ರಗತಿಪರಚಿಂತಕರು, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ನಾಯಕರು, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸ್ವಾಮೀಜಿಗಳೂ ಕೂಡ ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ ಅದರಲ್ಲಿನ ಲೋಪಗಳ ವಿರುದ್ಧ ದನಿ ಎತ್ತಿದ್ದಾರೆ. ಹಂಪಾ ನಾಗರಾಜಯ್ಯ ಅವರು ಕುವೆಂಪು ಪ್ರತಿಷ್ಠಾನಕ್ಕೆ ರಾಜೀನಾಮೆ ನೀಡಿದ್ರೆ, ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನಕ್ಕೆ ಪ್ರೊ.ಎಸ್.ಜಿ.ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ.

ಹಿಜಾಬ್, ಹಲಾಲ್, ಆಜಾನ್ ಹೀಗೆ ಸಾಲು ಸಾಲು ವಿವಾದಗಳನ್ನು ಕಂಡ ಕರ್ನಾಟಕದ ಜನತೆ, ಇದೀಗ ಪಠ್ಯ ಪುಸ್ತಕ ಜಟಾಪಟಿಗೆ ಸಾಕ್ಷಿಯಾಗುತ್ತಿದ್ದಾರೆ. ಹಿಂದೂ-ಮುಸ್ಲಿಂ ಧಾರ್ಮಿಕ ಭಾವೈಕ್ಯತೆಗೆ ಧರ್ಮ ದಂಗಲ್ ನೀಮದ ಧಕ್ಕೆ ಆಗಬಹುದು ಎಂಬ ಭೀತಿಯ ನಡುವಲ್ಲೇ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದವು ಶಾಲೆಗೆ ಹೋಗುವ ಎಳೆಯ ಮನಸುಗಳ ಮೇಲೆ ಇನ್ಯಾವ ಪರಿಣಾಮ ಬೀರಬಹುದು ಎಂಬ ಆತಂಕವೂ ಎದುರಾಗಿದೆ. ಈ ವಿವಾದದ ಮೂಲಕೇಂದ್ರ ರೋಹಿತ್ ಚಕ್ರತೀರ್ಥ ಸಾರಥ್ಯದ ಕನ್ನಡ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ.

(ಒನ್ಇಂಡಿಯಾ ಸುದ್ದಿ)

English summary
People have right to register protest through lawful ways instead of breaking law, said Ex CM Jagadish Shettar while condemning the incident of attack on Minister BC Nagesh's residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X