ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿ.ಎಸ್.ಚನ್ನಬಸಪ್ಪ ಅಂಡ್‌ ಸನ್ಸ್‌ ಮಳಿಗೆ ಮೇಲೆ ಐಟಿ ದಾಳಿ

|
Google Oneindia Kannada News

Recommended Video

ದಾವಣಗೆರೆಯ ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಮಳಿಗೆ ಮೇಲೆ ಐ ಟಿ ದಾಳಿ | Oneindia Kannada

ದಾವಣಗೆರೆ, ಮಾರ್ಚ್ 14 : ರಾಜ್ಯದ ಪ್ರಸಿದ್ಧ ಬಿ.ಎಸ್.ಚನ್ನಬಸಪ್ಪ ಅಂಡ್‌ ಸನ್ಸ್‌ನ 6 ಜವಳಿ ಅಂಗಡಿ ಹಾಗೂ ಮಾಲೀಕರ 2 ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬುಧವಾರ ಹಳೆ ದಾವಣಗೆರೆ ನಗರದ 3 ಅಂಗಡಿ ಹಾಗೂ ಡೆಂಟಲ್ ಕಾಲೇಜ್ ರಸ್ತೆಯಲ್ಲಿ ಇರುವ ಅಂಗಡಿ ಮತ್ತು ಎ.ವಿ.ಕೆ.ಕಾಲೇಜ್‌ ರಸ್ತೆಯಲ್ಲಿ ಇರುವ 2 ಅಂಗಡಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ನಗರದ ಎಂಸಿಸಿಎ ಬ್ಲಾಕ್ ಮತ್ತು ಶಾಮನೂರು ರಸ್ತೆಯಲ್ಲಿರುವ ಮನೆಗಳ ಮೇಲೆಯೂ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸಮರ್ಪಕ ತೆರಿಗೆ ಪಾವತಿಸಿದ ಬಗ್ಗೆ ದಾಖಲೆ ನೀಡುವಂತೆ ಮಾಲೀಕರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

IT raid on BS Channabasappa and sons shop Davanagere

ಬಿ.ಎಸ್.ಚನ್ನಬಸಪ್ಪ ಅಂಡ್‌ ಸನ್ಸ್‌ನ ರಾಜ್ಯದ ಪ್ರಖ್ಯಾತ ಜವಳಿ ಉದ್ಯಮ. ಬಿ.ಸಿ ಶಿವಕುಮಾರ್ ಮತ್ತು ಬಿ.ಎಸ್ ಉಮಾಪತಿ ಅವರು ಬಿ.ಎಸ್ ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಮಳಿಗೆಗಳ ಮಾಲೀಕರು.

ಕಳೆದ ಎರಡು ತಿಂಗಳಿಂದ ದಾವಣಗೆರೆಯಲ್ಲಿ ಹಲವು ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ ನಡೆಯುತ್ತಲೆ ಇದೆ. ಇಂದು ಬಿ.ಎಸ್.ಚನ್ನಬಸಪ್ಪ ಜವಳಿ ಅಂಗಡಿ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರು ಹಾಗೂ ದಾವಣಗೆರೆಯ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

English summary
On Wednesday, March 14, 2018 Income Tax officials conducted search operations at B.S. Channabasappa and sons shop at Davanagere, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X