India
 • search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸಬೇಕಾದದ್ದು ಹೇಗೆ? ದಾವಣಗೆರೆ ಎಸ್‌ಪಿ ರಿಷ್ಯಂತ್‌ ಸಲಹೆಗಳು..

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಆಗಸ್ಟ್‌, 05: ಕಳೆದ ನಾಲ್ಕೈದು ವರ್ಷಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಹೆಚ್ಚಾಗುತ್ತಿದೆ ಆದ್ದರಿಂದ ಜನರು ಹುಷಾರಾಗಿರಬೇಕು ಎಂದು ದಾವಣಗೆರೆ ಎಸ್‌ಪಿ ಸೂಚನೆ ನೀಡಿದರು. ಮೋಸ ಹೋಗುತ್ತಿರುವವರಲ್ಲಿ ಹೆಚ್ಚಾಗಿ ವಿದ್ಯಾವಂತರೇ ಇದ್ದಾರೆ. ವಂಚನೆ ಮಾಡಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರೆ ಆದಷ್ಟು ಬೇಗ ಆರೋಪಿಗಳನ್ನು ವಶಪಡಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ದಾವಣಗೆರೆ ಎಸ್‌ಪಿ ಸಿ.ಬಿ. ರಿಷ್ಯಂತ್ ತಿಳಿಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, 2018ರಲ್ಲಿ ಒಟ್ಟು 10 ಸೈಬರ್ ಕ್ರೈಂ ಕೇಸ್ ದಾಖಲಾಗಿದ್ದರೆ, 9 ಕೇಸ್‌ಗಳು ಡಿಟೆಕ್ಟ್ ಆಗಿವೆ. 2019ರಲ್ಲಿ 25 ಪ್ರಕರಣಗಳು ಡಿಟೆಕ್ಟ್‌ ಆಗಿವೆ, 2020ರಲ್ಲಿ 59 ರಲ್ಲಿ 31 ಪ್ರಕರಣ ಡಿಟೆಕ್ಟ್‌ ಆಗಿವೆ, 2021ರಲ್ಲಿ 66 ಕೇಸ್‌ಗಳಲ್ಲಿ 44 ಡಿಟೆಕ್ಟ್‌ ಆಗಿವೆ ಹಾಗೂ 2022ರ ಜುಲೈ ಅಂತ್ಯದವರೆಗೆ 48 ಕೇಸ್‌ಗಳ ಪೈಕಿ 23 ಪ್ರಕರಣಗಳು ಡಿಟೆಕ್ಟ್ ಆಗಿವೆ. ಈ ವರ್ಷ ಸೈಬರ್ ಕ್ರೈಂ ಪ್ರಕರಣಗಳು ನೂರು ದಾಟಿದರೂ ಆಶ್ಚರ್ಯಪಡಬೇಕಿಲ್ಲ ಎಂದು ಹೇಳಿದರು. ಬ್ಯಾಂಕ್ ಅಧಿಕಾರಿಗಳೆಂದು ಯಾರಾದರೂ ಕರೆ ಮಾಡಿದರೆ ಅಕೌಂಟ್ ಮಾಹಿತಿ ನೀಡಬೇಡಿ. ಮೊಬೈಲ್‌ಗೆ ಅಪರಿಚಿತರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಬೇಡಿ. ಲಿಂಕ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಯಾರೊಂದಿಗೂ
ಹಂಚಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

 'ಎಟಿಎಂ ಬಳಿ ಅಪರಿಚಿತರ ನೆರವು ಪಡೆಯಬೇಡಿ'

'ಎಟಿಎಂ ಬಳಿ ಅಪರಿಚಿತರ ನೆರವು ಪಡೆಯಬೇಡಿ'

ಫೋನ್ ಮೂಲಕ ಅಕೌಂಡ್ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ ಹಂಚಿಕೊಳ್ಳಬೇಡಿ. ಎಟಿಎಂ ಯಂತ್ರಗಳಲ್ಲಿ ಡೆಬಿಟ್ ಕಾರ್ಡ್ ಅನ್ನು ಬಳಸುವಾಗ ಎಚ್ಚರದಿಂದಿರಿ. ಪಿನ್ ಕೋಡ್ ನಂಬರ್ ನಮೂದಿಸುವಾಗ ಯಾರೂ ಅಪರಿಚಿತರು ವೀಕ್ಷಿಸದಂತೆ ಕೀ ಪ್ಯಾಡ್ ಅನ್ನು ಬಳಸಿ. ಯಾವುದೇ ಕಾರಣಕ್ಕೂ ಅಪರಿಚಿತರ ನೆರವು ಪಡೆಯಲು ಹೋಗಬೇಡಿ ಎಂದು ಸಲಹೆ ನೀಡಿದರು.

 ಸೈಬರ್‌ ಕ್ರೈಂ ವಂಚನೆ ನಡೆಯುವುದಾದರೂ ಹೇಗೆ?

ಸೈಬರ್‌ ಕ್ರೈಂ ವಂಚನೆ ನಡೆಯುವುದಾದರೂ ಹೇಗೆ?

ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳ ಜೊತೆ ಸ್ನೇಹ ಬೆಳೆಸಬೇಡಿ. ಹಾಗೂ ವೈಯಕ್ತಿಕ ವಿವರ, ಫೋನ್ ನಂಬರ್, ಆಧಾರ್ ನಂಬರ್, ಫೋಟೋಗಳನ್ನು ಅಪ್‌ಲೋಡ್ ಮಾಡುವಾಗ ಎಚ್ಚರವಹಿಸಿ. ಕೆಲ ಕಿಡಿಗೇಡಿಗಳು ದುರುದ್ದೇಶದಿಂದ ಸ್ನೇಹಿತರ, ಪರಿಚಯಸ್ತರ ಸೋಗಿನಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ ತೊಂದರೆ ನೀಡುವುದು, ಅನಾರೋಗ್ಯದ ನೆಪ ಹೇಳಿ ಹಣ ಕೀಳುವುದು ಹಾಗೂ ಬೆದರಿಕೆ ಹಾಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಫೇಸ್‌ಬುಕ್, ವ್ಯಾಟ್ಸಪ್ ವಿಡಿಯೋ ಕಾಲ್ ಮಾಡುವ ಮೂಲಕ ನಿಮ್ಮೊಂದಿಗೆ ಅಶ್ಲೀಲ ವಿಡಿಯೋ ಮಾಡಿ ನಂತರ ಆ ವಿಡಿಯೋ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಈ ಬಗ್ಗೆ ಎಚ್ಚರದಿಂದ ಇರುವುದು ನಿಮಗೆ ಒಳ್ಳೆಯದು ಎಂದು ಸಲಹೆ ನೀಡಿದರು.

 ಚೈನ್‌ಲಿಂಕ್‌ ಕಂಪನಿಗಳ ಅಸಲಿ ಸತ್ಯ

ಚೈನ್‌ಲಿಂಕ್‌ ಕಂಪನಿಗಳ ಅಸಲಿ ಸತ್ಯ

ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ, ಉದ್ಯೋಗ ಕೊಡಿಸುವುದಾಗಿ ಹೇಳಿ, ಬಹುಮಾನ, ಲಾಟರಿ, ಗಿಫ್ಟ್ ಬಂದಿದೆ ಎಂದು ಹೇಳಿಕೊಂಡು ವಂಚನೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ಒಎಲ್‌ಎಕ್ಸ್‌ನಲ್ಲಿ ತಾನು ಮಿಲಿಟರಿ ಅಧಿಕಾರಿ ಎಂದು ಹೇಳಿ ಕಡಿಮೆ ದರದಲ್ಲಿ ವಾಹನ ನೀಡುತ್ತೇನೆ ಎಂದು ನಂಬಿಸಿ ಹಣಪಡೆದ ಬಳಿಕ ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. 2020 ಬಿಲಿಯನ್, ಜಸ್ಟ್ಇನ್ ಡೀಲ್ ಗೇಮ್ಸ್, ಸೇರಿದಂತೆ ಇತರೆ ಕಂಪನಿಗಳ ಹೆಸರಿನಲ್ಲಿ ಹಣ ಹೆಚ್ಚಿಸುವುದಾಗಿ ಆಮಿಷವನ್ನು ಒಡ್ಡುತ್ತಾರೆ. ಚೈನ್ ಲಿಂಕ್ ಕಂಪನಿಗಳ ಬಗ್ಗೆಯೂ ಎಚ್ಚರವಹಿಸಿ. ಇವರು ಮೊದಲಿಗೆ ಹಣ ಪಡೆದು ನಂತರ ಪರಾರಿಯಾಗಿರುವ ಉದಾಹರಣೆಗಳು ಇವೆ. ಆದ್ದರಿಂದ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಮನವಿ ಮಾಡಿದರು.

 'ಕೂಡಲೇ ಪೊಲೀಸ್‌ ಸಂಖ್ಯೆಗೆ ಕರೆ ಮಾಡಿ'

'ಕೂಡಲೇ ಪೊಲೀಸ್‌ ಸಂಖ್ಯೆಗೆ ಕರೆ ಮಾಡಿ'

ಸೈಬರ್ ಅಪರಾಧದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ವಂಚನೆ ಆದರೆ ಕೂಡಲೆ 112 ಪೊಲೀಸ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ. ಅಥವಾ ಘಟನೆ ನಡೆದ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಹಣ ಕಳೆದುಕೊಳ್ಳುವುದನ್ನು ತಪ್ಪಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿ ಆರ್. ಬಿ. ಬಸರಗಿ, ಡಿಸಿಆರ್ ಬಿ ಘಟಕದ ಡಿವೈಎಸ್‌ಪಿ ಬಸವರಾಜ್ ಮತ್ತಿತರರು ಹಾಜರಿದ್ದರು.

   ಏಷ್ಯಾ ಕಪ್ ನಲ್ಲಿ ದಿನೇಶ್ ಕಾರ್ತಿಕ್ ಗೆ ಸಿಕ್ತು ಚಾನ್ಸ್:ಆದ್ರೆ ಇವರಿಬ್ಬರಿಗೆ ಆ ಅದೃಷ್ಟ ಮಿಸ್ | Oneindia Kannada
   English summary
   Cybercrime been on rise in last four to five years. Davangere SP advised fraud is increasing on social media so people should be careful. know more,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X