ದಾವಣಗೆರೆಯ ಸೋಂಕಿತ ಸ್ಟಾಫ್ ನರ್ಸ್ ಗುಣಮುಖ
ದಾವಣಗೆರೆ, ಮೇ 23: ದಾವಣಗೆರೆಯ ರೋಗಿ ನಂಬರ್ 533 ಸೋಂಕಿತ ಸ್ಟಾಫ್ ನರ್ಸ್ ಗುಣಮುಖವಾಗಿದ್ದಾರೆ. ಚಿಕಿತ್ಸೆಯ ಬಳಿಯ ನೆಗೆಟಿವ್ ವರದಿ ಬಂದಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
Recommended Video
ಸ್ಟಾಫ್ ನರ್ಸ್ ನಿಂದ 42 ಜನರಿಗೆ ಸೋಂಕು ತಗುಲಿತ್ತು. ಈಗ ನರ್ಸ್ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸ್ಟಾಪ್ ನರ್ಸ್ ಸೇರಿ ಏಳು ಸೋಂಕಿತರು ಗುಣಮುಖರಾಗಿದ್ದಾರೆ.
ರೋಗಿ ಸಂಖ್ಯೆ 533, 582, 660, 661, 665, 666, 696 ಸೋಂಕಿತರು ಬಿಡುಗಡೆಯಾಗಿದ್ದಾರೆ. ಕೊರೊನಾವನ್ನು ಗೆದ್ದು ಬಂದ ರೋಗಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಿದ್ದಾರೆ.

ದಾವಣಗೆರೆಯ ಜಿಲ್ಲಾಸ್ಪತ್ರೆಯಿಂದ ಎರಡು ದಿನಗಳಿಂದ ನಿರಂತರವಾಗಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಇದೊಂದು ಸಮಾಧಾನದ ಸಂಗತಿಯಾಗಿದೆ. ಜಿಲ್ಲೆಯಲ್ಲಿ 7 ಜನ ಸೇರಿ 21 ಜನ ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ವೈರಸ್ ಆತಂಕದ ನಡುವೆಯೂ ಸೋಂಕಿತರು ಗುಣಮುಖರಾಗುತ್ತಿದ್ದಾರೆ.
ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆ ಕಂಡಿದೆ. 41 ಮಂದಿ ಮೃತರಾಗಿದ್ದಾರೆ. ನಿನ್ನೆ 138 ಹೊಸ ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. ದಾವಣಗೆರೆಯಲ್ಲಿ ಸೋಂಕಿತ ಸಂಖ್ಯೆ 118ಕ್ಕೆ ಬಂದಿದೆ. 4 ಜನರು ಮರಣ ಹೊಂದಿದ್ದಾರೆ.












Click it and Unblock the Notifications