ಸಾರ್ವಜನಿಕರಿಗೆ ದಾವಣಗೆರೆಯ ಗ್ಲಾಸ್ ಹೌಸ್ ಬಂದ್
ದಾವಣಗೆರೆ, ಮಾರ್ಚ್ 14: ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್ ಈಗ ಮಧ್ಯ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಮೇಲೂ ಪರಿಣಾಮ ಬೀರಿದೆ. ರಾಜ್ಯ ಸರ್ಕಾರ ಹೊರಡಿಸಿದ ಕೊರೊನಾ ಎಮರ್ಜೆನ್ಸಿಯಿಂದ ದಾವಣಗೆರೆಯ ಗಾಜಿನ ಮನೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿದೆ.
ಒಂದು ವಾರಗಳ ಕಾಲ ಸಾರ್ವಜನಿಕ ಸಭೆ ಸಮಾರಂಭ, ಮದುವೆ, ಪಬ್ ಗಳು, ಶಾಲಾ ಕಾಲೇಜುಗಳು ಹಾಗೂ ಸಾರ್ವಜನಿಕರ ಅತಿ ಹೆಚ್ಚು ಸೇರುವ ಸ್ಥಳಗಳನ್ನು ಸಂಪೂರ್ಣ ಬಂದ್ ಮಾಡು ಆದೇಶ ನೀಡಿರುವುದರಿಂದ ಏಷ್ಯಾದ ಎರಡನೇ ಅತಿ ದೊಡ್ಡ ಗಾಜಿನ ಮನೆ ಬಣಗುಡುತ್ತಿದೆ. ಇಲ್ಲಿಗೆ ರಜಾ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು.

ಆದರೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಿಂದಾಗಿ ಇಂದಿನಿಂದ ಗಾಜಿನ ಮನೆಗೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ ಮುಂದಿನ ಆದೇಶದ ವರೆಗೂ ಸಂಪೂರ್ಣ ಬಂದ್ ಆಗಿರಲಿದೆ. ಇದರಿಂದ ರಜೆ ಸಮಯದಲ್ಲಿ ದಾವಣಗೆರೆಯ ಜನತೆ ಇದ್ದಂತಹ ಒಂದೇ ಒಂದು ಪ್ರವಾಸಿ ತಾಣವೂ ಈಗ ಬಂದ್ ಆದಂತಾಗಿದೆ. ಕೊರೊನಾ ವೈರಸ್ ನ ಬಿಸಿ ದಾವಣಗೆರೆಯ ಜನತೆ ಮೇಲೂ ಪರಿಣಾಮ ಬೀರಿದೆ.












Click it and Unblock the Notifications