ದಾವಣಗೆರೆಯ 3 ಕೊರೊನಾ ಸೋಂಕಿತರು ಗುಣಮುಖ: ಡಿಸಿ
ದಾವಣಗೆರೆ, ಏಪ್ರಿಲ್ 08: ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತ ಮೂವರು ಗುಣಮುಖರಾಗಿದ್ದು, ಮೊನ್ನೆಯಷ್ಟೇ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು, ಬುಧವಾರ ಮತ್ತೋರ್ವನನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಸೋಂಕು ಇರುವ ಮೂರು ಪ್ರಕರಣಗಳ ಮಾದರಿ ಸಂಗ್ರಹಿಸಿ ಎರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮೂರು ಪಾಸಿಟಿವ್ ಇದ್ದ ಪ್ರಕರಣಗಳು ನೆಗಟಿವ್ ಎಂಬ ವರದಿ ಬಂದಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸೋಂಕು ದೃಢಪಟ್ಟಿದ್ದ ಓರ್ವ ಮಹಿಳೆ ಹಾಗೂ ಅಮೆರಿಕದಿಂದ ಬಂದಿದ್ದ ಓರ್ವ ಯುವಕ ಗುಣಮುಖರಾದ ಹಿನ್ನೆಲೆ, ಮೊನ್ನೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಅದೇ ರೀತಿ ಫ್ರಾನ್ಸ್ ನಿಂದ ಬಂದಿದ್ದ ಯುವಕನಿಗೆ ಕೊರೊನಾ ಸೋಂಕು ಇದ್ದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆತನ ವರದಿಯೂ ಈಗ ನೆಗಟಿವ್ ಬಂದಿದ್ದು, ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಮೂರು ಕೊರೊನಾ ಸೋಂಕು ಪೀಡಿತರು ಗುಣಮುಖರಾಗಿದ್ದಾರೆ. ಹೀಗೆ ನೆಗಟಿವ್ ವರದಿ ಬಂದ ಬಳಿಕ ಮೈಮರೆತರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನಷ್ಟು ಜಾಗೃತರಾಗುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಹೇಳಿದರು.











Click it and Unblock the Notifications